Top

ವಿಜಯಪುರದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಲಂಚಾವತರಕ್ಕೆ ಲೆಕ್ಕವೇ ಇಲ್ಲ!

ವಿಜಯಪುರದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಲಂಚಾವತರಕ್ಕೆ ಲೆಕ್ಕವೇ ಇಲ್ಲ!
X

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಸುಂಗಠಾಣ, ಬಮ್ಮನಜೋಗಿ ಗ್ರಾಮಗಳಲ್ಲಿ ಜಮೀನು ದಾಖಲಾತಿ ನೀಡಲು ಗ್ರಾಮ ಲೆಕ್ಕಾಧಿಕಾರಿಗಳು ರೈತರನ್ನು ಎಗ್ಗಿಲ್ಲದೇ ಸುಲಿಗೆ ಮಾಡಲಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಮಂತ್ರಿ ಎಂ.ಸಿ. ಮನಗೂಳಿ ಸ್ವಕ್ಷೇತ್ರದಲ್ಲಿ ನಿಲ್ಲದ ರೈತರ ವಸೂಲಿ ಎಗ್ಗಿಲ್ಲದೇ ನಡೆಯುತ್ತಿದ್ದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಜಮೀನು ದಾಖಲಾತಿ ನೀಡಲು ರೈತರನ್ನ ಸುಲಿಗೆ ಮಾಡಲಾಗುತ್ತಿದ್ದು, ಮಾಧ್ಯಮಗಳಲ್ಲಿ ಲಂಚಾಚತಾರದ ಸುದ್ದಿ ಪ್ರಸಾರವಾಗುತ್ತಿದ್ದರೂ ರೈತರ ಸುಲಿಗೆಗೆ ಕಡಿವಾಣ ಬಿದ್ದಿಲ್ಲ.

ಸಾಲ ಮನ್ನಾಗಾಗಿ ದಾಖಲಾತಿ ನೀಡಲು ರೈತರನ್ನ ಸುಲಿಗೆ ಮಾಡುತ್ತಿರುವ ಅಧಿಕಾರಿಗಳು, ಪ್ರತಿ ದಾಖಲೆಗೆ 100-200 ರೂ. ವಸೂಲಿ ಮಾಡುತ್ತಿದ್ದಾರೆ.

ಸಿಂದಗಿ ಪಟ್ಟಣದ ಬಂದಾಳ ರಸ್ತೆಯಲ್ಲಿ ಖಾಸಗಿ ಕಟ್ಟಡದಲ್ಲಿ ರೈತರಿಂದ ಹಣ ವಸೂಲಿ ಮಾಡುತ್ತಿರುವ ತಲಾಠಿಗಳ ಬಗ್ಗೆ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದ್ದರೂ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಇತ್ತ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Next Story

RELATED STORIES