Top

ವಿವಾದಿತ ಸಿಲ್ಕ್ ಎಂಪೋರಿಯಂ‌ ಮಳಿಗೆಗೆ ಬೀಗ

ವಿವಾದಿತ ಸಿಲ್ಕ್ ಎಂಪೋರಿಯಂ‌ ಮಳಿಗೆಗೆ ಬೀಗ
X

ಮೈಸೂರು: ಬಾಡಿಗೆ ಹಣವೂ ನೀಡದೇ ಮಳಗೆಯನ್ನೂ ಬಿಟ್ಟುಕೊಡದೇ, ಮಾಲೀಕನ ಪತ್ನಿ ಆತ್ಮಹತ್ಯೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಚಾಮುಂಡಿ ಬೆಟ್ಟದ ಸಮೀಪವಿರುವ ಕಾವೇರಿ ಎಂಪೋರಿಯಂ ಮಳಿಗೆಗೆ ಬೀಗ ಹಾಕಲಾಗಿದೆ.

ಸಂದೇಶ್ ನಾಗರಾಜ್ ಅವರಿಗೆ ಸೇರಿದ್ದ ಮಳಿಗೆಯನ್ನು ಚಾಂದ್ ಪಾಷಾ ಅವರಿಗೆ ಬಾಡಿಗೆಗೆ ನೀಡಲಾಗಿತ್ತು. ಮಾಸಿಕ ಶೇ.16 ರಷ್ಟು ಲಾಭ ನೀಡುವ ಕರಾರಿನ ಮೇರೆಗೆ 3 ವರ್ಷಗಳ ಅವಧಿಗೆ ಬಾಡಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಕರಾರಿನಂತೆ ಚಾಂದ್‌ಪಾಷಾ ಲಾಭಾಂಶ ನೀಡದೇ ಸುಮಾರು 10 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಪದೇಪದೆ ಜಗಳ ನಡೆಯುತ್ತಿತ್ತು.

ಮಾಲೀಕ‌ ಸಂದೇಶ್ ನಾಗರಾಜ್ ಪುತ್ರ ಮಂಜೇಶ್ ನಾಗರಾಜ್​ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು ಮಳಿಗೆಯನ್ನು ತೆರವು ಮಾಡಿಸಿಕೊಡುವಂತೆ ಮನವಿ ಮಾಡಿದ್ದರು. ತಹಶೀಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ಪೊಲೀಸರು ಮಳಿಗೆ ವಶಪಡಿಸಿಕೊಳ್ಳಲು ಬಂದಾಗ ನಾಟಕೀಯ ಬೆಳವಣಿಗೆ ನಡೆಯಿತು.

ಅಧಿಕಾರಿಗಳ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಮಳಿಗೆ ಬಿಟ್ಟುಕೊಡಿ ಎಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಚಾಂದ್‌ ಪಾಷಾ ಪತ್ನಿ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಅಧಿಕಾರಿಗಳ ತಂಡ ಮಳಿಗೆ ಬೀಗ ಹಾಕಿ ಚಾಂದ್ ಪಾಷಾ ಮೇಲೆ‌ ಎಫ್​ಐಆರ್ ದಾಖಲು ಮಾಡಿಕೊಂಡಿದೆ.

Next Story

RELATED STORIES