Top

ರಕ್ಷಿತ್‌ ಶೆಟ್ಟಿ ನನ್ನ ಸಿನಿಮಾ ಗುರುವಲ್ಲ : ರಶ್ಮಿಕಾ ಮಂದಣ್ಣ

ಕಿರಿಕ್ ಪಾರ್ಟಿ ಸಿನಿಮಾದಿಂದ ಶುರುವಾದ ರಕ್ಷಿತ್- ರಶ್ಮಿಕಾ ಲವ್ವಿ-ಡವ್ವಿ, ಕೊನೆಗೂ ಕಿರಿಕ್​ನಲ್ಲೇ ಅಂತ್ಯವಾಗಿದ್ದು ಎಲ್ರಿಗೂ ಗೊತ್ತೇಯಿದೆ. ಅದ್ಧೂರಿಯಾಗಿ ಎಂಗೇಜ್ಮೆಂಟ್ ಮಾಡ್ಕೊಂಡ್ರೂ, ಚಿತ್ರರಂಗದ ಗಣ್ಯಾತಿಗಣ್ಯರು ಶುಭ ಹಾರೈಸಿದ್ರೂ, ಆ ಅರೆಬೆಂದ ಪ್ರೀತಿ ಮಾತ್ರ ಕೊನೆಗೆ ಫಲಿಸಲೇ ಇಲ್ಲ.

ಎರಡು ತಿಂಗಳಿಂದ ಹರಿದಾಡ್ತಿದ್ದ ಬ್ರೇಕಪ್​ ವದಂತಿಗೆ ಕೊನೆಗೂ ಬ್ರೇಕ್ ಹಾಕಿಯೇ ಬಿಟ್ರು ರಶ್ಮಿಕಾ. ನಮ್ಮಲ್ಲಿನ ಭಿನ್ನಾಭಿಪ್ರಾಯಗಳು ತಾರಕ್ಕಕೇರಿ, ಸಂಬಂಧ ಮುರಿದುಕೊಳ್ತಿದ್ದೀವಿ ಅನ್ನೋದನ್ನ ಬಹಿರಂಗವಾಗಿ ಹೇಳಿಯೇ ಬಿಟ್ರು. ಅಲ್ಲಿಗೆ ರಕ್ಷಿತ್ ಜೊತೆಗಿನ ಸಂಬಂಧ ಖೇಲ್ ಖತಂ ಅನ್ನೋದು ಪಕ್ಕಾ ಆಯ್ತು.

ಇದೆಲ್ಲಾ ಹಳೇ ಸುದ್ದಿ ಗುರೂ... ಹೊಸತೇನಿದೆ ಅಂತ ಗೊಣಗಬೇಡಿ. ರಶ್ಮಿಕಾನ ಚಿತ್ರರಂಗಕ್ಕೆ ತಂದಂತಹ ಅಸಲಿ ಗುರು, ಸಿನಿಮಾ ಕುರಿತು ಅಆಇಈ ಕಲಿಸಿದ ಮಾಸ್ಟರ್ ಮೈಂಡ್ ಹಾಗೂ ರಶ್ಮಿಕಾರ ಮೆಂಟರ್ ರಕ್ಷಿತ್ ಶೆಟ್ಟಿ ಅಂತ ಯಾರೆಲ್ಲಾ ಅಂತಿದ್ರೋ ಅವ್ರಿಗೆಲ್ಲಾ ಒಂದು ಬ್ರೇಕಿಂಗ್ ಕಹಾನಿ, ರಕ್ಷಿತ್ ಶೆಟ್ಟಿ ಮತ್ತವ್ರ ಫ್ಯಾನ್ಸ್​ಗೆ ಕೊಂಚ ಖಾರ ಅನಿಸಿದ್ರೂ ಅಡ್ಜೆಸ್ಟ್ ಮಾಡ್ಕೊಳ್ಳಲೇಬೇಕು.

ಕಿರಿಕ್ ಪಾರ್ಟಿ ಸಿನಿಮಾದಿಂದ ಕನ್ನಡ ಸಿನಿಪ್ರಿಯರ ಗಮನ ಸೆಳೆದ ರಶ್ಮಿಕಾ ಮಂದಣ್ಣ ಕರ್ನಾಟಕ ಕ್ರಶ್ ಅನಿಸಿಕೊಂಡ್ರು. ಸಾನ್ವಿಯಾಗಿ ಕರ್ಣ ಅಲಿಯಾಸ್ ರಕ್ಷಿತ್ ಜೊತೆ ರಶ್ಮಿಕಾ ಕಮಾಲ್ ಮಾಡಿದ್ರು. ರಶ್ಮಿಕಾ ಆಕ್ಟಿಂಗ್, ಹಾವ-ಭಾವ, ಸ್ಟೈಲು- ಮ್ಯಾನರಿಸಂ, ಡೈಲಾಗ್ ಡೆಲಿವರಿ ಹೀಗೆ ಪ್ರತಿಯೊಂದನ್ನೂ ಹಾಡಿ ಹೊಗಳಿದ್ರು ಸಿನಿಪ್ರಿಯರು.

ರಶ್ಮಿಕಾ ಏನೇ ಮಾಡಿದ್ರು, ಅದ್ರ ಹಿಂದಿರೋ ಅಸಲಿ ಮಾಸ್ಟರ್ ಮೈಂಡ್ ರಕ್ಷಿತ್ ಶೆಟ್ಟಿ ಎನ್ನಲಾಗಿತ್ತು. ಆದ್ರೆ ಕಿರಿಕ್ ಪಾರ್ಟಿಗೆ ರಶ್ಮಿಕಾ ಎಂಟ್ರಿ ಕೊಡೋಕ್ಕೂ ಮೊದಲೇ, ರಕ್ಷಿತ್ ಶೆಟ್ಟಿ ಪರಿಚಯ ಆಗೋಕ್ಕೂ ಮುನ್ನವೇ ಆಕ್ಟಿಂಗ್ ಕರಗತ ಮಾಡಿಕೊಂಡು ಬಣ್ಣ ಹಚ್ಚಿದ್ರು ಅನ್ನೋದು ಕರುನಾಡಿಗೆ ತಿಳಿದಿಲ್ಲ.

ಹೌದು... ನೇಮು ಫೇಮು ತಂದುಕೊಟ್ಟ ಕಿರಿಕ್ ಪಾರ್ಟಿ ರಶ್ಮಿಕಾರ ಮೊದಲ ಸಿನಿಮಾ ಅಲ್ಲ. ಅದಕ್ಕೂ ಮೊದಲೇ ಗೆಳೆಯರೇ ಗೆಳತಿಯರೇ ಅನ್ನೋ ಸಿನಿಮಾಗಾಗಿ ಬಣ್ಣ ಹಚ್ಚಿದ್ರು ರಶ್ಮಿಕಾ ಮಂದಣ್ಣ. 2015ರಲ್ಲಿ ಇನ್ನೋವೇಟೀವ್ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಮುಂದಾಗಿದ್ದ ಈ ಸಿನಿಮಾಗಾಗಿ ರಶ್ಮಿಕಾ ಆಡಿಷನ್ಸ್​ನಲ್ಲಿ ಸೆಲೆಕ್ಟ್ ಆಗಿದ್ರು.

ಸದ್ಯ ಸೌತ್ ಸಿನಿದುನಿಯಾದ ಸ್ಟಾರ್ ನಟೀಮಣಿಯಾಗಿ ಶೈನ್ ಆಗ್ತಿರೋ ಸೆನ್ಸೇಷನಲ್ ಬ್ಯೂಟಿ ರಶ್ಮಿಕಾ ಹಿಂದಿರೋ ಅಸಲಿ ಮಾಸ್ಟರ್ ಮೈಂಡ್ ಸಾಯಿಕೃಷ್ಣ. ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್​ರ ಮಗ ಸಾಯಿಕೃಷ್ಣ ಮೂಲತಹ ನಟ ಕಮ್ ನಿರ್ದೇಶಕ. ಅವ್ರು ಕ ಸಿನಿಮಾದ ನಂತ್ರ ಇನ್ನೋವೇಟೀವ್ ಫಿಲ್ಮ್ ಸಿಟಿ ನಿರ್ಮಾಣದಲ್ಲಿ ಸಿನಿಮಾ ಮಾಡಲು ಮುಂದಾಗಿದ್ರು. ಅದೇ ಗೆಳೆಯರೇ ಗೆಳತಿಯರೇ.

ಹೊಸಬರನ್ನ ಇಟ್ಟುಕೊಂಡು ಸಿನಿಮಾ ಮಾಡಿ ಗೆದ್ದಿದ್ದ ಸಾಯಿಕೃಷ್ಣಗೆ ಮತ್ತೆ ಅಂತಹದ್ದೇ ಹೊಸಬರ ತಂಡ ಕಟ್ಟಿ ಸಿನಿಮಾ ಮಾಡೋ ಕನಸು ಕಂಡರು. ಆಗ ರಶ್ಮಿಕಾ ಜೊತೆ ಪ್ರಶೋಭಿತ, ಪಾಯಲ್ ರಾಧಕೃಷ್ಣ, ಸಯೇಶ್, ರಘುರಾಮ್, ಅಜಿತ್ ಹೀಗೆ ಒಂದಷ್ಟು ಹೊಸ ಪ್ರತಿಭೆಗಳನ್ನ ಆರಿಸಿಕೊಂಡು, ಅವ್ರನ್ನ ತಮ್ಮ ಗರಡಿಯಲ್ಲಿ ಪಳಗಿಸಿದ್ರು.

ಅಂದಹಾಗೆ ರಶ್ಮಿಕಾಗೆ ನಟನೆಯಿಂದ ಹಿಡಿದು, ಕ್ಯಾಮೆರಾ ಫೇಸ್ ಮಾಡೋವರೆಗೂ ಪ್ರತಿಯೊಂದನ್ನ ಧಾರೆ ಎರೆದ ಗುರು ಮಾತ್ರ ಇದೇ ಸಾಯಿಕೃಷ್ಣ. ಸಿನಿಮಾಗಾಗಿಯೇ ಬರೋಬ್ಬರಿ 8 ತಿಂಗಳು ಫಿಲ್ಮ್ ಸಿಟಿಯಲ್ಲೇ ಉಳಿದುಕೊಂಡ ಸಾಯಿಕೃಷ್ಣ, ರಶ್ಮಿಕಾ ಮತ್ತು ಉಳಿದ ಕಲಾವಿದರನ್ನ ಮೂರೂವರೆ ತಿಂಗಳ ಕಾಲ ಟ್ರೈನ್ ಮಾಡಿದ್ರು.

ಆ ಸಿನಿಮಾ ಕಾರಣಾಂತರಗಳಿಂದ ನಿಂತೇ ಹೋಯ್ತು. ಇಲ್ಲಾ ಅಂದಿದ್ರೆ ರಶ್ಮಿಕಾ ಚೊಚ್ಚಲ ಸಿನಿಮಾ ಗೆಳೆಯರೇ ಗೆಳತಿಯರೇ ಅನ್ನೋದ್ರಲ್ಲಿ ಡೌಟೇ ಇಲ್ಲ. ಇನ್ನು ನಟನೆ ಜೊತೆ ಸಿನಿಮಾದ ಓರೆಕೋರೆಗಳನ್ನ ತುಂಬಾ ಡಿಟೈಲ್ಡ್ ಆಗಿ ಹೇಳಿಕೊಟ್ಟಿದ್ದ ಸಾಯಿಕೃಷ್ಣರ ಮಾತುಗಳನ್ನ ಇಂದಿಗೂ ರಶ್ಮಿಕಾ ಪಾಲಿಸ್ತಿದ್ದಾರೆ. ಟೇಕ್​ನ ನಂತ್ರ ಸಕ್ರೀನ್ ನೋಡೋ ಅಭ್ಯಾಸ ಇಟ್ಟುಕೊಂಡಿಲ್ಲ.

ಅಷ್ಟೇ ಅಲ್ಲ, ರಶ್ಮಿಕಾರಲ್ಲಿ ಇದ್ದ ಸಿನಿಮೋತ್ಸಾಹ, ಚೈತನ್ಯ, ಆ ಚಾರ್ಮ್​ ನೋಡಿ ಅಂದೇ ಸಾಯಿಕೃಷ್ಣ ಮುಂದೊಂದು ದಿನ ಬುದೊಡ್ಡ ನಟಿಯಾಗಲಿದ್ದಾರೆ ಅಂತ ಭವಿಷ್ಯ ನುಡಿದಿದ್ದು ಸುಳ್ಳಲ್ಲ.

ಅದೇನೇ ಇರಲಿ.. ಸದ್ಯ ತಾನು ಸಾಕಿದ ಗಿಣಿಗೆ ರೆಕ್ಕೆ ಬಂದಿದ್ದೇ ತಡ ಗೂಡು ಬಿಟ್ಟು ಹಾರಿಹೋಯ್ತು ಅಂತ ರಕ್ಷಿತ್ ಪರ ಮಾತನಾಡೋರಿಗೆ, ರಶ್ಮಿಕಾ ಅಸಲಿ ಗುರು ಯಾರು ಅನ್ನೋದನ್ನ ನಾವು ಬಿಚ್ಚಿಟ್ಟಿದ್ದೇವೆ. ಇದರ ಮೇಲೂ ರಶ್ಮಿಕಾ ಗುರು ರಕ್ಷಿತ್ ಶೆಟ್ಟಿನೇ ಅಂತ ಮಾತನಾಡಿದ್ರೆ ಅದಕ್ಕಿಂತ ದೊಡ್ಡ ಕಾಮಿಡಿ ಮತ್ತೊಂದು ಇರಲಿಕ್ಕಿಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್‌, ಟಿವಿ5 ಬೆಂಗಳೂರು

Next Story

RELATED STORIES