Top

ಸಮಾಜಸೇವೆ ಮಾಡೋಕೆ ಬಂದಿಲ್ಲ: ಅನಂತ್ ಕುಮಾರ್​ ಹೆಗ್ಡೆ

ಸಮಾಜಸೇವೆ ಮಾಡೋಕೆ ಬಂದಿಲ್ಲ: ಅನಂತ್ ಕುಮಾರ್​ ಹೆಗ್ಡೆ
X

ನಾವು ರಾಜಕಾರಣ ಮಾಡೋಕೆ‌ ಈ ಕುರ್ಚಿ ಮೇಲೆ ಕುಳಿತಿರೋದು. ಯಾವುದೇ ಸಮಾಜ ಸೇವೆ ಮಾಡಲಿಕ್ಕೆ‌ ಅಲ್ಲ ಎಂದು ಕೇಂದ್ರ ಸಚಿವ ಅನಂತ‌ಕುಮಾರ್ ಹೆಗಡೆ ಹೇಳಿದ್ದಾರೆ.

ಗುರುವಾರ ನಡೆದ ಉತ್ತರಕನ್ನಡ ಜಿಲ್ಲೆ ಶಿರಸಿಯ ಬಿಜೆಪಿ‌ ಕಾರ್ಯಕಾರಿಣಿ ಸಭೆಯಲ್ಲಿ ಮಾತಮಾಡಿದ ಅವರು, ನೀವು ರಾಜಕಾರಣ ಮಾಡ್ತಿದ್ದಿರಾ ಅಂತ ಕೇಳಿದರು. ಹೌದು, ನಾವು ರಾಜಕಾರಣ ಮಾಡುವುದಕ್ಕಾಗಿಯೇ ನಾವು ಬಂದಿರುವುದು. ಅದಕ್ಕಾಗಿಯೇ ಶಾಸಕ, ಸಂಸದ ಅಂತೆಲ್ಲಾ ಆಗಿರುವುದು. ಸಮಾಜ ಸೇವೆ ಮಾಡಲು ಬಂದಿಲ್ಲ ಎಂದರು.

ರಾಜಕಾರಣ ಬಿಟ್ಟು ಬೇರೇನೂ ಮಾಡಲಿಕ್ಕೆ ಬರೋದಿಲ್ಲ. ರಾಜಕಾರಣಾನೇ ಮಾಡೋದು. ಮಾಧ್ಯಮದವರು ಹೇಗೆ ಬರ್ಕೊಳ್ತಿರೋ ಬರ್ಕೊಳ್ಳಿ. ಅವರವರ ಭಾವಕ್ಕೆ ಅವರವರ ಭಕುತಿ ಬಿಟ್ಟದ್ದು ಅಂತ ಅನಂತ್ ಕುಮಾರ್ ಹೆಗ್ಡೆ ಹೇಳಿದರು.

https://www.youtube.com/watch?v=5fol253cpl8

Next Story

RELATED STORIES