Top

ನಾನು ಕೂಡಾ ಟಿಕೆಟ್ ಆಕಾಂಕ್ಷಿ: ರಮ್ಯಾ ತಾಯಿ ರಂಜಿತಾ

ನಾನು ಕೂಡಾ ಟಿಕೆಟ್ ಆಕಾಂಕ್ಷಿ: ರಮ್ಯಾ ತಾಯಿ ರಂಜಿತಾ
X

ಮಂಡ್ಯ: ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ನಾನೂ ಕೂಡ ಟಿಕೆಟ್ ಆಕಾಂಕ್ಷಿ ಎಂದು ನಟಿ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ತಾಯಿ ರಂಜಿತಾ ಹೇಳಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ಥಳೀಯ ಕಾಂಗ್ರೆಸ್ ಮುಖಂಡರ ಬಳಿ ಮಾತನಾಡಿದ್ದೇನೆ. ನಾನೂ ಟಿಕೇಟ್ ಆಕಾಂಕ್ಷಿ, ನನಗೂ ಅವಕಾಶ ಮಾಡಿಕೊಡಿ ಎಂದು ಕೇಳಿರುವುದಾಗಿ ಹೇಳಿದ್ದಾರೆ.

ನಮಗೆ 5 ಲಕ್ಷ ಮತದಾರರಿದ್ದಾರೆ. ಕಾರ್ಯಕರ್ತರಿದ್ದಾರೆ. ಅವರನ್ನೆಲ್ಲಾ ಅನಾಥರು ಮಾಡೋದು ಬೇಡ. ಉಪಚುನಾವಣೆಯಲ್ಲಿ ಅಭ್ಯರ್ಥಿ ಹಾಕದಿದ್ರೆ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲೋದು ಕಷ್ಟವಾಗುತ್ತೆ ಎಂದಿದ್ದಾರೆ.

ಅಲ್ಲದೇ ಕಾಂಗ್ರೆಸ್ ಪಕ್ಷವೇ ಮಂಡ್ಯದಲ್ಲಿ ಇಲ್ಲದ ಹಾಗೆ ಆಗತ್ತೆ. ಹಾಗಾಗಿ ಅಭ್ಯರ್ಥಿ ಹಾಕುವಂತೆ ಎಲ್ಲಾ ಕಾಂಗ್ರೆಸ್ ಮುಖಂಡರಿಗೆ ಕರೆ ಮಾಡಿ ಮನವಿ ಮಾಡಿದ್ದೇನೆ. ಅವರೆಲ್ಲರೂ ವರಿಷ್ಠರಿಗೆ ಅಭ್ಯರ್ಥಿ ಹಾಕುವಂತೆ ತಿಳಿಸಿದ್ದಾರೆ. ಇವತ್ತು ನಾಳೆ ಒಳಗೆ ತೀರ್ಮಾನ ತೆಗೆದುಕೊಳ್ತೇವೆ ಎಂದು ವರಿಷ್ಟರು ಹೇಳಿದ್ದಾರೆಂದು ರಂಜಿತಾ ಹೇಳಿಕೆ ನೀಡಿದ್ದಾರೆ.

Next Story

RELATED STORIES