Top

ಅಪ್ಪಳಿಸಿದ ತಿತ್ಲಿ ಚಂಡಮಾರುತ: ಒಡಿಶಾದ 3 ಜಿಲ್ಲೆ ಹೈ ಅಲರ್ಟ್​

ಅಪ್ಪಳಿಸಿದ ತಿತ್ಲಿ ಚಂಡಮಾರುತ: ಒಡಿಶಾದ 3 ಜಿಲ್ಲೆ ಹೈ ಅಲರ್ಟ್​
X

ತಿತ್ಲಿ ಚಂಡಮಾರುತ ಗುರುವಾರ ಬೆಳಗ್ಗೆ ಒಡಿಶಾ ಹಾಗೂ ಆಂಧ್ರಪ್ರದೇಶದ ಕರಾವಳಿ ತೀರಕ್ಕೆ ನಿರೀಕ್ಷೆಯಂತೆ ಅಪ್ಪಳಿಸಿದ್ದು, ಒಡಿಶಾದ ಮೂರು ಜಿಲ್ಲೆಗಳಲ್ಲಿ ತೀವ್ರ ಪರಿಣಾಮ ಬೀರಿದ್ದು, ಒಂದು ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ.

ಗಂಜಾಮ್, ಪುರಿ ಮತ್ತು ಗಜಪತಿ ಜಿಲ್ಲೆಗಳಲ್ಲಿ ಚಂಡಮಾರುತ ಹೆಚ್ಚಿನ ಹಾನಿಯುಂಟು ಮಾಡಿದ್ದು, ಸಾವಿರಾರು ಸಂಖ್ಯೆಯಲ್ಲಿ ಮರಗಳು ಧರೆಗುಳಿದಿದ್ದು, ಮನೆಯ ಛಾವಣಿ ಹಾರಿ ಹೋಗಿವೆ.

ಚಂಡಮಾರುತದಿಂದ ಹಾನಿಯಾದ ಬಗ್ಗೆ ಯಾವುದೇ ವರದಿಗಳು ಇನ್ನೂ ಬಂದಿಲ್ಲ. ಸಂಚಾರಕ್ಕೆ ಅಡ್ಡಿ ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಂಡಿವೆ. ಪ್ರಮುಖವಾಗಿ ಮೂರು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದೆ ಎಂದು ವಿಶೇಷ ಪರಿಹಾರ ಕೇಂದ್ರದ ಬಿ.ಪಿ. ಸೇಥಿ ತಿಳಿಸಿದ್ದಾರೆ.

ಒಡಿಶಾದಲ್ಲಿ ಪರಿಹಾರ ಕಾರ್ಯಚರಣೆಗೆ 14 ತಂಡಗಳನ್ನು ನೇಮಿಸಲಾಗಿದೆ. ಆಂಧ್ರಪ್ರದೇಶದಲ್ಲಿ 4 ತಂಡಗಳು ಕಾರ್ಯಾಚರಣೆಗಿಳಿದಿವೆ. ಶಾಲಾ-ಕಾಲೇಜುಗಳಿಗೆ ಅಕ್ಟೋಬರ್ 14ರವರೆಗೆ ರಜೆ ಘೋಷಿಸಲಾಗಿದೆ.

ಆಂಧಪ್ರದೇಶದಲ್ಲಿ ತಿತ್ಲಿ ಚಂಡಮಾರುತದ ಪ್ರಭಾವದಿಂದ 2 ಸಾವು ಸಂಭವಿಸಿದೆ. ಭಾರೀ ಮಳೆಗೆ ಮನೆ ಕುಸಿದ ಪರಿಣಾಮ ಸೂರ್ಯ ರಾವ್ (55) ಹಾಗೂ ಮರ ಬಿದ್ದು ತುಡಿ ಅಪಲಾ ನರಸಮ್ಮ (62) ಎಂಬ ಮಹಿಳೆ ಮೃತಪಟ್ಟಿದ್ದಾರೆ.

Next Story

RELATED STORIES