Top

'ಚಲುವರಾಯಸ್ವಾಮಿ ರಾಜಕೀಯ ವ್ಯಭಿಚಾರಿ'

ಮಂಡ್ಯ: ಮೂರ್ನಾಲ್ಕು ದಿನದಿಂದ ಮಂಡ್ಯದಲ್ಲಿ ಮಾಜಿ, ಹಾಲಿ ಸಚಿವ ಶಾಸಕರ ವಾಕ್ಸಮರ ನಡೆಯುತ್ತಿದ್ದು, ಇಂದು ಕೂಡ ಜೆಡಿಎಸ್ ಶಾಸಕ ಸುರೇಶ್ ಗೌಡ, ಮಾಜಿ ಸಚಿವ ಚಲುವರಾಯಸ್ವಾಮಿ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.

ಚಲುವರಾಯಸ್ವಾಮಿ ವಿರುದ್ಧ ಮಂಡ್ಯ ಜೆಡಿಎಸ್ ನಾಯಕರ ವಾಕ್ಸಮರ ಮುಂದುವರೆದಿದ್ದು, ಚಲುವರಾಯಸ್ವಾಮಿ ಒಬ್ಬ ರಾಜಕೀಯ ವ್ಯಭಿಚಾರಿ. ಅವರು ಡೆಡ್ ಹಾರ್ಸ್ ಅಲ್ಲ ಕ್ಲೋಸ್ಡ್ ಹಾರ್ಸ್ ಎಂದು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಹೇಳಿಕೆ ನೀಡಿದ್ದಾರೆ.

ಅಲ್ಲದೇ ಚಲುವರಾಯಸ್ವಾಮಿ ಮುಗಿದು ಯಾವುದೋ‌ ಕಾಲ‌ ಆಗಿದೆ. ನಿನ್ನೆ ಮೊನ್ನೆ ಸತ್ತಿರೋದಕ್ಕೆ ಡೆಡ್ ಅಂತಾರೆ. ಜನ‌ ಕೊಟ್ಟ ಅಧಿಕಾರವನ್ನ ಮಾರಾಟ ಮಾಡಿಕೊಂಡ ನೆಕ್ಸ್ಟ್ ಮೂಮೆಂಟ್ ಇಸ್ ಡೆಡ್ ಎಂದಿದ್ದಾರೆ.

ಚಲುವರಾಯಸ್ವಾಮಿ ಮೊದಲಿಂದಲೂ ರಾಜಕೀಯ ವ್ಯಭಿಚಾರದಲ್ಲಿ ಬಂದವನು. ಒಂದು ಪಕ್ಷದಲ್ಲಿ ಇದ್ದುಕೊಂಡು ಎದುರಾಳಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡ್ತಿದ್ದವನು. 2013ರ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಗೆಲುವಿಗೆ ಕಾರಣ ಚಲುವರಾಯಸ್ವಾಮಿ. ಸಿಎಸ್ ಪುಟ್ಟರಾಜು ಸೋಲಿಸಲು ನಾನಾ ತಂತ್ರಗಾರಿಕೆ‌ ಮಾಡಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಳಿ ಹೊಂದಾಣಿಕೆ ಮಾಡಿಕೊಂಡಿದ್ರು. ಇದನ್ನ ರಾಜಕೀಯ ವ್ಯಭಿಚಾರ ಅಂತ ನಾನು ಕರೆಯುತ್ತೇನೆ ಎಂದು ಹೇಳಿದ್ದಾರೆ.

ಚಲುವರಾಯಸ್ವಾಮಿಗೆ ಸವಾಲ್ ಹಾಕಿದ ಸುರೇಶ್ ಗೌಡ, ಶಕ್ತಿ ಸಾಮರ್ಥ್ಯ ಪ್ರದರ್ಶನ ಮಾಡಬೇಕೆಂದ್ರೆ ಈ‌ ಚುನಾವಣೆಗೆ ನಿಂತರೆ ಒಳ್ಳೆಯದು. ಚುನಾವಣೆಗೆ ನಿಂತು ಅಲ್ಪ ಸ್ವಲ್ಪ ಸಾಮರ್ಥ್ಯ ಇದೇ ಅಂತಾರಲ್ಲ ಅದನ್ನು ತೋರಿಸಲಿ ಎಂದು ಚಲುವರಾಯಸ್ವಾಮಿ ಸಾಮರ್ಥ್ಯ ಪ್ರಶ್ನೆ ಮಾಡಿದ್ದಾರೆ.

Next Story

RELATED STORIES