Top

ಟಿಪ್ಪು ಜಯಂತಿಯನ್ನು ಬಂದ್ ಮಾಡಿ- ಪ್ರತಾಪ್ ಸಿಂಹ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗಿಂದು ಚಾಲನೆ ನೀಡಲಾಯಿತು. ಇನ್ಫೋಸಿಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿಯವರು ಕಾರ್ಯಕ್ರಮ ಉದ್ಘಾಟಿಸಿದ್ದು, ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್, ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದೇ ವೇಳೆ ಮಾತನಾಡಿದ ಪ್ರತಾಪ್ ಸಿಂಹ, ಟಿಪ್ಪು ಜಯಂತಿಯನ್ನ ವಿರೋಧ ಮಾಡಿದ್ರು. ಇವತ್ತು ದಸರಾ ಆಚರಿಸುತ್ತಿದ್ದರೆ ಅದು ಮೈಸೂರು ಅರಸರ ಕೊಡುಗೆ.ಅಂತಹ ಕುಟುಂಬದ ರಕ್ತಪಾತಕ್ಕೆ ಕಾರಣರಾದವರ ಜಯಂತಿ ಬೇಡ ಎಂದು ಪ್ರತಾಪ್ ಸಿಂಹ ಪರೋಕ್ಷವಾಗಿ ಟಿಪ್ಪು ಜಯಂತಿಯನ್ನ ವಿರೋಧಿಸಿದರು.

ಅಲ್ಲದೇ 38 ವರ್ಷಗಳ ಕಾಲ ಮೈಸೂರು ಸಂಸ್ಥಾನದಲ್ಲಿ ಕಗ್ಗತ್ತಲು ಕವಿದಿತ್ತು. ಇದಕ್ಕೆ ಕಾರಣರಾದಂಥವರು ಯಾರು ಅನ್ನೋದು ನಿಮಗೆ ಗೊತ್ತಿದೆ. ಅಂಥವರ ಜಯಂತಿಯನ್ನ ನಿಮ್ಮ ಕಾಲಘಟ್ಟದಲ್ಲಿ ಆಚರಿಸುವುದನ್ನು ಬಂದ್ ಮಾಡಿ ಹೇಳಿದರು.

Next Story

RELATED STORIES