ಸಾರ್ವಜನಿಕರ ಸಣ್ಣ ಸುಳಿವು ಇಡೀ ಪ್ರಕರಣಕ್ಕೆ ತಿರುವು!

ಹಾಡುಹಗಲೇ ಲಕ್ಷ ಲಕ್ಷ ಹಣವಿದ್ದ ಎಟಿಎಂಗೆ ಹಣ ತುಂಬುವ ವಾಹನವನ್ನೇ ಕದ್ದು ವಾಹನ ಚಲಾಯಿಸಿಕೊಂಡು ಪರಾರಿಯಾಗಿರು ಘಟನೆ ಬಾಣಸವಾಡಿಯ ಕಲ್ಯಾಣನಗರದ ಎಚ್ ಡಿಎಫ್ ಸಿ ಎಟಿಎಂ ಬಳಿ ನಡೆದಿದೆ.
ವಿವಿಧ ಬ್ಯಾಂಕ್ಗಳ ಎಟಿಎಂಗಳಿಗೆ ಹಣ ತುಂಬುತ್ತಿದ್ದ ರೆಡಿಯಂಟ್ ಏಜೆನ್ಸಿ ಸಿಬ್ಬಂದಿ ಎಟಿಎಂ ಗೆ ಹಣ ತುಂಬಲು ಮಧ್ಯಾಹ್ನ 2-30ರ ಸಮಯಕ್ಕೆ ತೆರಳಿದ್ದರು. ಟಾಟಾ ಸುಮೋನಲ್ಲಿದ್ದ ಇಬ್ಬರು ಕಸ್ಟೋಡಿಯನ್ಗಳಾದ ದೀಪಕ್ ಹಾಗೂ ಸತೀಶ್, 6 ಲಕ್ಷ ಹಣವನ್ನು ಎಟಿಎಂ ಒಳಗೆ ತೆರಳಿದ್ದರು. ಭದ್ರತೆ ನೀಡಬೇಕಿದ್ದ ಗನ್ ಮ್ಯಾನ್ ಚಂದ್ರು ಮೂತ್ರ ವಿಸರ್ಜನೆಗೆ ಹೋಗಿದ್ದರು. ವಾಹನ ನೋಡಿಕೊಳ್ಳಬೇಕಿದ್ದ ಚಾಲಕ ಸುಮನ್ ಕೂಡ ಚಂದ್ರು ಜೊತೆಗೆ ಹೋಗಿದ್ದರು. ಈ ವೇಳೆ ಎಟಿಎಂ ಎದುರು ನಿಲ್ಲಿಸಿದ್ದ ಲಕ್ಷ-ಲಕ್ಷ ಹಣವಿದ್ದ ವಾಹನವನ್ನೇ ಕದ್ದು ಚಲಾಯಿಸಿಕೊಂಡು ಹೋಗಲಾಗಿದೆ.
ಇತ್ತ ಕಳ್ಳನ ಕರಾಮತ್ತು ನೋಡಿದ ಕೂಡಲೇ ಅಲ್ಲಿಯೇ ಇದ್ದ ಕೆಲ ಸ್ಥಳೀಯರು ಆ ವಾಹನವನ್ನು ಚೇಸ್ ಮಾಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಟ್ರಾಫಿಕ್ ಪೊಲೀಸರನ್ನು ಅಲರ್ಟ್ ಮಾಡಿದರು. ಇದರ ಬೆನ್ನಲ್ಲೇ, ಪಬ್ಲಿಕ್ ಮತ್ತು ಪೊಲೀಸ್ ಜುಗಲ್ ಬಂದಿ ಸುಮಾರು ಒಂದು ಕಿಲೊಮೀಟರ್ ವರೆಗು ಸಾಗಿದರು ಕೊನೆಗೆ ಎಲ್ಲರೂ ಬೆನ್ನಟ್ಟಿ ಆ ವಾಹನವನ್ನು ಹಿಡಿದಿದ್ದಾರೆ.
ಇತ್ತ ಬಾಣಸವಾಡಿ ಪೊಲೀಸರರು ಕದ್ದೊಯ್ದಿದ್ದ ವಾಹನವನ್ನು ಜಪ್ತಿ ಮಾಡಿದ್ದಾರೆ. ಪರಿಶೀಲನೆ ಮಾಡಿದಾಗ ಚಾಲಕ ಸುಮನ್ ಬಳಿ ಟಾಟಾ ಸುಮೋ ಕೀ ಸಿಕ್ಕಿದೆ. ಆದ್ರೆ ಮಂಕಿಕ್ಯಾಪ್ ಕಳ್ಳ ವಾಹನ ಕದಿಯಲು ನಕಲಿ ಕೀ ಬಳಸಿದ್ದಾನೆ ಅನ್ನೋ ಅನುಮಾನ ವ್ಯಕ್ತವಾಗಿದೆ.
ಆ ಕಳ್ಳನ ಜೊತೆ ಸೇರ್ಕೊಂಡು ಗನ್ಮ್ಯಾನ್ ಚಂದ್ರು ಹಾಗೂ ಚಾಲಕ ಸುಮನ್ ಎಟಿಎಂಗೆ ಹಣ ತುಂಬುವ ವಾಹನ ಕದಿಯಲು ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಗನ್ಮ್ಯಾನ್ ಚಂದ್ರು ಹಾಗೂ ಚಾಲಕ ಸುಮನ್ ನನ್ನು ವಶಕ್ಕೆ ಪಡೆದಿರುವ ಬಾಣಸವಾಡಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.