Top

ನ.14ಕ್ಕೆ ಟ್ರೇಲರ್, ಡಿಸೆಂಬರ್​ 21ಕ್ಕೆ ಕೆಜಿಎಫ್ ಬಿಡುಗಡೆ

ನ.14ಕ್ಕೆ ಟ್ರೇಲರ್, ಡಿಸೆಂಬರ್​ 21ಕ್ಕೆ ಕೆಜಿಎಫ್ ಬಿಡುಗಡೆ
X

ನವೆಂಬರ್ 16ಕ್ಕೆ ಬಿಡುಗಡೆಯಾಗಬೇಕಿದ್ದ ಯಶ್ ಅವರ ಮಹತ್ವಾಕಾಂಕ್ಷಿ ಚಿತ್ರ ಡಿಸೆಂಬರ್ 21ಕ್ಕೆ ಬಿಡುಗಡೆಯಾಗಲಿದೆ. ನವೆಂಬರ್ 14ಕ್ಕೆ ಟ್ರೇಲರ್ ಬಿಡುಗಡೆ ಆಗಲಿದೆ.

ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಶ್ ಹಾಗೂ ಕೆಜಿಎಫ್ ಚಿತ್ರತಂಡ, ಬಿಡುಗಡೆ ಮುಂದೂಡಿಕೆಗೆ ವಿಳಂಬ ಆಗಿದ್ದಕ್ಕೆ ಕಾರಣ ನೀಡಿತು. ಇದೇ ವೇಳೆ ಚಿತ್ರ ಬಿಡುಗಡೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಬಾಲಿವುಡ್ ನಟ ಫರ್ಹಾ ಅಖ್ತರ್ ಚಿತ್ರವನ್ನು ತಾವು ಬಿಡುಗಡೆ ಮಾಡುತ್ತಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರಲಿದೆ. ಹಿಂದಿಯಲ್ಲಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಬಾಲಿವುಡ್ ನಲ್ಲೂ ದೊಡ್ಡ ಮಟ್ಟದಲ್ಲಿ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಡುಗಡೆ ದಿನಾಂಕ ಮುಂದೂಡಲಾಗುತ್ತಿದೆ ಎಂದು ಯಶ್ ಹೇಳಿದರು.

ನನ್ನ ಚಿತ್ರ ಜೀವನದಲ್ಲಿ ಇದುವರೆಗೂ ಬಿಡುಗಡೆ ದಿನಾಂಕ ಮುಂದೂಡಲಾಗಿಲ್ಲ. ಆದರೆ ವೃತ್ತಿಜೀವನದ ಅತೀ ದೊಡ್ಡ ಚಿತ್ರವಾಗಿದ್ದು, ದೊಡ್ಡ ಮಟ್ಟದಲ್ಲಿ ತಯಾರಾಗಿರುವುದರಿಂದ ಚಿತ್ರವನ್ನು ಅನಿರ್ವಾಯವಾಗಿ ಮುಂದೂಡಲು ನಿರ್ಧರಿಸಲಾಗಿದೆ. ಚಿತ್ರ ತಡವಾಗಿದ್ದಕ್ಕೆ ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತಿದ್ದೇನೆ ಎಂದು ಯಶ್ ನುಡಿದರು.

ಅಕ್ಟೋಬರ್ 14ರಂದು ಟ್ರೇಲರ್ ಬಿಡುಗಡೆಗೆ ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ಇದೀಗ ಟ್ರೇಲರ್ ಬಿಡುಗಡೆ ದಿನಾಂಕ ನವೆಂಬರ್ 14ಕ್ಕೆ ಮುಂದೂಡಲಾಗಿದೆ. ಅಂದರೆ ಈ ಹಿಂದೆ ಚಿತ್ರ ಬಿಡುಗಡೆಗೆ ನಿರ್ಧರಿಸಲಾಗಿದ್ದ ನ.16ರ ಬದಲು ಎರಡು ದಿನ ಮುಂಚಿತವಾಗಿ ಟ್ರೇಲರ ್ ಬಿಡುಗಡೆಯಾಗಲಿದೆ.

ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್ ಮುಂತಾದವರು ಉಪಸ್ಥಿತರಿದ್ದರು.

Next Story

RELATED STORIES