Top

ರಾಜೀನಾಮೆ ಬಳಿಕ ಸ್ವ ಕ್ಷೇತ್ರಕ್ಕೆ ಎನ್ ಮಹೇಶ್ : ಭಾವುಕರಾಗಿ ಕಣ್ಣೀರು!

ರಾಜೀನಾಮೆ ಬಳಿಕ ಸ್ವ ಕ್ಷೇತ್ರಕ್ಕೆ ಎನ್ ಮಹೇಶ್ : ಭಾವುಕರಾಗಿ ಕಣ್ಣೀರು!
X

ಮೊದಲಬಾರಿಗೆ ಬಿಎಸ್ಪಿ ಪಕ್ಷದಿಂದ ಗೆದ್ದು ಸಚಿವರಾದದ್ದು ಒಂದು ರೀತಿ ಬಯಸದೆ ಬಂದ ಭಾಗ್ಯವೇ ಸರಿ.. ಪಕ್ಷದ ಸಂಘಟನೆಗಾಗಿ ಸ್ಥಾನಮಾನಗಳನ್ನೇ ತ್ಯಜಿಸಿದ ಅಪರೂಪದ ರಾಜಕಾರಣಿ ಎನ್ ಮಹೇಶ್

ದಿಢೀರ್ ರಾಜಿನಾಮೆಯಿಂದ ಅವರ ಕಾರ್ಯಕರ್ತರಲ್ಲಿ ಒಂದು ರೀತಿ ಅಚ್ಚರಿ ಮನೆ ಮಾಡಿತು.

ಇಂದು ಸ್ವಕ್ಷೇತ್ರಕ್ಕೆ, ರಾಜೀನಾಮೆಯ ಬಳಿಕ ಶಾಸಕ ಎನ್ ಮಹೇಶ್‌ ಭೇಟಿ ನೀಡಿದರು. ಈ ವೇಳೆ ಶಾಸಕರು ಬರುವುದನ್ನೇ ಕಾದು ಕುಳಿತಿದ್ದ ಅಭಿಮಾನಿಗಳನ್ನು ಕಂಡ ತಕ್ಷಣ, ಎನ್ ಮಹೇಶ್ ಗದ್ಗಧಿತರಾದರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಶಾಸಕರನ್ನು ಪ್ರಶ್ನೆಗೆ ಮುಂದಾಗುತ್ತಿದ್ದಂತೆ, ಮತ್ತಷ್ಟು ಭಾವುಕರಾದ ಅವರು, ಮಾತಿಗಿಂತ ಮೌನದಲ್ಲೇ ಉತ್ತರವನ್ನು ನೀಡಿದಂತೆ, ಒಂದು ರೀತಿ ವಲ್ಲದ ಮನಸಿಸ್ಸಿನಿಂದ ರಾಜೀನಾಮೆ ಕೊಟ್ಟಂತೆ ಕಂಡು ಬಂದರು. ಹೀಗಾಗಿ ಅವರ ರಾಜಿನಾಮೆ ಹಿಂದೆ ಕಾಣದ ಕೈಗಳ ಕೈವಾಡ ಶಂಕೆ ಇರಬಹುದು ಎಂಬುದು ಅಭಿಮಾನಿಗಳ ಮಾತಾಗಿತ್ತು.

Next Story

RELATED STORIES