Top

54 ಕೋಟಿ ಮೌಲ್ಯದ ಕೀರ್ತಿ ಚಿದಂಬರಂ ಆಸ್ತಿ ಮುಟ್ಟುಗೋಲು

54 ಕೋಟಿ ಮೌಲ್ಯದ ಕೀರ್ತಿ ಚಿದಂಬರಂ ಆಸ್ತಿ ಮುಟ್ಟುಗೋಲು
X

ಐಎನ್​ಎಕ್ಸ್ ಮೀಡಿಯಾ ವಂಚನೆ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ದೇಶ ಮತ್ತು ವಿದೇಶದಲ್ಲಿ ಸೇರಿದ 54 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ.

ಕಾರ್ತಿ ಚಿದಂಬರಂ ಅವರಿಗೆ ಸೇರಿದ ಭಾರತ, ಇಂಗ್ಲೆಂಡ್ ಹಾಗೂ ಸ್ಪೇನ್​ನಲ್ಲಿನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರ ಒಟ್ಟಾರೆ ಮೌಲ್ಯ 54 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಮಾಜಿ ಹಣಕಾಸು ಸಚಿವರಾಗಿದ್ದಾಗ ವಿದೇಶೀ ಬಂಡವಾಳವಾಗಿ 300 ಕೋಟಿ ರೂ. ವನ್ನು ಐಎನ್​ಎಕ್ಸ್ ಸಂಸ್ಥೆ ಪಡೆದಿತ್ತು. ಇದೇ ವೇಳೆ ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಒಡೆತನದ ಟೆಲಿವಿಷನ್ ಕಂಪನಿಗೆ ಲಂಚ ನೀಡಲಾಗಿತ್ತು. ಈ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿದ್ದು, ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದೆ.

Next Story

RELATED STORIES