Top

ರಾಮನಗರ ಉಪಚುನಾವಣೆಗೆ ಮೈತ್ರಿಪಕ್ಷದ ಅಭ್ಯರ್ಥಿ ಫೈನಲ್

ರಾಮನಗರ ಉಪಚುನಾವಣೆಗೆ ಮೈತ್ರಿಪಕ್ಷದ ಅಭ್ಯರ್ಥಿ ಫೈನಲ್
X

ರಾಮನಗರ: ರಾಮನಗರ ಉಪಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಯಾಗಿ ಅನಿತಾಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ. ದೇವೇಗೌಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಭ್ಯರ್ಥಿ ಫೈನಲ್ ಮಾಡಿದ್ದು, ಅನಿತಾ ಕುಮಾರಸ್ವಾಮಿ ಅವರ ಗೆಲುವಿಗೆ ಶ್ರಮಿಸಲು ಕರೆ ನೀಡಲಾಗಿದೆ.

ರಾಮನಗರ ಭಾಗದ ಜೆಡಿಎಸ್ ಮುಖಂಡರ ಜೊತೆ ಚರ್ಚೆ ನಡೆಸಿದ ಹೆಚ್.ಡಿ.ದೇವೇಗೌಡರು, ಅನಿತಾಕುಮಾರಸ್ವಾಮಿಯನ್ನ ರಾಮನಗರದ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಮುಂದಾಗಿದ್ದು, ಕಾರ್ಯಕರ್ತರಿಗೆ ಸಹಕರಿಸಲು ಸೂಚಿಸಲಾಗಿದೆ.

ಇನ್ನು ದೇವೇಗೌಡರ ಮಾತಿಗೆ ಕಾರ್ಯಕರ್ತರು ಸರ್ವಾನುಮತದ ಒಪ್ಪಿಗೆ ನೀಡಿದ್ದು, ಕಾಂಗ್ರೆಸ್ ಕಾರ್ಯಕರ್ಯಕರ್ತರ ಜೊತೆಯೂ ಒಗ್ಗೂಡಿಕೊಂಡು ಹೋಗಲು ಸೂಚನೆ ನೀಡಿದ್ದಾರೆ.

ಸೋಮವಾರ ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಈ ಕುರಿತು ದೇವೇಗೌಡರು ಮುಸ್ಲಿಂ ನಾಯಕರ ಜೊತೆ ಸಭೆ ನಡೆಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಮತ ಜೆಡಿಎಸ್‌ಗೆ ಬಂದಿರಲಿಲ್ಲ. ಅಲ್ಲದೇ ಮುಸ್ಲಿಂ ಮತದಾರರು ಸಂಪೂರ್ಣವಾಗಿ ಜೆಡಿಎಸ್‌ನಿಂದ ದೂರವಾಗಿದ್ದ ಹಿನ್ನೆಲೆ, ಮುಸ್ಲಿಂ ನಾಯಕರ ಜೊತೆ ಸಭೆ ನಡೆಸಿ, ಸಮುದಾಯಕ್ಕೆ ಆಗಬೇಕಾದ ಕೆಲಸ ಮಾಡಿಕೊಡೋಣ. ಯಾವುದೇ ಕಾರಣಕ್ಕೂ ವಿಮುಖರಾಗಬೇಡಿ. ಜೆಡಿಎಸ್ ಗೆ ಬೆಂಬಲ ನೀಡಿ ಎಂದು HDD ಮನವಿ ಮಾಡಿಕೊಂಡಿದ್ದಾರೆ.

Next Story

RELATED STORIES