Top

ಒಂದೇ ಸಿನಿಮಾದಲ್ಲಿ ಶಿವರಾಜ್‌ಕುಮಾರ್- ದರ್ಶನ್...!?

ಒಂದೇ ಸಿನಿಮಾದಲ್ಲಿ ಶಿವರಾಜ್‌ಕುಮಾರ್- ದರ್ಶನ್...!?
X

ಕಿಚ್ಚ ಸುದೀಪ್ ಹಾಗೂ ಶಿವಣ್ಣ , ದಿ ವಿಲನ್ ಚಿತ್ರದ ಮೂಲಕ ತೆರೆಯ ಮೇಲೆ ರಾರಾಜಿಸಲಿದ್ದಾರೆ. ಆದ್ರೆ ಶಿವಣ್ಣ ಮತ್ತು ದರ್ಶನ್ ಯಾವಾಗ ಒಟ್ಟಿಗೆ ಸಿಲ್ವರ್ ಸ್ಕ್ರೀನ್​​ನಲ್ಲಿ ಸ್ಟೆಪ್ ಹಾಕೋದು ಅನ್ನೋ ಪ್ರಶ್ನೆ ಸ್ವೀಟ್ ಹಾರ್ಟ್​ವುಳ್ಳ ಪ್ರೇಕ್ಷಕರಲ್ಲಿದೆ..! ಅದಕ್ಕೆ ಖಚಿತ ಉತ್ತರ ಇಲ್ಲಿದೆ ನೋಡಿ.

ಅಸಾಧ್ಯವಾದದನ್ನು ಸೃಷ್ಟಿಸುವುದೇ ಸಿನಿಮಾ. ಇನ್ನು ಇಬ್ಬರು ದಿಗ್ಗಜ ನಟರನ್ನು ಕ್ಯಾಮೆರಾ ಮುಂದೆ ನಿಲ್ಲಿಸೋದು ಯಾವ ಮಹಾ ಹೇಳಿ..!? ಒಂದು ಮನೆ ಮುಗಿಲೆತ್ತರ ನಿಲ್ಲೋದಕ್ಕೆ ಗಟ್ಟಿ ಅಡಿಪಾಯ ಬೇಕು. ಹಂಗೆ ಸಿನಿಮಾ ಸೆಟ್ಟೇರೋದಕ್ಕೆ ಸ್ಕ್ರಿಪ್ಟ್ ಸಿದ್ಧವಾಗಬೇಕು. ಆಮೇಲೆನೇ ಬಜೇಟು, ಸೆಟ್ಟು, ಸ್ಟಾರ್ ಕಾಸ್ಟು ಎಲ್ಲಾ ಒಂದುಗೂಡೋದು.

ಕರುನಾಡ ಚಕ್ರವರ್ತಿ , ಅಭಿನಯ ಚಕ್ರವರ್ತಿಗಳಿಬ್ಬರು ಒಂದಾಗೋದಕ್ಕೆ ಒಂದು ಸ್ಟ್ರಾಂಗ್ ಕಥೆಯನ್ನು ಹೇಣಿದ್ರು ಜೋಗಿ ಪ್ರೇಮ್​. ಆದ್ರೆ ಈ ಬಾಕ್ಸಾಫೀಸ್ ಚಕ್ರವರ್ತಿ ಮತ್ತು ಕರುನಾಡ ಚಕ್ರವರ್ತಿ ಮಗದೊಮ್ಮೆ ಒಂದಾಗೋದಕ್ಕೆ ಗಟ್ಟಿ ಲೈನ್​ವುಳ ಕಥೆ ಸಿದ್ಧವಾಗಬೇಕಿದೆ. ಆ ರೀತಿ ಕಥೆ ಹೆಣೆಯೋದ್ಯಾರು..? ಅನ್ನೋ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗೋದು ಆಕಾಶ್, ಅರಸು ಖ್ಯಾತಿಯ ಮಹೇಶ್ ಬಾಬು.

ಮಹೇಶ್ ಬಾಬು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಕೆಲಸ ಮಾಡಿದ್ದಾರೆ. ಶಿವಣ್ಣ ನಟನೆಯ ಪರಮೇಶಿ ಪಾನ್​​ವಾಲ ಚಿತ್ರವನ್ನು ನಿರ್ದೇಶನ ಮಾಡಿದ್ದು ಮಹೇಶ್ ಬಾಬುರವರೇ.

ಇನ್ನು ದರ್ಶನ್ ಲವ್ವರ್ ಬಾಯ್​ ಆಗಿ ಕಾಣಿಸಿಕೊಂಡಿದ್ದ ಅಭಯ್ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳಿದ್ದೇ ಮಹೇಶ್ ಬಾಬು. ದಚ್ಚು ಮತ್ತು ಶಿವಣ್ಣ ಈ ಇಬ್ಬರಿಗೂ ಮಹೇಶ್ ಬಾಬು ಏನು ಅನ್ನೋದು ಚೆನ್ನಾಗಿ ಗೊತ್ತು. ಮಹೇಶ್ ಬಾಬು ಒಳ್ಳೆಯ ಕಥೆ ಹೆಣೆದ್ರೆ ಖಂಡಿತ ಇಬ್ಬರು ಒಟ್ಟಿಗೆ ನಟಿಸೋದು ಕನ್ಫರ್ಮ್.

ಹದಿನೆಂಟು ವರ್ಷದ ಹಿಂದೆ ತೆರೆಕಂಡ ದೇವರ ಮಗ ಚಿತ್ರದಲ್ಲಿ ಶಿವಣ್ಣ ಮತ್ತು ದರ್ಶನ್ ಒಟ್ಟಿಗೆ ನಟಿಸಿದ್ರು. ಇದಾದ ಮೇಲೆ ಒಟ್ಟಿಗೆ ನಟಿಸಲೇ ಇಲ್ಲ.

ಅಷ್ಟಕ್ಕೂ ಮಹೇಶ್ ಬಾಬು ದಚ್ಚು ಮತ್ತು ಶಿವಣ್ಣನವರನ್ನು ಒಟ್ಟಿಗೆ ಸೇರಿಸುವ ಗಟ್ಟಿ ಕಥೆಯನ್ನು ಹೆಣೆದಿದ್ದಾರಾ..? ಯಾಕೆ ಈ ವಿಷಯ ಈಗ ಗಾಂಧಿನಗರದಲ್ಲಿ ಚರ್ಚೆ ಆಯ್ತು ಅನ್ನೋದಕ್ಕೆ ಸ್ವತಃ ಮಹೇಶ್ ಬಾಬುರವರೇ ಟಿವಿ5ಗೆ ಉತ್ತರಿಸಿದ್ದಾರೆ.

ಪ್ರೋಡ್ಯೂಸರ್ ಒಬ್ಬರ ಒತ್ತಾಯಕ್ಕೆ ಮಹೇಶ್ ಬಾಬು , ದರ್ಶನ್​​ರವರಿಗ ಕರೆ ಮಾಡಿ ಸಮ್ಮತಿ ಪಡೆದಿದ್ದಾರೆ. ಆದ್ರೆ ಕಥೆ ರೆಡಿಯಾಗ್ಬೇಕಲ್ಲ. ಒಂದು ಸಿನಿಮಾಕ್ಕೆ ನಿಜವಾದ ಹೀರೋನೆ ಸ್ಟೋರಿ. ಒಂದೊಳ್ಳೆ ಕಹಾನಿ ಸಿಕ್ರೆ ಖಂಡಿತ ಇಬ್ಬರು ಒಂದಾಗಿ ನಟಿಸೋದ್ರಲ್ಲಿ ನೋ ಡೌಟ್​..

ಆದಷ್ಟು ಬೇಗ ಸೂಕ್ತ ಕಥೆ ಸಿಗಲಿ.. ಶಿವಣ್ಣ ಮತ್ತು ದರ್ಶನ್ ಒಟ್ಟಿಗೆ ನಟಿಸಲಿ.. ನಮ್ಮ ಕನ್ನಡ ಸಿನಿಮಾಗಳು ದೊಡ್ಡ ಮಟ್ಟಕೆ ಸದ್ದು ಮಾಡಲಿ ಎಂದು ಹಾರೈಸುವ.

ಶ್ರೀಧರ್ ಶಿವಮೊಗ್ಗ _ ಎಂಟರ್​ಟೈನ್ಮೆಂಟ್ ಬ್ಯೂರೋ_TV5

Next Story

RELATED STORIES