Top

ಬಿಸಿಸಿಐ ಸಿಇಒ ಮೇಲೂ ಲೈಂಗಿಕ ದೌರ್ಜನ್ಯ ಆರೋಪ

ಬಿಸಿಸಿಐ ಸಿಇಒ ಮೇಲೂ ಲೈಂಗಿಕ  ದೌರ್ಜನ್ಯ ಆರೋಪ
X

ಮಹಿಳೆಯರ ವಿರುದ್ಧ ಲೈಂಗಿಕ ದುರ್ವರ್ತನೆ ತೋರಿದ ಕೆಲವು ಸಿನಿಮಾ ಮತ್ತು ಎಂಟರ್​ಟೈನ್​ಮೆಂಟ್​ನ ಖ್ಯಾತ ನಾಮರನ್ನ ಮೀ ಟೂ ಚಳುವಳಿ ಗಲಿಬಿಲಿಗೊಳಿಸಿದೆ. ಈ ರಕ್ಕಸ ಚಳುವಳಿ ಕ್ರಿಕೆಟನ್ನು ಬಿಟ್ಟಿಲ್ಲ. ಮೀ ಟೂ ಚಳುವಳಿ ಇದೀಗ ಬಿಸಿಸಿಐನ ಸಿಇಒ ರಾಹುಲ್ ಜೊಹ್ರಿ ಅವರ ಕೊರಳನ್ನ ಸುತ್ತಿಕೊಂಡಿದೆ.

ಮೊನ್ನೆಯಷ್ಟೆ ಶ್ರೀಲಂಕಾ ಕ್ರಿಕೆಟ್​ ದಂತ ಕತೆ ಹಾಗೂ ಮಾಜಿ ನಾಯಕ ಅರ್ಜುನ್ ರಣತುಂಗಾ ಮೇಲೆ ಲೈಂಗಿ ದೌರ್ಜನ್ಯ ಆರೋಪ ಕೇಳಿ ಬಂದಿತ್ತು. ಕ್ರಿಕೆಟ್​ ಅಭಿಮಾನಿಗಳು ಇದನ್ನ ಅರಗಿಸಿಕೊಳ್ಳುತ್ತಿರುವಾಗಲೆ ಲಂಕಾದ ಯಾರ್ಕರ್ ಸ್ಪೆಶಲಿಸ್ಟ್ ಲಸಿತ್​ ಮಲಿಂಗಾ ಮೇಲೂ ಲೈಂಗಿ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು.

ಮೀ ಟೂ ಚಳುವಳಿ ಭಾರತ ಕ್ರಿಕೆಟನ್ನು ಆವರಿಸಿದೆ. ಅದು ಬಿಸಿಸಿಐನ ಕ್ರಿಕೆಟ್ ಆಡಳಿತ ಮಂಡಳಿಯ ಸಿಇಒ ಅವರ ಮೇಲೆ ಅನ್ನೊದೇ ಶಾಕಿಂಗ್ ವಿಷಯವಾಗಿದೆ. ಸೋಶಿಯಲ್ ಮೀಡಿಯಾ ಟ್ವಿಟರ್ ನ ಅಕೌಂಟ್ ನಿಂದ ಮಹಿಳೆಯೊಬ್ಬರು ತನ್ನ ಮೇಲೆ ಲೈಂಗಿಕ ದರ್ಜನ್ಯ ನಡೆಸಿದ್ದರು ಎಂದು ಮಹಿಳೆ ತನ್ನ ಹಸರು ಹೇಳದೇ ಟ್ವೀಟ್ ಮಾಡಿದ್ದಾರೆ.

2016ರಲ್ಲಿ ರಾಹುಲ್​ ಜೊಹ್ರಿ ಸಿಇಒ ಆಗುವ ಮುನ್ನ ಡಿಸ್ಕವರಿ ನೆಟ್​ವರ್ಕ್ ಏಷ್ಯಾ ಪೆಸಿಫಕ್ ಸಂಸ್ಥೆಯಲ್ಲಿ ಕಾರ್ಯನಿರ್ವಹಾಕರಾಗಿ ಕೆಲಸ ಮಾಡಿದ್ದರು.

Next Story

RELATED STORIES