Top

shocking video: ಬಿಡಿಎ ಮಾಜಿ ಆಯುಕ್ತ ಕೇಳಿದ ಕೋಟಿ ಕೋಟಿ ಲಂಚ!

shocking video: ಬಿಡಿಎ ಮಾಜಿ ಆಯುಕ್ತ ಕೇಳಿದ ಕೋಟಿ ಕೋಟಿ ಲಂಚ!
X

ಪ್ರಸ್ತುತ ಕೆಪಿಎಸ್​ಸಿ ಅಧ್ಯಕ್ಷರಾಗಿರುವ ಶ್ಯಾಂಭಟ್ ಬಿಡಿಎ ಆಯುಕ್ತರಾಗಿದ್ದಾಗ ರೈತರಿಗೆ ಸೈಟು ವಿತರಿಸಲು ಬ್ರೋಕರ್​ನಿಂದ ಕೋಟಿ ಕೋಟಿ ಲಂಚ ಕೇಳಿದ ವೀಡಿಯೋ ಇದೀಗ ವೈರಲ್ ಆಗಿದೆ.

ಬಿಡಿಎ ಆಯುಕ್ತರಾಗಿದ್ದಾಗ 50 ಕಡತಗಳಿಗೆ ಸಹಿ ಹಾಕಿದ್ದು, ಉಳಿದ 50 ಕಡತಗಳಿಗೆ ಸಹಿ ಹಾಕಬೇಕಿತ್ತು. ಇನ್ನೂ 100 ಸೈಟ್​ಗಳಿದ್ದು ಇದಕ್ಕಾಗಿ ಒಂದು ಸೈಟ್​ಗೆ 1.5 ಲಕ್ಷದಂತೆ ಸುಮಾರು ಎಷ್ಟು ಲಂಚ ಕೊಡಬೇಕು ಎಂದು ಬ್ರೋಕರ್ ಬಳಿ ಕೇಳಿದ್ದಾರೆ. 2 ಕೋಟಿ ಕೊಡಿ ಎಂದು ಶ್ಯಾಂಭಟ್ ಉತ್ತರಿಸಿದ್ದಾರೆ.

ಈ ವೀಡಿಯೋವನ್ನು ಸಾಕ್ಷ್ಯವನ್ನಾಗಿ ನೀಡಿರುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರೊ.ಸಿ.ಎಸ್. ಸಿದ್ದರಾಜು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ.

ಶ್ಯಾಂಭಟ್ ಬಗ್ಗೆ ಹಿಂದಿನಿಂದಲೂ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿದ್ದು, ಯಾವುದೇ ಅಧಿಕೃತ ದೂರು ಯಾರೂ ನೀಡಿರಲಿಲ್ಲ.

ಈ ವೀಡಿಯೋ ಕೂಡ 2 ವರ್ಷಗಳ ಹಿಂದೆ ಚಿತ್ರೀಕರಿಸಿದ್ದು ಎಂದು ಹೇಳಲಾಗುತ್ತಿದ್ದು, ಇಷ್ಟು ಸಮಯದ ನಂತರ ಬಿಡುಗಡೆ ಬಗ್ಗೆಯೂ ಅನುಮಾನ ಉಂಟು ಮಾಡಿದೆ.

ಬ್ರೋಕರ್ ವೇಳೆ ಚರ್ಚೆ ವೇಳೆ 50 ಕಡತಗಳಿಗೆ ಸಹಿ ಹಾಕಬೇಕಾದರೆ ಎಷ್ಟು ಕೊಡಬೇಕು. ಸರಿಯಾಗಿ ಹೇಳಿಬಿಡಿ. ಕಳೆದ ಬಾರಿ 70 ಲಕ್ಷ ಕೊಟ್ಟಿದ್ದೆವು. ನಂತರ ಗೊಂದಲ ಉಂಟಾಯಿತು ಎಂದು ಬ್ರೋಕರ್ ಕೇಳಿದಾಗ 2 ಕೋಟಿ ರೂ. ನೀಡಬೇಕು ಎಂದು ಶ್ಯಾಂಭಟ್ ನೇರವಾಗಿಯೇ ಕೇಳುತ್ತಾರೆ.

ಸಾರ್.. 1.5 ಕೋಟಿ ರೂ ಮಾಡಿಕೊಂಡು ಬಿಡಿ ಸಾರ್​. ನಿಮಗೆ ಎಲ್ಲಿ ತಲುಪಿಸಬೇಕು. ಹೇಗೆ ತಲುಪಿಸಬೇಕು ಎಂದು ಹೇಳಿದರೆ ಹಾಗೆ ಮಾಡುತ್ತೇವೆ. ಕಾರ್ಡ್ ಮಾಡಲು ಕಾರ್ಯದರ್ಶಿ ಬಳಿ ಕೊಟ್ಟಿದ್ದೇವೆ ಎಂದು ಬ್ರೋಕರ್ ಹೇಳಿದಾಗ ಮೌನವಾಗಿ ಶ್ಯಾಂಭಟ್ ಕೇಳಿಸಿಕೊಳ್ಳುತ್ತಾರೆ.

Next Story

RELATED STORIES