Top

'ಪುಟ್ಟಗೌರಿ' ಪಾತ್ರದಿಂದ ಹೊರಗೆ ಬರ್ತಾರಂತೆ ನಟಿ!

ಪುಟ್ಟಗೌರಿ ಪಾತ್ರದಿಂದ ಹೊರಗೆ ಬರ್ತಾರಂತೆ ನಟಿ!
X

ಪುಟ್ಟ ಗೌರಿ ಮದುವೆ. ನಾಡಿನ ಕನ್ನಡ ಮನಗಳ ಮನಸ್ಸು ಗೆದ್ದಿರುವ ಯಶಸ್ವಿ ಧಾರಾವಾಹಿ. ಶುರುವಾದಾಗಿಂದ ಪ್ರತಿವಾರದ ರೇಟಿಂಗ್​​ನಲ್ಲಿ ಪುಟ್ಟಗೌರಿ ಟಾಪ್ ಫೈವ್ ಸ್ಥಾನವನ್ನು ಗಟ್ಟಿಮಾಡಿಕೊಂಡೇ ಬರುತ್ತಿದೆ.

ಈ ಮೆಗಾ ಧಾರವಾಹಿಯಲ್ಲಿ ಬರುವ ಪ್ರತಿ ಪಾತ್ರವೂ ಅಭಿಮಾನಿಗಳ ಹೃದಯ ಗೆದ್ದಿದೆ. ಅದರಲ್ಲೂ ಪುಟ್ಟಗೌರಿ ಪಾತ್ರವಂತೂ ನಾಡಿನ ಮನೆಮಾತಾಗಿದೆ. ಈ ಪಾತ್ರದಿಂದಲೇ ಪುಟ್ಟಗೌರಿ ಎಂದೇ ಖ್ಯಾತರಾದ ನಟಿ ರಂಜನಿ ರಾಘವನ್​ ಈ ಪಾತ್ರದಿಂದ ಹೊರಗೆ ಬರುತ್ತಿದ್ದಾರೆ.

ಪುಟ್ಟಗೌರಿ ಧಾರವಾಹಿಯ ಸಣ್ಣ ಘಟನೆ, ಪಾತ್ರಗಳು ಕೂಡ ಟ್ರೋಲ್ ಆಗಿಬಿಡುತ್ತವೆ. ಅಷ್ಟರ ಮಟ್ಟಿಗೆ ಪ್ರಭಾವ ಬೀರಿದ್ದ ಪಾತ್ರದಿಂದ ರಂಜನಿ ಹೊರಬರುತ್ತಿದ್ದಾರೆ. ಕಾರಣ ಮಂಗಳಗೌರಿ.

ರಂಜನಿ ರಾಘವನ್ ಕರುನಾಡಿನ ಮನೆಮಗಳನಾಗಿಸಿರುವ ಪುಟ್ಟಗೌರಿ ಪಾತ್ರದಿಂದ ದೂರವಾಗಲು ಕಾರಣ ಮಂಗಳಗೌರಿ. ಅಂದ್ರೆ ಇದು ಪುಟ್ಟಗೌರಿ ಮದುವೆಯಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಪಾತ್ರವಂತೆ.

ಮಂಗಳಗೌರಿ ಪಾತ್ರ ಪುಟ್ಟಗೌರಿ ಪಾತ್ರಕಿಂತ ಮಹತ್ವದ ಪಾತ್ರ ಅಂತೆ.. ಈ ಕಾರಣಕ್ಕಾಗಿಯೇ ರಂಜನಿ ರಾಘವನ್ ಪುಟ್ಟ ಗೌರಿ ಪಾತ್ರದಿಂದ ಹೊರಬರಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ರಂಜನಿ ಹೇಳೀಕೆಯೇ ಭಿನ್ನವಾಗಿದೆ.

ಒಂದಲ್ಲಾ.. ಎರಡಲ್ಲಾ.. ಸತತ ಮೂರೂವರೆ ವರ್ಷಗಳಿಂದ ನಾನು ಪುಟ್ಟಗೌರಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಆ ಪಾತ್ರದೊಂದಿಗೆ ನನಗೆ ನೇಮ್ ಆ್ಯಂಡ್ ಫೇಮ್ ಎರಡೂ ಸಿಕ್ಕಿವೆ. ಆದರೆ ಒಂದೇ ರೀತಿಯ ಪಾತ್ರ ಮತ್ತು ವಾತಾವರಣದಿಂದ ಹೊರಬರಲು ತಿರ್ಮಾನಿಸಿದ್ದೇನೆ ಎಂದಿದ್ದಾರೆ.

ರಾಜಹಂಸ ಚಿತ್ರದ ನಂತರ ಎರಡನೇ ಸಿನಿಮಾ ಶುರುವಾಗಿದೆ. ಸಿನಿಮಾದ ಕಡೆ ಹೆಚ್ಚು ಗಮನ ಹರಿಸಲು ಈ ನಿರ್ಧಾರಕ್ಕೆ ಬಂದಿದ್ದೇನೆ. ಹಾಗಾಗಿಯೇ ಪುಟ್ಟಗೌರಿಗೆ ಅಂತ್ಯ ಹಾಡಿ ಹೊಸ ಹೆಜ್ಜೆ ಇಡುತ್ತಿದ್ದೇನೆ ಎಂದು ರಂಜನಿ ಸ್ಪಷ್ಟನೆ ನೀಡಿದ್ದಾರೆ.

ರಂಜನಿ ಕಳೆದ ವರ್ಷ ರಾಜಹಂಸ ಅನ್ನೋ ಚಿತ್ರದ ಮೂಲಕ ಕಿರುತೆರೆಯಿಂದ ಹಿರಿತೆರೆಗೆ ಲಗ್ಗೆ ಹಾಕಿದ್ದರು. ಈಗ ಹೊಸ ಸಿನಿಮಾಕ್ಕಾಗಿ ಸಾಕಷ್ಟು ತಯಾರಿ ಮತ್ತು ಗಮನ ಹರಿಸುವ ಕಾರಣದಿಂದಾಗಿ ಹೊರ ಬರ್ತಿದ್ದೇನೆ ಎಂದಿದ್ದಾರೆ.

ಆದರೆ ರಂಜನಿ ಇಲ್ಲದೆ ಪುಟ್ಟಗೌರಿ ಮದುವೆ ಸೀರಿಯಲ್ ಸಾಗುತ್ತಾ? ಪುಟ್ಟಗೌರಿಯನ್ನು ಬಿಟ್ಟು ಮಂಗಳ ಗೌರಿಯನ್ನ ಜನ ಒಪ್ಪಿಕೊಳ್ಳುತ್ತಾರಾ? ಸಿನಿಮಾಗರಂಗದಲ್ಲಿ ರಂಜನಿ ಗೆಲ್ಲುತ್ತಾರಾ? ಈ ರೀತಿ ಹತ್ತು ಹಲವು ಪ್ರಶ್ನೆಗಳಿಗೆ ಕಾಲವೇ ಉತ್ತರ ನೀಡಲಿದೆ.

ಶ್ರೀಧರ್ ಶಿವಮೊಗ್ಗ_ಎಂಟರ್​ಟೈನ್ಮೆಂಟ್ ಬ್ಯೂರೋ_TV5

Next Story

RELATED STORIES