Top

ಹಾಸನದಲ್ಲಿ ಅಕ್ರಮ ಮದ್ಯ ಮಾರಾಟ:ಅಧಿಕಾರಿಗಳಿಗೆ ತರಾಟೆ

ಹಾಸನದಲ್ಲಿ ಅಕ್ರಮ ಮದ್ಯ ಮಾರಾಟ:ಅಧಿಕಾರಿಗಳಿಗೆ ತರಾಟೆ
X

ಹಾಸನ ಜಿಲ್ಲೆಯ ಸುತ್ತಮುತ್ತ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು ಸಾಲ ಜಾಸ್ತಿಯಾಗಿ ಕುಡುಕರು ಊರು ಬಿಟ್ಟು ಹೋಗುವ ಪರಿಸ್ಥಿತಿ ಉಂಟಾಗಿದೆ. ಪುರುಷರು ಮಹಿಳೆಯರ ಮಾಂಗಲ್ಯ ಮಾರಿ ಮದ್ಯ ಸೇವಿಸುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಲೋಕೋಪಯೋಗಿ ಸಚಿವ ರೇವಣ್ಣ, ಶಾಸಕ ಶಿವಲಿಂಗೇಗೌಡರಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹಾಸನದ ಸುತ್ತಮುತ್ತ ಇರುವ ಗ್ರಾಮಗಳಲ್ಲಿ ಹತ್ತಾರು ಮನೆಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ನಿತ್ಯ ಕುಡಿಯುವ ಚಟ ಹೆಚ್ಚಿದ್ದರಿಂದ ಸಾಲ ಜಾಸ್ತಿಯಾಗುತ್ತಿದೆ. ಇದರಿಂದ ಗ್ರಾಮಸ್ಥರು ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಳಗ್ಗೆ 7 ಗಂಟೆಗೆ ಮದ್ಯದ ಅಂಗಡಿ ತೆಗೆಯುತ್ತಿದ್ದರೆ ಇದರಿಂದ ಸಾಕಷ್ಟು ತೊಂದರೆ ಹಾಗುತ್ತಿದೆ ಈ ಬಗ್ಗೆ ಪೊಲೀಸರು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹಾಸನ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕ ಪ್ರೀತಮ್ ಗೌಡ ಸಚಿವರಿಗೆ ಮನವಿ ಮಾಡಿದರು.

Next Story

RELATED STORIES