Top

ವಿಶಿಷ್ಟ ದಾಖಲೆ ಬರೆದ ಮಲೇಷ್ಯಾ, ಮ್ಯಾನ್ಮರ್ ಕ್ರಿಕೆಟ್ ಪಂದ್ಯ

ವಿಶಿಷ್ಟ ದಾಖಲೆ ಬರೆದ ಮಲೇಷ್ಯಾ, ಮ್ಯಾನ್ಮರ್ ಕ್ರಿಕೆಟ್ ಪಂದ್ಯ
X

ಕೌಲಲಾಂಪುರ: ಹೊಡಿ ಬಡಿ ಆಟ ಟಿ20 ಕ್ರಿಕೆಟ್​ ಅಂದ್ಮೇಲೆ ಅಲ್ಲಿ ಬೌಂಡರಿ ಸಿಕ್ಸರ್​ಗಳ ಅಬ್ಬರದ ಇದ್ದೆ ಇರುತ್ತೆ. ಎಂತಹ ಕಳಪೆ ತಂಡವೇ ಆದರೂ ಕೂಡ ಬಲಿಷ್ಠ ತಂಡಗಳಿಗೆ ದೊಡ್ಡ ಫೈಟ್ ಕೊಟ್ಟು ರನ್ ಮಳೆಯ ಹರಿದು ಬರುತ್ತೆ. ಆದರೆ ಇಲ್ಲೊಂದು ನಡೆದಿರುವ ಟಿ-20 ಪಂದ್ಯ ಚುಟುಕು ಕ್ರಿಕೆಟ್​ನಲ್ಲಿ ಏನೂ ಬೇಕಾದರೂ ನಡೆಯುತ್ತೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.

ಇದು ಯಾವುದೋ ಹಾದಿ ಬೀದಿಯಲ್ಲಿ ನಡೆಯೋ ಗಲ್ಲಿ ಕ್ರಿಕೆಟ್​ ಅಲ್ಲ. ಮಲೇಷ್ಯಾದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟಿ20 ಅರ್ಹತಾ ಟೂರ್ನಿ. ಅರ್ಹತಾ ಟೂರ್ನಿಯಲ್ಲಿ ಆತಿಥೇಯ ಮಲೇಷ್ಯಾ ಮತ್ತು ಮ್ಯಾನ್ಮರ್ ತಂಡಗಳು ಮುಖಾಮುಖಿಯಾಗಿದ್ದವು. ಇಡೀ ಪಂದ್ಯದಲ್ಲಿ ಉಭಯ ತಂಡಗಳು ಆಡಿದ್ದು ಒಟ್ಟು 11.5 ಓವರ್​ಗಳನ್ನ ಆಡಿ ಗಳಿಸಿದ್ದು 15 ರನ್. ಒಟ್ಟು 10 ವಿಕೆಟ್​ಗಳು ಪತನವಾದವು.

ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮ್ಯಾನ್ಮರ್ 10.1 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 9 ರನ್​ಗಳಿಸಿ ಆಡುತ್ತಿದ್ದಾಗ ಮಳೆ ಸುರಿಯಿತು. ಹೀಗಾಗಿ ಡಕ್​ವರ್ಥ್​ ಲೂಯಿಸ್ ನಿಯಮ ಅಳವಡಿಸಿ ಮಲೇಷ್ಯಾ ತಂಡಕ್ಕೆ 8 ಓವರ್​ಗಳಲ್ಲಿ 6 ರನ್​ಗಳ ಗುರಿ ನೀಡಲಾಯಿತು.

ಗುರಿ ಬೆನ್ನತ್ತಿದ ಮಲೇಷ್ಯಾ ತಂಡ ಮೊದಲ ಓವರ್​ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ಎರಡನೇ ಓವರ್​ನಲ್ಲಿ 6 ರನ್​ಗಳ ಗುರಿ ಬೆನ್ನತ್ತಿ ಮಲೇಷ್ಯಾ 8 ವಿಕೆಟ್​ಗಳ ಗೆಲುವಿನ ನಗೆ ಬೀರಿತು. ವಿಶ್ವ ಕ್ರಿಕೆಟ್​ನಲ್ಲಿ ಇದೊಂದು ಅಪರೂಪದ ಪಂದ್ಯವಾಗಿ ದಾಖಲಾಯಿತು.

Next Story

RELATED STORIES