ಡಾ.ಸುಧಾಮೂರ್ತಿಯವರಿಂದ ಮೈಸೂರು ದಸರಾಗೆ ಅದ್ಧೂರಿ ಚಾಲನೆ

ಮೈಸೂರು: ಇಂದಿನಿಂದ ನವರಾತ್ರಿ ಉತ್ಸವ ಆರಂಭವಾಗಿದ್ದು, ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಲಾಯಿತು. ಬೆಳಿಗ್ಗೆ 7.05ರಿಂದ7.35 ತುಲಾ ಲಗ್ನದ ಶುಭ ಮುಹೂರ್ತದಲ್ಲಿ, ಇನ್ಫೋಸಿಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ದಸರಾ ಉತ್ಸವಕ್ಕೆ ಚಾಲನೆ ನೀಡಿದ್ದು, ಕಾರ್ಯಕ್ರದಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್ ಭಾಗಿಯಾಗಿದ್ದರು.
ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ಡಾ.ಸುಧಾಮೂರ್ತಿ, ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.ಬೆಳಿಗ್ಗೆ 9ಗಂಟೆಗೆ ಚಾಮುಂಡಿಬೆಟ್ಟದ ಪೊಲೀಸ್ ಸಹಾಯಕ ಕೇಂದ್ರ ಉದ್ಘಾಟನೆ ಮಾಡಲಾಯಿತು. 9.30ಕ್ಕೆ ದಸರಾ ಕ್ರೀಡಾ ಜ್ಯೋತಿ ಉದ್ಘಾಟನೆ, ಮತ್ತು 11.30. ಚಲನಚಿತ್ರೋತ್ಸವ ಉದ್ಘಾಟನೆ ಮಾಡಲಾಯಿತು.
ಅಕ್ಟೋಬರ್ 10ರ ಮಧ್ಯಾಹ್ನದ ನಂತರ ಕಾರ್ಯಕ್ರಮ ಈ ರೀತಿಯಾಗಿದೆ.
ಮ,2.30ಕ್ಕೆ ಆಹಾರ ಮೇಳ ಉದ್ಘಾಟನೆ. ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ.
ಮ.3.30ಕ್ಕೆ ಕುಸ್ತಿ ಉದ್ಘಾಟನೆ ಕುಸ್ತಿ ಮೈದಾನ.
ಸ.4. ಪುಸ್ತಕ ಮೇಳೆ ಉದ್ಘಾಟನೆ ಕಾಡಾ ಕಚೇರಿ ಆವರಣ.
ಸ.4ಕ್ಕೆ ದಸರಾ ಕ್ರೀಡಾಕೂಟ ಉದ್ಘಾಟನೆ ಚಾಂಮುಂಡಿ ವಿಹಾರ.
ಸ. 4,30ಕ್ಕೆ ವಸ್ತು ಪ್ರದರ್ಶನ ಉದ್ಘಾಟನೆ ವಸ್ತು ಪ್ರದರ್ಶನ ಆವರಣ.
ಸ. 5ಕ್ಕೆ ಫಲಪುಷ್ಪ ಪ್ರದರ್ಶನ್ ಕುಪ್ಪಣ್ಣ ಪಾರ್ಕ್.
ಸ.6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಅರಮನೆ ಮುಂಭಾಗದ ವೇದಿಕೆ.
ರಾ.6.15 - ದೀಪಾಲಂಕಾರ ಉದ್ಘಾಟನೆ ಸಯ್ಯಾಜಿರಾವ್ ರಸ್ತೆ.