Top

ವಿಂಡೀಸ್ ತಿರುಗೇಟು: ಭಾರತಕ್ಕೆ ಅಲ್ಪ ಮುನ್ನಡೆ

ವಿಂಡೀಸ್ ತಿರುಗೇಟು: ಭಾರತಕ್ಕೆ ಅಲ್ಪ ಮುನ್ನಡೆ
X

ವೆಸ್ಟ್ ಇಂಡೀಸ್ ಬೌಲರ್​ಗಳು ತಿರುಗೇಟು ನೀಡಿದ್ದರಿಂದ ಮಧ್ಯಮ ಕ್ರಮಾಂಕದ ರಿಷಭ್ ಪಂತ್ ಮತ್ತು ಅಜಿಂಕ್ಯ ರಹಾನೆ ಶತಕ ವಂಚಿತರಾದರು. ಇದರಿಂದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಅಲ್ಪ ಮುನ್ನಡೆಗೆ ಸಮಾಧಾನಪಡಬೇಕಾಯಿತು.

ಹೈದರಾಬಾದ್​ನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಭಾನುವಾರ 4 ವಿಕೆಟ್​ಗೆ 308 ರನ್​ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ 367 ರನ್​ಗಳಿಗೆ ಆಲೌಟಾಯಿತು. ಭಾರತ ಮೊದಲ ಇನಿಂಗ್ಸ್ ನಲ್ಲಿ 56 ರನ್​ಗಳ ಅಲ್ಪ ಮುನ್ನಡೆ ಗಳಿಸಿದೆ.

ನಿನ್ನೆ ಅರ್ಧಶತಕ ಗಳಿಸಿ ಶತಕದತ್ತ ದಾಪುಗಾರಿಸಿದ್ದ ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಅಜಿಂಕ್ಯ ರಹಾನೆ ಶತಕ ಪೂರೈಸುವಲ್ಲಿ ವಿಫಲರಾದರು. ತಿರುಗೇಟು ನೀಡಿದ ವೆಸ್ಟ್ ಇಂಡೀಸ್ ಬೌಲರ್​ಗಳು ಈ ಇಬ್ಬರನ್ನು ಬೇಗನೇ ಆಲೌಟ್ ಮಾಡಿದ್ದರಿಂದ ತಂಡ ಬೃಹತ್ ಮುನ್ನಡೆಯ ಕನಸಿಗೆ ಹಿನ್ನಡೆ ಉಂಟಾಯಿತು.

ರಿಷಭ್ ಪಂತ್ 134 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ 92 ರನ್ ಗಳಿಸಿದ್ದಾಗ ಗ್ಯಾಬ್ರಿಯೆಲ್​ಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ರಿಷಭ್ 2ನೇ ಬಾರಿ ಶತಕದ ಹೊಸ್ತಿಲಲ್ಲಿ ವಿಕೆಟ್ ಒಪ್ಪಿಸಿದಂತಾಯಿತು.

ರಹಾನೆ 183 ಎಸೆತಗಳಲ್ಲಿ 7 ಬೌಂಡರಿ ಒಳಗೊಂಡ 80 ರನ್ ಬಾರಿಸಿದ್ದಾಗ ಹೋಲ್ಡರ್ ಗೆ ಬಲಿಯಾದರು. ಇದಕ್ಕೂ ಮುನ್ನ ರಿಷಭ್ ಜೊತೆ 5ನೇ ವಿಕೆಟ್​ಗೆ 152 ರನ್​ ಜೊತೆಯಾಟ ನಿಭಾಯಿಸಿದರು.

  • ಸಂಕ್ಷಿಪ್ತ ಸ್ಕೋರ್
  • ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 331
  • ಭಾರತ ಮೊದಲ ಇನಿಂಗ್ಸ್ 367 (ರಿಷಭ್ 92, ರಹಾನೆ 80, ಅಶ್ವಿನ್ 35, ಹೋಲ್ಡರ್ 65/5, ಗ್ಯಾಬ್ರಿಯೆಲ್ 107/3) .

Next Story

RELATED STORIES