Top

ಯಡಿಯೂರಪ್ಪ ಸಿಎಂ ಆಗೋದು 100ರಷ್ಟು ಸತ್ಯ : ಕೆ.ಎಸ್ ಈಶ್ವರಪ್ಪ

ಯಡಿಯೂರಪ್ಪ ಸಿಎಂ ಆಗೋದು 100ರಷ್ಟು ಸತ್ಯ : ಕೆ.ಎಸ್ ಈಶ್ವರಪ್ಪ
X

ಸಿ ಎಂ ಕುಮಾರಸ್ವಾಮಿ ಎಡಬಿಡಂಗಿ ರಾಜಕಾರಣಿ. ರೈತರ ಸಾಲಮನ್ನಾ ಬಗ್ಗೆ ಏನೇನೋ ಹೇಳುತ್ತ ಬರುತ್ತಿದ್ದಾರೆ ಎಂದು ಕೆ.ಎಸ್ ಈಶ್ವರಪ್ಪ ಹಾವೇರಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಅವರು, ಕಳೆದ ಭಾರೀ ದಸರಾ ಪೂಜೆ ನಾನೇ ಮಾಡ್ತೀನಿ ಅಂತ ಸಿದ್ದರಾಮಯ್ಯ ಹೇಳಿದ್ದರು. ಆದರೇ ಈಗ ದಸರಾ ತುಂಬಾ ಜೆಡಿಎಸ್ ಶಾಸಕರೇ ತುಂಬಿಕೊಂಡಿದ್ದಾರೆ. ಸಿದ್ದರಾಮಯ್ಯ ಎಲ್ಲಿದ್ದಾರೋ ಗೊತ್ತಿಲ್ಲ.. ಸಿಎಂ ಸಾಹೇಬ್ರೇ ಅವರನ್ನು ಹುಡುಕಿಕೊಡಿ ಅನ್ನೋ ಮೂಲಕ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಎಸ್ ವೈ ರಾಘವೆಂದ್ರ ಗೆಲುವುದು ಖಚಿತ. ಏಕೆಂದರೆ ಕಾಂಗ್ರೆಸ್ ಪಕ್ಷದವರಿಗೆ ವಯಸ್ಸಾಗಿದೆ. ಜೆಡಿಎಸ್‌ನವರು ಮಧು ಬಂಗಾರಪ್ಪ ಅಭ್ಯರ್ಥಿ ಅಂತ ಹೇಳ್ತಿದ್ದಾರೆ. ಆದ್ರೆ ಅವರು ಇನ್ನು ವಿದೇಶದಲ್ಲಿದ್ದಾರೆ.

ಇನ್ನೆರಡು ತಿಂಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ. ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರೋದು ಖಚಿತ. ಯಡಿಯೂರಪ್ಪ ಸಿಎಂ ಆಗೋದು 100ಕ್ಕೆ ನೂರರಷ್ಟು ಸತ್ಯ ಎಂದು ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

Next Story

RELATED STORIES