Top

ಆಕಸ್ಮಿಕ ಬೆಂಕಿಗೆ ಗುಡಿಸಲು ಭಸ್ಮ : ಮಗು ದಾರುಣವಾಗಿ ಸಾವು

ಆಕಸ್ಮಿಕ ಬೆಂಕಿಗೆ ಗುಡಿಸಲು ಭಸ್ಮ : ಮಗು ದಾರುಣವಾಗಿ ಸಾವು
X

ಕೊಪ್ಪಳ : ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಬಿದ್ದ ಕಾರಣ 8 ತಿಂಗಳ ಮಗು ಸಜೀವವಾಗಿ ಸುಟ್ಟು ಕರುಕಲಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ತರಲಕಟ್ಟಿ ತಾಂಡಾದಲ್ಲಿ ನಡೆದಿದೆ.

ಗುಡಿಸಲಿನ ಜೋಳಿಗೆಯಲ್ಲಿ ಮಲಗಿದ್ದ ಎಂಟು ವರ್ಷದ ಮಹೇಶ್, ಸಜೀವವಾಗಿ ಸುಟ್ಟು ಕರುಕಲಾಗಿರುವ ದುರ್ಧೈವಿ ಮಗು. ನಿಂಗಪ್ಪಾ, ಸುನೀತಾ ದಂಪತಿಯ ಮಗು ಇದಗಿದ್ದು, ಮಗುವಿನ ತಂದೆ ತಾಯಿ ಜೋಳಿಗೆಯಲ್ಲಿ ಮಹೇಶ್ ನನ್ನು ಮಲಗಿಸಿ ಹೊಲದಲ್ಲಿ ಕೆಲಸಕೇಂದು ತೆರಳಿದ್ದರು. ಈ ಸಂದರ್ಭದಲ್ಲಿ ಶಾರ್ಟ್​ ಸರ್ಕ್ಯೂಟ್ ನಿಂದ ಬೆಂಕಿ‌ ತಗುಲಿದ್ದರಿಂದ, ಮನೆಯಲ್ಲಿ ಮಲಗಿದ್ದ ಮಗು ದಾರುಣವಾಗಿ ಸಾವನ್ನಪ್ಪಿದೆ.

ಈ ಸಂಬಂಧ, ಬೇವೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Next Story

RELATED STORIES