Top

ಎನ್​.ಮಹೇಶ್ ರಾಜೀನಾಮೆ: ದೋಸ್ತಿ ಸರಕಾರದ ಮೊದಲ ವಿಕೆಟ್ ಪತನ

ಎನ್​.ಮಹೇಶ್ ರಾಜೀನಾಮೆ: ದೋಸ್ತಿ ಸರಕಾರದ ಮೊದಲ ವಿಕೆಟ್ ಪತನ
X

ಬಹುಜನ ಸಮಾಜ ಪಕ್ಷದ ಶಾಸಕ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್​. ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ದೋಸ್ತಿ ಸರಕಾರದ ಮೊದಲ ವಿಕೆಟ್ ಪತನಗೊಂಡಂತಾಗಿದೆ.

ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಗುರುವಾರ ದಿಢೀರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್​.ಮಹೇಶ್, ಪಕ್ಷವನ್ನು ರಾಜ್ಯಾದ್ಯಂತ ಕಟ್ಟಿ ಬೆಳೆಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದರು.

ಪಕ್ಷ ಕಟ್ಟುವ ಹಾಗೂ ತಳಸಮುದಾಯದ ಜನರ ಪರ ಚಳವಳಿ ಮುಂದುವರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇನೆ ಹೊರತು ಸರಕಾರವನ್ನು ಅತಂತ್ರಗೊಳಿಸುವ ಉದ್ದೇಶದಿಂದ ಅಲ್ಲ. ಸರಕಾರಕ್ಕೆ ನಮ್ಮ ಬೆಂಬಲ ಮುಂದುವರಿಯಲಿದೆ. ಸರಕಾರ ಬೀಳಿಸುವ ಯಾವುದೇ ಯೋಚನೆ ಇಲ್ಲ ಎಂದು ಮಹೇಶ್ ಸ್ಪಷ್ಟಪಡಿಸಿದರು.

ನನ್ನ ವೈಯಕ್ತಿಕ ಇಚ್ಛೆಯಿಂದ ಸಚಿವ ಸ್ಥಾನದಿಂದ ಹೊರಗೆ ಬಂದಿದ್ದೇನೆ. ನನ್ನ ಮೇಲೆ ಯಾವುದೇ ಒತ್ತಡ ಇಲ್ಲ. ನಾಲ್ಕು ತಿಂಗಳ ಕಾಲ ಸಚಿವನಾಗಿ ನನ್ನ ಕೆಲಸ ತೃಪ್ತಿ ನೀಡಿದೆ. ಶಿಕ್ಷಣ ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಒಂದು ಹಂತದವರೆಗೆ ಕೆಲಸ ಮಾಡಿದ್ದೇನೆ ಎಂದು ಮಹೇಶ್ ನುಡಿದರು.

Next Story

RELATED STORIES