Top

ಕಿಂಗ್ ಕೊಹ್ಲಿ ಈಗ ಏಷ್ಯಾದ ನಂ.1 ಬ್ಯಾಟ್ಸ್ ಮನ್

ಕಿಂಗ್  ಕೊಹ್ಲಿ ಈಗ ಏಷ್ಯಾದ ನಂ.1 ಬ್ಯಾಟ್ಸ್ ಮನ್
X

ಹೈದ್ರಾಬಾದ್ : ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಟೆಸ್ಟ್ ಫಾರ್ಮೆಟ್​ನಲ್ಲಿ ಆಡ್ಲಿ ಬಿಡ್ಲಿ ಆದರೆ ಪ್ರತಿ ಪಂದ್ಯದಲ್ಲೂ ಒಂದಿಲ್ಲ ಒಂದು ದಾಖಲೆ ಬರೆಯುತ್ತಿದ್ದಾರೆ.

ಮೊನ್ನೆಯಷ್ಟೆ ರಾಜ್ ಕೋಟ್ ಟೆಸ್ಟ್ ನಲ್ಲಿ 24ನೇ ಶತಕ ಬಾರಿಸಿ ಹಲವಾರು ದಾಖಲೆಗಳನ್ನ ಮುಡಿಗೇರಿಸಿಕೊಂಡಿದ್ದ ಟೀಂ ಇಂಡಿಯಾ ನಾಯಕ ಇದೀಗ ವಿಂಡೀಸ್ ವಿರುದ್ಧ ಹೈದ್ರಾಬಾದ್ ಟೆಸ್ಟ್ ಪಂದ್ಯದಲ್ಲೂ ಮತ್ತೊಂದು ದಾಖಲೆ ಬರೆದಿದ್ದಾರೆ.

ನಿನ್ನೆ ವಿಂಡೀಸ್ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ಕ್ಯಾಪ್ಟನ್ ಕೊಹ್ಲಿ ಬಾರಿಸಿದ್ದು ಕೇವಲ 45 ರನ್. ಆದರೆ ಈ ಇನ್ನಿಂಗ್ಸ್ ನಲ್ಲೂ ದಾಖಲೆ ಬರೆದು ವಿಶ್ವ ಕ್ರಿಕೆಟ್ ನ ಗಮನ ಸೆಳೆದಿದ್ದಾರೆ. 45 ರನ್ ಗಳಿಸೋದ್ರೊಂದಿಗೆ ವಿರಾಟ್ ಕೊಹ್ಲಿ ಏಷ್ಯಾ ನಾಯಕರ ಪೈಕಿ ಅತಿ ಹೆಚ್ಚು ರನ್ ಗಳಿಸಿದ ಏಷ್ಯಾ ತಂಡಗಳ ಮೊದಲ ನಾಯಕ ಎಂಬ ಗೌರವಕ್ಕೆ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ.

ಉಪ್ಪಾಳ ಅಂಗಳದಲ್ಲಿ ನಿನ್ನೆ ವಿಂಡೀಸ್ ವಿರುದ್ದ 45 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಪಾಕಿಸ್ತಾನ ಮಾಜಿ ನಾಯಕ ಮಿಸ್ಬಾ- ಉಲ್​- ಹಕ್ ಅವರ ದಾಖಲೆ ಸರಿಗಟ್ಟಿದ್ರು. ಮಿಸ್ಬಾ-ಉಲ್​- ಹಕ್ ನಾಯಕನಾಗಿ ಟೆಸ್ಟ್ ನಲ್ಲಿ 8 ಶತಕ ಬಾರಿಸಿದ್ರೆ. ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ನಾಯಕನಾದ ನಂತರ 17 ಶತಕ ಬಾರಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮಿಸ್ಬಾ-ಉಲ್​-ಹಕ್​ 56 ಟೆಸ್ಟ್ ಪಂದ್ಯಗಳಿಂದ 4,214 ರನ್ ಬಾರಿಸಿ 51.39 ಎವರೇಜ್ ಹೊಂದಿದ್ದಾರೆ. ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 42 ಟೆಸ್ಟ್ ಪಂದ್ಯಗಳಿಂದ 4, 233 ರನ್ ಬಾರಿಸಿ 65.12 ಎವರೇಜ್ ಹೊಂದಿದ್ದಾರೆ. ಇಲ್ಲಿ ವಿರಾಟ್ ಕೊಹ್ಲಿ ಮಾಜಿ ನಾಯಕ ಮಿಸ್ಬಾ -ಉಲ್-ಹಕ್​ಗಿಂತ 14 ಪಂದ್ಯಗಳ ಮುನ್ನವೇ ದಾಖಲೆಯನ್ನ ಸರಿ ಗಟ್ಟಿದ್ದಾರೆ.

Next Story

RELATED STORIES