Top

ಕಮಿಷನ್​ನಲ್ಲೂ ಮೋಸ: ಮಲ್ಟಿಪ್ಲೆಕ್ಸ್ ವಿರುದ್ಧ ಪ್ರೇಮ್ ಆಕ್ರೋಶ

ಕಮಿಷನ್​ನಲ್ಲೂ ಮೋಸ: ಮಲ್ಟಿಪ್ಲೆಕ್ಸ್ ವಿರುದ್ಧ ಪ್ರೇಮ್ ಆಕ್ರೋಶ
X

ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಲತಾಯಿ ಧೋರಣೆ ನಿನ್ನೆ ಮೊನ್ನೆಯದಲ್ಲ. ಕನ್ನಡ ಚಿತ್ರಗಳ ಬಿಡುಗಡೆಗೆ ತಕರಾರು ಎತ್ತುವ ಮಲ್ಟಿಪ್ಲೆಕ್ಸ್​ ಗಳು ಇದೀಗ ಕಮಿಷನ್ ನೀಡುವಲ್ಲೂ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ನಿರ್ದೇಶಕ ಪ್ರೇಮ್ ಆರೋಪಿಸಿದ್ದಾರೆ. ಈ ಮೂಲಕ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ವಿರುದ್ಧ ತಿರುಗಿಬಿದ್ದಿದ್ದಾರೆ.

ಬಹುನಿರೀಕ್ಷಿತ ದಿ ವಿಲನ್ ಚಿತ್ರದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ಹೊಸ ವಿವಾದ ಸೃಷ್ಟಿಯಾಗಿದ್ದು, ನಿರ್ದೇಶಕ ಪ್ರೇಮ್, ಮಲ್ಟಿಪ್ಲೆಕ್ಸ್​ಗಳ ಮಹಾಮೋಸ ಎಂದು ಆರೋಪಿಸಿ ಟ್ವೀಟ್ ಮಾಡಿದ್ದಾರೆ.

ಕನ್ನಡ ಚಿತ್ರಗಳಿಗೆ ಮಾತ್ರ ಶೇಕಡಾ 50ರಷ್ಟು ಪಾಲು ನೀಡುತ್ತಿರುವ ಮಲ್ಟಿಪ್ಲೆಕ್ಸ್ ಥಿಯೇಟರ್ ಮಾಲೀಕರು, ಪರಭಾಷಾ ಸಿನಿಮಾಗಳಿಗೆ 55ರಷ್ಟು ಕಮಿಷನ್ ಹಣ ನೀಡುತ್ತಿವೆ. ಈ ಮೂಲಕ ಕನ್ನಡ ಚಿತ್ರದ ವಿತರಕರು ಹಾಗೂ ಮಾಲೀಕರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡ ಸಿನಿಮಾ ಹಾಗೂ ನಿರ್ಮಾಪಕರಿಗೆ ಅನ್ಯಾಯ ಆಗುತ್ತಿದೆ. ಹೀಗಾದ್ರೆ, ಕನ್ನಡ ಚಿತ್ರಗಳ ಏಳಿಗೆ ಹೇಗಾಗುತ್ತೆ? ಎಂದು ಪ್ರಶ್ನಿಸಿರುವ ಪ್ರೇಮ್​, ಈ ಸಮಸ್ಯೆಯನ್ನು ವಾಣಿಜ್ಯ ಮಂಡಳಿ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.

Next Story

RELATED STORIES