Top

ರಿಷಬ್ ಶೆಟ್ಟಿ ಸಿನಿಮಾದಲ್ಲಿ ನಟಿಸ್ತಾರಾ ರಾಕಿಂಗ್ ಸ್ಟಾರ್..?

ರಿಷಬ್ ಶೆಟ್ಟಿ ಸಿನಿಮಾದಲ್ಲಿ ನಟಿಸ್ತಾರಾ ರಾಕಿಂಗ್ ಸ್ಟಾರ್..?
X

ದೇಶ ವಿದೇಶದಲ್ಲೂ ಕಾಸರಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸದ್ದು ಮಾಡ್ತಿದೆ. ಸರ್ಕಾರಿ ಶಾಲಾ ಮಕ್ಕಳ ಕಲರವಕ್ಕೆ ರಾಕಿಂಗ್ ಸ್ಟಾರ್ ಯಶ್​​​​ ಫಿದಾ ಆಗಿದ್ದಾರೆ. ನಿರ್ದೇಶಕ ರಿಷಬ್ ಶೆಟ್ಟಿ ಜಾಣ್ಮೆಗೆ ಮೆಚ್ಚಿ, ಒಳ್ಳೆ ಕಥೆ ಸಿಕ್ರೆ, ಶೆಟ್ರ ನಿರ್ದೇಶನದಲ್ಲಿ ನಟಿಸ್ತೀನಿ ಅಂದಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು- ಕೊಡುಗೆ ರಾಮಣ್ಣ ರೈ. ಸದ್ಯ ಭಾರತೀಯ ಚಿತ್ರರಂಗದಲ್ಲೇ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಸಿನಿಮಾ. ಸಿಂಪಲ್ ಕಥೆ. ಆದ್ರೆ ಅದನ್ನ ರಿಷಬ್ ಶೆಟ್ಟಿ ಅಂಡ್ ಟೀಮ್ ಕಲಾತ್ಮಕವಾಗಿ ಕಟ್ಟಿಕೊಟ್ಟಿರೋ ಬಗೆ ಸೂಪರ್. ಇದೇ ಕಾರಣಕ್ಕೆ ಸರ್ಕಾರಿ ಹಿರಿಯ ಶಾಲೆ ನೋಡಿದವರು, ಬಾಲ್ಯದ ದಿನಗಳಿಗೆ ಜಾರ್ತಿದ್ದಾರೆ. ಚಿತ್ರತಂಡದ ಪ್ರಯತ್ನಕ್ಕೆ ಬಹುಪರಾಕ್ ಅಂತಿದ್ದಾರೆ.

ಅನಂತ್ ನಾಗ್ ಬಿಟ್ರೆ ಬಹುತೇಕ ಪುಟಾಣಿ ಮಕ್ಕಳು ಅಭಿನಯಿಸಿರೋ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಲ್ಲಾ ವರ್ಗದ ಪ್ರೇಕ್ಷಕರನ್ನ ಸೆಳೀತಿದೆ. ದೇಶ ವಿದೇಶದಲ್ಲಿ ಸಿನಿಮಾ ಸದ್ದು ಮಾಡ್ತಿದೆ. ಅಂಡಮಾನ್ ನಿಕೋಬಾರ್, ಅಮೇರಿಕಾ, ಗಲ್ಫ್​ ರಾಷ್ಟ್ರಗಳಲ್ಲೂ ಹೌಸ್​ಫುಲ್ ಪ್ರದರ್ಶನ ಕಂಡ ಹೆಗ್ಗಳಿಗೆ ಈ ಚಿತ್ರದ್ದು. ಸುದೀಪ್, ಪುನೀತ್ ರಾಜ್​ಕುಮಾರ್​ರಂತಹ ಸ್ಟಾರ್ಸ್ ದಡ್ಡ ಪ್ರವೀಣ ಅಂಡ್ ಟೀಮ್ ಮೋಡಿಗೆ ಮನ ಸೋತಿದ್ದಾರೆ..

ಸಿನಿಮಾ ಗೆಲ್ಲೋಕೆ ಸೂಪರ್ ಸ್ಟಾರ್ಸ್ ಬೇಕಿಲ್ಲ, ಫಾರಿನ್ ಶೂಟಿಂಗ್ಗು, ಅದ್ದೂರಿ ಸೆಟ್ಟು, ಕೋಟಿ ಕೋಟಿ ಬಜೆಟ್ ಬೇಡವೇ ಬೇಡ, ಕಂಟೆಂಟ್​​ ಚೆನ್ನಾಗಿದ್ದು, ಅದನ್ನ ಅದ್ಭುತವಾಗಿ ಪ್ರಸೆಂಟ್ ಮಾಡಿದ್ರೆ ಸಾಕು, ಸಕ್ಸಸ್ ಗ್ಯಾರೆಂಟಿ ಅನ್ನೋದಕ್ಕೆ ಈ ಸಿನಿಮಾ ಬೆಸ್ಟ್ ಎಕ್ಸಾಂಪಲ್.. ಸ್ವತ: ರಾಕಿಂಗ್ ಸ್ಟಾರ್ ಯಶ್​ ಕೂಡ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ನೋಡ್ತಾ ನೋಡ್ತಾ ಮಗುವಾಗಿಬಿಟ್ಟಿದ್ರು.

ನಿರ್ದೇಶಕ ರಿಷಬ್ ಶೆಟ್ಟಿ, ಒಂದು ಸಾಧಾರಣ ಕಥೆಯನ್ನ ತೆರೆಮೇಲೆ ತಂದಿರೋ ರೀತಿ ನೋಡಿ, ರಾಕಿಂಗ್ ಸ್ಟಾರ್ ಫಿದಾ ಆಗಿದ್ದಾರೆ. ಶೆಟ್ರ ನಿರ್ದೇಶನಕ್ಕೆ ಫ್ಯಾನ್ ಆಗಿರೋ ಯಶ್​, ಒಳ್ಳೆ ಕತೆ ಸಿಕ್ರೆ, ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ನಟಿಸೋಕೆ ರೆಡಿ ಅಂದ್ರು.

ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ಅಂದಾಜು 25ಕೋಟಿ ಕಲೆಕ್ಷನ್ ಮಾಡಿದೆ ಅನ್ನಲಾಗ್ತಿದೆ. ಮಕ್ಕಳ ಸಂಖ್ಯೆ ಕಡಿಮೆ ಅನ್ನೋ ಕಾರಣಕ್ಕೆ ಸರ್ಕಾರಿ ಕನ್ನಡ ಶಾಲೆಗಳನ್ನ ಮುಚ್ಚುತ್ತಿರೋದ್ರ ವಿರುದ್ಧ ಈ ಸಿನಿಮಾ ದನಿಯೆತ್ತಿದೆ. ಇನ್ನೂ ಸಿನಿಮಾ ಚಿತ್ರೀಕರಣಗೊಂಡ ಶಾಲೆ ಕೂಡ ಮುಚ್ಚುವ ಭೀತಿ ಎದುರಿಸುತ್ತಿದ್ದು, ಸ್ವತ: ರಿಷಬ್​ ಶೆಟ್ಟಿ ಶಾಲೆಯನ್ನ ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಇದೆಲ್ಲದರ ಮಧ್ಯೆ ರಾಕಿಂಗ್ ಸ್ಟಾರ್ ಯಶ್, ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಅಷ್ಟೆ ಅಲ್ಲ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ನಟಿಸೋಕೆ ಯೆಸ್ ಅಂದಿರೋದು ವಿಶೇಷ.

ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Next Story

RELATED STORIES