Top

ಸೌಂದರ್ಯಕ್ಕಾಗಿ ಮನೆ ಮದ್ದು ಮಾಡುವ ಮುನ್ನ ಎಚ್ಚರ

ಸೌಂದರ್ಯಕ್ಕಾಗಿ ಮನೆ ಮದ್ದು ಮಾಡುವ ಮುನ್ನ ಎಚ್ಚರ
X

ಕೊಪ್ಪಳ: ಸೌಂದರ್ಯಕ್ಕಾಗಿ ಮನೆಮದ್ದು ಮಾಡುವ ಮುನ್ನ ಯುವತಿಯರು ಈ ಸ್ಟೋರಿ ಓದಲೇಬೇಕು. ಅಲ್ಲದೇ ಯಾವುದೇ ಕ್ರೀಮ್, ಹಣ್ಣಿನ ಬೀಜ ಉಪಯೋಗಿಸುವುದಕ್ಕೂ ಮುನ್ನ ಎಚ್ಚರವಾಗಿರಬೇಕು. ಹೀಗೆ ಮನೆ ಮದ್ದನ್ನ ಉಪಯೋಗಿಸಲು ಹೋಗಿ ಕಣ್ಣಿಗೆ ಯಡವಟ್ಟು ಮಾಡಿಕೊಂಡ ಘಟನೆ ನಡೆದಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂತಕಿನಲ್ಲಿ ಈ ಘಟನೆ ನಡೆದಿದ್ದು, ತಲೆಯಲ್ಲಿನ ಹೇನು ಕಳೆದುಕೊಳ್ಳಲು ಹೋಗಿ ಯುವತಿ ಮತ್ತು ಬಾಲಕಿ ಕಣ್ಣಿಗೆ ಎಡವಟ್ಟು ಮಾಡಿಕೊಂಡಿದ್ದಾರೆ.

ಹಣವಾಳ ಗ್ರಾಮದ ಅನಿತಾ, ಜಂಗಮರ ಕಲ್ಗುಡಿ ಗ್ರಾಮದ ಚಾತುರ್ಯ ಎಂಬುವರು, ಸೀತಾಫಲ ಹಣ್ಣಿನ ಬೀಜ ಪುಡಿಮಾಡಿ ತಲೆಗೆ ಹಚ್ಚಿಕೊಂಡಿದ್ದು, ಹಣ್ಣಿನ ಬೀಜದ ವಿಷಕಾರಿ ಅಂಶ ಇಬ್ಬರ ದೃಷ್ಟಿಗೂ ಕುತ್ತು ತಂದಿದೆ.

ರಾತ್ರಿ ಈ ಮನೆ ಮದ್ದನ್ನ ತಲೆಗೆ ಹಚ್ಚಿಕೊಂಡು ಮಲಗಿದ್ದ ಇಬ್ಬರೂ , ಬೆಳಿಗ್ಗೆ ತಲೆ ಸ್ನಾನ ಮಾಡಿದ ವಿಷಕಾರಿ ಅಂಶ ಕಣ್ಣಿಗೆ ಸೇರಿದೆ. ಕಣ್ಣು ಉರಿ, ಮಂಜು ಮಂಜಗಿ ಕಾಣುತ್ತಿದ್ದು, ಇಬ್ಬರನ್ನು ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಯಿತು.

ತದನಂತರ ಡಾ.ಮಹಾಂತೇಶ್ ಪಟ್ಟಣಶೆಟ್ಟಿ ಇಬ್ಬರಿಗೂ ಚಿಕಿತ್ಸೆ ನೀಡಿದ್ದು, ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ಮಾತನಾಡಿದ ಡಾ.ಮಹಾಂತೇಶ್ ವೈದ್ಯರ ಸಲಹೆ ಪಡೆದ ನಂತರ ಮನೆಮದ್ದು ಮಾಡಿ ಎಂದು ಹೇಳಿದ್ದಾರೆ.

Next Story

RELATED STORIES