Top

ದುರ್ಗಕ್ಕೆ ದರ್ಶನ್ ಭೇಟಿ: ಮದಕರಿ ಚಿತ್ರ ಕುರಿತು ಏನಂದ್ರು..?

ದುರ್ಗಕ್ಕೆ ದರ್ಶನ್ ಭೇಟಿ: ಮದಕರಿ ಚಿತ್ರ ಕುರಿತು ಏನಂದ್ರು..?
X

ಚಿತ್ರದುರ್ಗ: ಬಾಕ್ಸ್‌ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್‌ಲೈನ್ ವೆಂಕಟೇಶ್, ರಾಜೇಂದ್ರ ಸಿಂಗ್ ಬಾಬು, ಶ್ರೀನಿವಾಸಮೂರ್ತಿ, ದೊಡ್ಡಣ್ಣ ಸೇರಿ ಹಲವು ಗಣ್ಯರು ಇಂದು ಚಿತ್ರದುರ್ಗಕ್ಕೆ ಭೇಟಿ ನೀಡಿದರು.

ಚಿತ್ರದುರ್ಗದಲ್ಲಿ ನಡೆಯಲಿರುವ ಮುರುಘಾ ಶರಣಸಂಸ್ಕೃತಿ ಉತ್ಸವದಲ್ಲಿ ಗಣ್ಯರೆಲ್ಲ ಪಾಲ್ಗೊಂಡಿದ್ದು, ಉತ್ಸವಕ್ಕೆ ದರ್ಶನ್ ಚಾಲನೆ ನೀಡಿದ್ದಾರೆ.

ಇನ್ನು ಮದಕರಿ ನಾಯಕ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ದರ್ಶನ್, ದಸರಾ ಹೊರತುಪಡಿಸಿ ಬೇರೇನು ಹೇಳುವುದಿಲ್ಲ ಎಂದರು.

ಮದಕರಿ ಚಿತ್ರದ ಬಗ್ಗೆ ಮಾತನಾಡಿದ ರಾಕ್‌ಲೈನ್ ವೆಂಕಟೇಶ್, ನೀವೆಷ್ಟೇ ಪ್ರಶ್ನೆ ಕೇಳಿದರೂ ಮದಕರಿ ನಾಯಕ ಚಿತ್ರದ ಬಗ್ಗೆ ಮಾತನಾಡುವುದಿಲ್ಲ. ಆ ಬಗ್ಗೆ ಮಾತನಾಡಲು ಇದು ವೇದಿಕೆಯಲ್ಲ. ಮತ್ತೊಮ್ಮೆ ಬಂದಾಗ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

Next Story

RELATED STORIES