2ನೇ ಟೆಸ್ಟ್: ವಿಂಡೀಸ್ ಆಧರಿಸಿದ ಶತಕದ `ಚೇಸ್'

ಮಧ್ಯಮ ಕ್ರಮಾಂಕದಲ್ಲಿ ತಾಳ್ಮೆಯ ಆಟದಿಂದ ಶತಕದ ಹೊಸ್ತಿಲಲ್ಲಿರುವ ರೋಸ್ಟನ್ ಚೇಸ್ ಭರ್ಜರಿ ಆಟದಿಂದ ವೆಸ್ಟ್ ಇಂಡೀಸ್ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರಾಗಿದೆ.
ಹೈದರಾಬಾದ್ನಲ್ಲಿ ಶುಕ್ರವಾರ ಆರಂಭಗೊಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ವೆಸ್ಟ್ ಇಂಡೀಸ್ ದಿನದಾಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 295 ರನ್ ಕಲೆ ಹಾಕಿದೆ.
ಭಾರತೀಯರ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ಒಂದು ಹಂತದಲ್ಲಿ 113 ರನ್ಗೆ 5 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಈ ಹಂತದಲ್ಲಿ ಕ್ರೀಸ್ಗೆ ಆಗಮಿಸಿದ್ದ ಚೇಸ್ ನಿಧಾನವಾಗಿ ಆಡಿ ಇನಿಂಗ್ಸ್ ಕಟ್ಟಿದರು.
ಚೇಸ್ ಮತ್ತು ನಾಯಕ ಜೇಸನ್ ಹೋಲ್ಡರ್ 7ನೇ ವಿಕೆಟ್ಗೆ 104 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು 250ರ ಗಡಿ ತಲುಪಿಸಿದರು. ಹೋಲ್ಡರ್ 92 ಎಸೆತಗಳಲ್ಲಿ 6 ಬೌಂಡರಿ ಸೇರಿದ 52 ರನ್ ಬಾರಿಸಿ ಔಟಾದರೆ, ಚೇಸ್ 174 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 98 ರನ್ ಬಾರಿಸಿ ಔಟಾಗದೇ ಉಳಿದಿದ್ದು 2 ರನ್ ಬಾರಿಸಿದರೆ ಶತಕ ಪೂರೈಸಲಿದ್ದಾರೆ.
ಭಾರತದ ಪರ ಕುಲದೀಪ್ ಯಾದವ್ ಮತ್ತು ಉಮೇಶ್ ಯಾದವ್ ತಲಾ 3 ವಿಕೆಟ್ ಕಬಳಿಸಿದರೆ, ಚೊಚ್ಚಲ ಪಂದ್ಯವಾಡಿದ ಶಾರ್ದೂಲ್ ಠಾಕೂರ್ 1.4 ಓವರ್ ಎಸೆಯುತ್ತಲೇ ಗಾಯಗೊಂಡು ಮೈದಾನದ ತೊರೆದರು.
- ಸಂಕ್ಷಿಪ್ತ ಸ್ಕೋರ್
- ಭಾರತ ಮೊದಲ ಇನಿಂಗ್ಸ್ 95 ಓವರ್ 7 ವಿಕೆಟ್ 295 (ಚೇಸ್ ಅಜೇಯ 98, ಹೋಲ್ಡರ್ 52, ಡೌರಿಚ್ 30, ಕುಲದೀಪ್ 74/3, ಉಮೇಶ್ 83/3).