Top

ಬಳ್ಳಾರಿ ಅಭ್ಯರ್ಥಿ ಆಯ್ಕೆ ವಿವಾದ: ಸಿದ್ದರಾಮಯ್ಯ ಮಧ್ಯಪ್ರವೇಶ

ಬಳ್ಳಾರಿ ಅಭ್ಯರ್ಥಿ ಆಯ್ಕೆ ವಿವಾದ: ಸಿದ್ದರಾಮಯ್ಯ ಮಧ್ಯಪ್ರವೇಶ
X

ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಡಿಕೆ ಶಿವಕುಮಾರ್ ವಿಫಲವಾಗಿದ್ದ ಹಿನ್ನಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯೆ ಪ್ರವೇಶಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಪಕ್ಷದಲ್ಲಿ ಟ್ರಬಲ್ ಶೂಟರ್ ಎನ್ನುವುದನ್ನು ಮತ್ತೊಮ್ಮೆ ಖಚಿತ ಪಡಿಸಿದ್ದಾರೆ.

ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ನಿವಾಸದಲ್ಲಿ ನಡೆದ ಸಭೆಗೆ ಗೈರುಹಾಜರಾಗಿದ್ದಾರೆ. ಬಳ್ಳಾರಿ ಶಾಸಕರು ಇವತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಗೆ ಹಾಜರಾದರು. ಇವತ್ತಿನ ಸಭೆಯಲ್ಲೂ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ಚಂಡು ಹೈಕಮಾಂಡ್ ಅಂಗಳಕ್ಕೆ ತಲುಪಿದೆ.

ಬಳ್ಳಾರಿ ಆಯ್ಕೆ ಸಂಬಂಧ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶ ಮಾಡಿದ್ದಾರೆ.ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹಲವು ಸುತ್ತಿನ ಸಭೆ ನಡೆಸಿದರು ಅಭ್ಯರ್ಥಿ ಆಯ್ಕೆ ಯಶಸ್ವಿಯಾಗಿರಲಿಲ್ಲ ಶಾಸಕ ನಾಗೇಂದ್ರ ಅವರ ಸಹೋದರ ವೆಂಕಟೇಶ್‍ಪ್ರಸಾದ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಶಾಸಕರಾದ ಇ. ತುಕಾರಾಮ್, ಪಿ.ಟಿ.ಪರಮೇಶ್ವರ್‍ನಾಯಕ್, ಆನಂದ್‍ಸಿಂಗ್, ಅನಿಲ್ ಲಾಡ್ ಮತ್ತಿತರರು ಒಪ್ಪಿರಲಿಲ್ಲ ಹಾಗೂ ಸಭೆಯಲ್ಲಿ ಭಾಗವಹಿಸಿರಲಿಲ್ಲ ಹೀಗಾಗಿ ಬಳ್ಳಾರಿ ಟಿಕೆಟ್ ವಿಚಾರ ಕಗ್ಗಂಟಾಗಿತ್ತು.

ಇನ್ನೂ ಸಭೆಯಲ್ಲಿ ಎಲ್ಲರನ್ನೂ ಕಂಡು ಖುಷಿಯಾದ ಸಿದ್ದರಾಮಯ್ಯ ಎಲ್ಲರೂ ಒಟ್ಟಾಗಿದ್ದೀರಲ್ಲ ಎಂದು ಹೇಳಿ ಮುಗುಳ್ನಕ್ಕರು. ಬಹಳ ದಿನಗಳಿಂದ ಸಭೆಯಿಂದ ದೂರ ಉಳಿದಿದ್ದ ಆನಂದ್‍ಸಿಂಗ್ ಸೇರಿದಂತೆ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದ ಕಾಂಗ್ರೆಸ್‍ನ ಎಲ್ಲಾ ಶಾಸರಕು ಒಟ್ಟಾಗಿ ಸಭೆಯಲ್ಲಿ ಭಾಗವಹಿಸಿದರು.

ಇನ್ನು ಇಂದು ನಡೆದ ಸಭೆಯಲ್ಲೂ ಸಹ ಬಳ್ಳಾರಿ ಅಭ್ಯರ್ಥಿ ಆಯ್ಕೆ ಸಂಬಂಧ ಶಾಸಕರಲ್ಲಿ‌ ಒಮ್ಮತ ಮೂಡ್ಲಿಲ್ಲ. ಶಾಸಕ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಅವರಿಗೆ ಟಿಕೆಟ್ ನೀಡಲು ಉಳಿದ ಐದು ಶಾಸಕರು, ಇಬ್ಬರು ಪರಿಷತ್ ಸದಸ್ಯರು ಸಿದ್ಧರಿಲ್ಲ. ದೇವೇಂದಪ್ಪ ಹಾಗೂ ವೆಂಕಟೇಶ್ ಪ್ರಸಾದ್ ಹೆಸರು ಪ್ರಸ್ತಾಪವಾದಾಗ, ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.

ವೆಂಕಟೇಶ್ ಪ್ರಸಾದ್ ಅವರಿಗೆ ಟಿಕೆಟ್ ಕೊಟ್ಟು, ಅವರು ಗೆದ್ದಲ್ಲಿ ನಾಗೇಂದ್ರ ಸಚಿವ ಸ್ಥಾನಕ್ಕೂ ಪಟ್ಟು ಬೀಳುತ್ತಾರೆ. ಅವರಿಗೆ ಸಚಿವ ಸ್ಥಾನ ಸಿಕ್ಕಲ್ಲಿ ರೆಡ್ಡಿ ಸಹೋದರರ ಹಳೆಯ ಸ್ನೇಹಿತ ಬಳ್ಳಾರಿಯಲ್ಲಿ ನಿಯಂತ್ರ ಸಾಧಿಸುತ್ತಾರೆ ಅನ್ನೋದು ಉಳಿದ ಕೈ ಶಾಸಕರು ಆತಂಕ ವ್ಯಕ್ತಪಡಿಸಿದರು.

ಶಾಸಕರ ಅಸಮಧಾವನ್ನ ನೋಡಿದ ಸಿದ್ದರಾಮಯ್ಯ, ನಾಯಕರಿಗೆ ಖಡಕ್ ವಾರ್ನಿಂಗ್ ಅನ್ನು ನೀಡಿದರು. ಲೋಕಸಭೆಗೆ ಸಹಾಯವಾಗುವಂತೆ ಅಭ್ಯರ್ಥಿ ಗಳನ್ನ ಆಯ್ಕೆ‌ ಮಾಡಲಾಗುತ್ತೆ. ಅದರ ವಿರುದ್ಧ ಯಾರೂ ಮಾತಾಡ್ಬಾರ್ದು ಎಂದು ಶಾಸಕರಿಗೆ ಬಾಯ್ಕಟ್ಟಿದರು. ಅಲ್ಲದೇ, ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆಸಿ ನಿರ್ಧಾರ ತೆಗೆದ್ಕೊಳ್ಳಲಾಗುತ್ತದೆ. ವರಿಷ್ಠರು ನಿರ್ಧಾರ ಮಾಡುವ ಅಭ್ಯರ್ಥಿ ಪರ ಕೆಲಸ ಮಾಡಬೇಕು ಅಂತ ಸಿದ್ದರಾಮಯ್ಯ ಬಳ್ಳಾರಿ ಶಾಸಕರಿಗೆ ತಾಕೀತು ಮಾಡಿದ್ದಾರು.

ಸಭೆ ಬಳಿಕ ಮಾತನಾಡಿದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್, 10 ರಿಂದ 12 ಜನ ಆಕಾಂಕ್ಷಿಗಳಿದ್ದಾರೆ. ಎಲ್ಲರೂ ಗೆಲುವು ಅಭ್ಯರ್ಥಿಗಳೇ ಅಂತಿಮವಾಗಿ ಹೈಕಮಾಂಡ್ ತೀರ್ಮಾನ ತೆಗದುಕೊಳ್ಳಲಿದೆ ಎಂದರು.

ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್, ಬಳ್ಳಾರಿ ಲೋಕಸಭೆ ಉಪ ಚುನಾವಣೆಗೆ ನಾಳೆ ರಾಹುಲ್ ಜೊತೆ ಚರ್ಚಿಸಿ ಕಾಂಗ್ರೆಸ್ ಅಭ್ಯರ್ಥಿ ಫೈನಲ್ ಮಾಡ್ತೇವೆ. ಅಂದರು.

ಇನ್ನು ಇಂದು ರಾತ್ರಿ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅವರೊಂದಿಗೆ ಚರ್ಚಿಸಿ ಅಭ್ಯರ್ಥಿ ಫೈನಲ್ ಮಾಡಿದ ಬಳಿಕ ನಾಳೆ ರಾಹುಲ್ ಅವರೊಂದಿಗೆ ಚರ್ಚೆ ನಡೆಸಿ ಘೊಷಣೆ ಮಾಡಲಿದ್ದಾರೆ.

Next Story

RELATED STORIES