Top

ದಸರಾಗೆ D53 'ರಾಬರ್ಟ್' ಫಸ್ಟ್‌ಲುಕ್: ಸಂಕ್ರಾಂತಿಗೆ ಮುಹೂರ್ತ

ದಸರಾಗೆ D53 ರಾಬರ್ಟ್ ಫಸ್ಟ್‌ಲುಕ್: ಸಂಕ್ರಾಂತಿಗೆ ಮುಹೂರ್ತ
X

ವರಮಹಾಲಕ್ಷ್ಮೀ ಹಬ್ಬಕ್ಕೆ ಸ್ಕ್ರಿಪ್ಟ್ ಪೂಜೆ ಮೂಲಕ ಅಫಿಶಿಯಲ್ ಆಗಿ ಅನೌನ್ಸ್ ಆಗಿದ್ದ ದರ್ಶನ್ 53ನೇ ಸಿನಿಮಾ D53, ಇದೀಗ ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್​ಗೆ ಬೊಂಬಾಟ್ ಸಿಹಿ ಸುದ್ದಿ ಕೊಡ್ತಿದೆ.

ತಾರಕ್ ಸಿನಿಮಾದ ಸಕ್ಸಸ್​ನ ನಂತ್ರ ಬಾಕ್ಸಾಫೀಸ್ ಸುಲ್ತಾನ್ ದರ್ಶನ್, ಮತ್ತಷ್ಟು ಮಗದಷ್ಟು ಬ್ಯುಸಿ ಆಗ್ಬಿಟ್ಟಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಡೇ ಅಂಡ್ ನೈಟ್ ಶೂಟಿಂಗ್ ಮಾಡಿದ್ರೂ ಮುಗಿಯದಷ್ಟು ಬ್ಯುಸಿ ಆಗಿದ್ದಾರೆ. ಅದ್ರಲ್ಲಿ 50ನೇ ಸಿನಿಮಾ ಕುರುಕ್ಷೇತ್ರ ಸಿನಿಮಾಗೆ ಆ್ಯಕ್ಟಿಂಗ್ ಜೊತೆಗೆ ಡಬ್ಬಿಂಗ್ ಕೂಡ ಮಾಡಿ ಮುಗಿಸಿದ್ದಾರೆ.

ದರ್ಶನ್​ರ ಮೋಸ್ಟ್ ಎಕ್ಸ್​ಪೆಕ್ಟೆಡ್ ಸಿನಿಮಾಗಳು ಅನಿಸಿಕೊಂಡಿರೋ ಯಜಮಾನ ಹಾಗೂ ಒಡೆಯ ಸಿನಿಮಾದ ಶೂಟಿಂಗ್ ಹಾಗೂ ಡಬ್ಬಿಂಗ್ ಇದೇ ಡಿಸೆಂಬರ್ ಮೊದಲ ವಾರದ ವೇಳೆಗೆ ಕಂಪ್ಲೀಟ್ ಆಗಲಿದೆ.

ಹಾಗಾಗಿ ವರಮಹಾಲಕ್ಷ್ಮೀ ಹಬ್ಬದಂದು ಸ್ಕ್ರಿಪ್ಟ್ ಪೂಜೆ ಮಾಡಿಕೊಂಡಿದ್ದ D53 ಮೇಲೆ ಸದ್ಯ ಎಲ್ಲರ ಚಿತ್ತ ನೆಟ್ಟಿದೆ.

ಹೆಬ್ಬುಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿರ್ಮಾಣ ಹಾಗೂ ಚೌಕ ಡೈರೆಕ್ಟರ್ ತರುಣ್ ಸುಧೀರ್ ಕಾಂಬಿನೇಷನ್​ನ D53, ರಾಬರ್ಟ್​ ಅಥ್ವಾ ಕಾಟೇರ ಟೈಟಲ್​ಗಳಿಂದ ಸದ್ದು ಮಾಡ್ತಿದೆ.

ಇನ್ನು ಬರ್ತ್​ ಡೇ ಸಂಭ್ರಮದಲ್ಲಿರೋ ಡೈರೆಕ್ಟರ್ ತರುಣ್ ಸುಧೀರ್, ಇದೀಗ ಡಿ53 ಕುರಿತ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನ ಬಿಟ್ಟುಕೊಟ್ಟಿದ್ದಾರೆ.

ಡಿಸೆಂಬರ್ ಮೊದಲ ವಾರಕ್ಕೆ ಯಜಮಾನ ಹಾಗೂ ಒಡೆಯ ಚಿತ್ರದ ಶೂಟಿಂಗ್ ಡಬ್ಬಿಂಗ್ ಮುಗಿಸೋ ಸಾರಥಿ, ಅದಾದ ಬಳಿಕ 15ರಿಂದ 20 ದಿನ ರೆಸ್ಟ್ ಮಾಡಲಿದ್ದಾರೆ.

ಇನ್ನು ಜನವರಿಯ ಸಂಕ್ರಾಂತಿ ಹಬ್ಬಕ್ಕೆ ಬಹು ನಿರೀಕ್ಷಿತ D53 ರಾಬರ್ಟ್​ ಸಿನಿಮಾ ಅಫಿಶಿಯಲ್ ಆಗಿ ಸೆಟ್ಟೇರಲಿದೆ.

ಅಷ್ಟೇ ಅಲ್ಲ, ಮುಹೂರ್ತ ಕಂಡ ದಿನದಿಂದಲೇ ಶೂಟಿಂಗ್ ಕೂಡ ಶುರು ಮಾಡಲಿದೆಯಂತೆ. ಸದ್ಯ ಲೊಕೇಷನ್ಸ್ ಹಂಟಿಂಗ್ ಹಾಗೂ ಕಾಸ್ಟಿಂಗ್ ಫೈನಲ್ ಮಾಡೋದ್ರಲ್ಲಿ ಬ್ಯುಸಿ ಇರೋ ಟೀಂ ರಾಬರ್ಟ್​, ದಸರಾ ಹಬ್ಬಕ್ಕೆ ಚಿತ್ರದ ಫಸ್ಟ್ ಲುಕ್ ಟೀಸರ್ ರಿವೀಲ್ ಮಾಡೋ ಸನ್ನಾಹದಲ್ಲಿದೆ.

ಅಂದಹಾಗೆ ಆ ಟೀಸರ್​ನಲ್ಲಿ ರಾಬರ್ಟ್​ ಸಿನಿಮಾದಲ್ಲಿ ದಚ್ಚು ಪಾತ್ರ ಹೇಗಿರಲಿದೆ, ಕಥೆ ಏನು ಅನ್ನೋದ್ರ ಹಿಂಟ್ ಕೂಡ ಬಯಲಾಗಲಿದೆಯಂತೆ. ಅದೇನೇ ಇರಲಿ, ರಾಬರ್ಟ್​ ಮಾತ್ರ ದಚ್ಚು ಫ್ಯಾನ್ಸ್​ಗೆ ಬೊಂಬಾಟ್ ಬಾಡೂಟ ಆಗೋದ್ರಲ್ಲಿ ಡೌಟೇ ಇಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES