Top

ಸಹಾಯ ಮಾಡೋಕೆ ಹೋದ ಆಟೋ ಚಾಲಕ : ಮುಂದೇನಾಯ್ತು ಈ ಸುದ್ದಿ ಓದಿ.!

ಸಹಾಯ ಮಾಡೋಕೆ ಹೋದ ಆಟೋ ಚಾಲಕ : ಮುಂದೇನಾಯ್ತು ಈ ಸುದ್ದಿ ಓದಿ.!
X

ಯಾವ ಯಾವ ರೂಪದಲ್ಲಿ ಜನ ಮತ್ತೊಬ್ಬರಿಗೆ ಮೋಸ ಮಾಡ್ತಾರೆ ಅಂತ ಹೀಗಿನ ಕಾಲದಲ್ಲಿ ಹೆಳೋದಕ್ಕೆ ಹಾಗಲ್ಲ. ಜನ ಕಷ್ಟದಲ್ಲಿದ್ದಾರೆ ಅಂತ ಇಲ್ಲೊಬ್ಬರು ಸಹಾಯ ಮಾಡೋಕೋಗಿ ಆಸ್ಪತ್ರೆ ಸೇರಿರುವ ಘಟನೆ ಬೆಂಗಳೂರಿನ ಈಜಿಪುರದ ರಸ್ತೆಯಲ್ಲಿ ನಡೆದಿದೆ.

ಜೀವನಾಧಾರಕ್ಕೆ ಆಟೋ ಓಡಿಸ್ತಿದ್ದ ಆಸೀಫ್ ಗೆ ನೆನ್ನೆ ಮದ್ಯರಾತ್ರಿ ಗ್ರಹಚಾರ ಕೆಟ್ಟತ್ತು ಅನಿಸುತ್ತಾದೆ. ಕಳೆದ ರಾತ್ರಿ 12-30 ಕ್ಕೆ ವಿವೇಕನಗರದ ಈಜಿಪುರ ಬಳಿ ಇಬ್ಬರು ವ್ಯಕ್ತಿಗಳು ಆಟೋ ಹತ್ತಿದ್ದಾರೆ. ಆಟೋ ಸ್ವಲ್ಪ ದೂರ ಚಲಿಸುತ್ತಿದ್ದಂತೆ ದುರುಳರಿಬ್ಬರು ಆಸೀಫ್ ಬಳಿ ದುಡ್ಡು ಕೇಳಿದ್ದಾರೆ. ಕೊಡದಿದ್ದಾಗ ಇಬ್ಬರು ತಮ್ಮ ಬಳಿ ಇದ್ದ ಪೆಟ್ರೋಲ್ ಆಸೀಫ್ ಮೇಲೆ ಹಾಕಿ ಸುಟ್ಟು ಪರಾರಿಯಾಗಿದ್ದಾರೆ.

ಈ ಘಟನೆ ಸಂಭವಿಸುತ್ತಿದ್ದಂತೆ ಆಸೀಫ್ ತನ್ನ ಮನೆಯವರಿಗೆ ಪೋನ್ ಮಾಡಿ ಕರೆಸಿಕೊಂಡಿದ್ದಾನೆ. ನಂತರ ಸಮೀಪದ ಸೆಂಟ್ ಫಿಲೋಮಿನಾಸ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾನೆ.

ದುರಂತ ನಡೆದ ಈಜಿಪುರದ ರಸ್ತೆ ಪ್ರದೇಶಕ್ಕೆ ವಿವೇಕನಗರ ಪೊಲೀಸರು ಭೇಟಿ ನೀಡಿ ಸುತ್ತಮುತ್ತಲ ಸಿಸಿಟಿವಿ ಪರಿಶೀಲಿಸಿದ್ದಾರೆ. ಯಾರೊ ಪೆಟ್ರೋಲ್ ಕಳ್ಳರು ಈ ರೀತಿ ದರೋಡೆಗೆ ಯತ್ನಿಸಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.

Next Story

RELATED STORIES