Top

ಕೊಬ್ಬು ಕರಗಿಸೋಕೆ ದೇವಸೇನಾ ಏನ್ ಮಾಡ್ತಿದ್ದಾಳೆ ಗೊತ್ತಾ?

ಕೊಬ್ಬು ಕರಗಿಸೋಕೆ ದೇವಸೇನಾ ಏನ್ ಮಾಡ್ತಿದ್ದಾಳೆ ಗೊತ್ತಾ?
X

ದಪ್ಪ ಆಗೋದು ಸುಲಭ ಅನ್ಸತ್ತೆ. ಆದ್ರೆ, ಒಮ್ಮೆ ದಪ್ಪಗಾದ್ರೆ, ಆ ಕೊಬ್ಬು ಕರಗಿಸೋ ಟಾಸ್ಕ್​ ಇದ್ಯಲ್ಲ, ಅದ್ರಂಥ ಸಾಹಸ ಮತ್ತೊಂದಿಲ್ಲ.

ಸೌತ್ ಸಿನಿದುನಿಯಾದ ಲೇಡಿ ಸೂಪರ್ ಸ್ಟಾರ್ ಅನುಷ್ಕಾ ಶೆಟ್ಟಿ, ಪಾಡೂ ಈಗ ಹೀಗೆ ಆಗಿದೆ. ಸೈಜ್ ಝೀರೋ ಚಿತ್ರಕ್ಕೋಸ್ಕರ ತೂಕ ಹೆಚ್ಚಿಸಿಕೊಂಡ ಸ್ವೀಟಿ, ಏನೇನೋ ಸರ್ಕಸ್ ಮಾಡಿ, ಸಣ್ಣಗಾಗೋಕೆ ಸಾಧ್ಯವಾಗದೇ ಈಗ ಫಾರಿನ್​ ಫ್ಲೈಟ್ ಹತ್ತಿದ್ದಾಳಂತೆ.

ಅಂದಕ್ಕೆ, ಗ್ಲಾಮರ್​ಗೆ ಕೇರ್ ಆಫ್ ಅಡ್ರೆಸ್ ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ. ಅರುಂಧತಿ, ಬಾಹುಬಲಿ, ಭಾಗಮತಿ ರೀತಿಯ ಅದ್ಭುತ ಸಿನಿಮಾಗಳ ಮೂಲಕ ಸೆನ್ಸೇಷನ್​ ಕ್ರಿಯೇಟ್ ಮಾಡಿದ ಅನುಷ್ಕಾ, ಇತ್ತೀಚೆಗೆ ಸೈಲೆಂಟ್ ಆಗ್ಬಿಟ್ಟಿದ್ದಾರೆ.

ಮದ್ವೆ ಗಿದ್ವೆ ಆಗ್ತಾರಾ ಅಂದ್ರೆ ಆ ಪ್ರಶ್ನೆಗೆ ಉತ್ತರ ಸಿಕ್ತಿಲ್ಲ. ಹಾಗಾದ್ರೆ ಮತ್ಯಾಕೆ ಸ್ವೀಟಿ ಸಿನಿಮಾಗಳಲ್ಲಿ ನಟಿಸ್ತಿಲ್ಲ ಅನ್ನೋ ಪ್ರಶ್ನೆಗೆ ತೂಕದ ಸಮಸ್ಯೆ ಕಾರಣ ಅನ್ನೋ ಉತ್ತರ ಸಿಕ್ತಿದೆ.

ಅದೊಂದು ಸಿನಿಮಾ ಅನುಷ್ಕಾ ಶೆಟ್ಟಿ ಸಿನಿಕರಿಯರ್​​ನ ಶೇಕ್ ಮಾಡಿಬಿಡ್ತು ಅನ್ನೋರು ಇದ್ದಾರೆ. ಆ ಸಿನಿಮಾ 2015ರಲ್ಲಿ ಬಂದಿದ್ದ ಸೈಜ್ ಜೀರೊ.

ಈ ಚಿತ್ರದಲ್ಲಿ ದಪ್ಪಗಿರೋ ಯುವತಿಯರು ಅನುಭವಿಸೋ ಕಷ್ಟಗಳನ್ನ ಹೇಳೊ ಪ್ರಯತ್ನ ಮಾಡಲಾಗಿತ್ತು. ಚಿತ್ರದ ಸ್ವೀಟಿ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ಳೊ ಸಾಹಸ ಮಾಡಿದ್ದ ಅನುಷ್ಕಾ, ಸಿನಿಮಾ ನಂತ್ರ ತೂಕ ಇಳಿಸಿಕೊಳ್ಳೊಕೆ ಸರ್ಕಸ್​ ಮಾಡುವಂತಾಯ್ತು.

ಅನುಷ್ಕಾ ಶೆಟ್ಟಿ ತೂಕದ ಬಿಸಿ ಬಾಹುಬಲಿ ಚಿತ್ರಕ್ಕೂ ತಟ್ಟಿತ್ತು.ಬಾಹುಬಲಿ ಪ್ರೀಕ್ವೆಲ್​​ನಲ್ಲಿ ಸ್ಲಿಮ್​ ಆಗಿ ಕಾಣಿಸಿಕೊಂಡಿದ್ದ ಅನುಷ್ಕಾರನ್ನ ಸೀಕ್ವೆಲ್​ನಲ್ಲಿ ಅದೇ ರೀತಿ ತೋರಿಸೋಕೆ ಗ್ರಾಫಿಕ್ಸ್ ಮೊರೆಹೋಗಬೇಕಾಯ್ತು.

ಪ್ರಭಾಸ್ ಅಭಿನಯದ ಸಾಹೋ ಚಿತ್ರದಿಂದ ಅನುಷ್ಕಾ ಹೊರಬರೋಕೆ ಇದೇ ಕಾರಣ ಅನ್ನಲಾಯ್ತು. ಇಂತ ಟೀಕೆಗಳಿಗೆಲ್ಲಾ ಉತ್ತರ ಕೊಡೋಕೆ ಸ್ವೀಟಿ ಕಸರತ್ತು ಶುರು ಮಾಡಿದ್ದಾರೆ. ಆದ್ರೆ ಪ್ರತಿಫಲ ಮಾತ್ರ ಶೂನ್ಯ.

ಒಂದ್ಕಾಲದಲ್ಲಿ ಬಳುಕುವ ಬಳ್ಳಿಯಾಗಿ ಪಡ್ಡೆಗಳ ಎದೆಗೆ ಕಿಚ್ಚು ಹಚ್ಚಿದ ಅನುಷ್ಕಾ, ಸದ್ಯ ತೂಕ ಹೆಚ್ಚಿಸಿಕೊಂಡು ಹಿನ್ನಡೆ ಅನುಭವಿಸುವಂತಾಗಿದೆ.

ಇತ್ತೀಚೆಗೆ ಅನುಷ್ಕಾ ತೂಕ ಇಳಿಸಿಕೊಂಡಿದ್ರು, ಮೊದಲಿನ ಫಿಜಿಕ್ ಪಡೆಯೋಕೆ ಇನ್ನೂ ಸಾಧ್ಯವಾಗಿಲ್ಲ. ಸೈಝ್ ಜಿರೋ ಸಿನಿಮಾದಲ್ಲಿ ತೂಕ ಇಳಿಸಿಕೊಳ್ಳೋಕೆ ಅಡ್ಡದಾರಿ ಹಿಡಿಬಾರ್ದು ಅನ್ನೋ ಸಂದೇಶ ಸಾರಿದ್ರು ಅನುಷ್ಕಾ.

ನಿಜ ಜೀವನದಲ್ಲೂ ಯಾವುದೇ ಟ್ರೀಟ್​ಮೆಂಟ್​​, ಅಡ್ಡ ಪರಿಣಾಮಗಳಿಲ್ಲದೇ ವ್ಯಾಯಾಮ, ಯೋಗದ ಸಹಾಯದಿಂದ ಸಣ್ಣಗಾಗುವ ಪ್ರಯತ್ನ ಮಾಡ್ತಿದ್ದಾರೆ.

ಏನೇ ಸರ್ಕಸ್ ಮಾಡಿದ್ರೂ, ಅನುಷ್ಕಾ ಮೊದಲಿನಂತೆ ಬಳಕುವ ಬಳ್ಳಿಯಾಗೋಕೆ ಸಾಧ್ಯವಾಗ್ತಿಲ್ಲ. ಅದೇ ಕಾರಣಕ್ಕೆ ಆಸ್ಟ್ರಿಯಾದಲ್ಲಿ ಡೆಟಾಕ್ಸ್ ಮತ್ತು ಸ್ಪಾ ಮೊರೆ ಹೋಗ್ತಿದ್ದಾರೆ.

20 ದಿನಗಳ ಕಾಲ ಆಸ್ಟ್ರಿಯಾದಲ್ಲಿ ಸ್ಪಾ ಕ್ಲಿನಿಕ್​ನಲ್ಲಿ ಉಳಿದುಕೊಳ್ಳಲಿರೋ ಸ್ವೀಟಿ ತೂಕ ಇಳಿಸಿಕೊಳ್ಳೋ ಪ್ರಯತ್ನ ಮಾಡ್ತಿದ್ದಾರೆ.

ದಿನವೊಂದಕ್ಕೆ ಲಕ್ಷ ರೂಪಾಯಿ ವ್ಯಯಿಸಿ, ಕೊಬ್ಬು ಕರಗಿಸಿ, ಮೊದಲಿನ ಶೇಪ್ ಪಡೆದುಕೊಳ್ಳೊ ಪ್ರಯತ್ನದಲ್ಲಿದ್ದಾರೆ. ಅದಕ್ಕಾಗಿ ಸ್ವೀಟಿ ಈಗಾಗಲೇ ಸದ್ದಿದಲ್ಲೇ ವಿದೇಶ ಪ್ರವಾಸ ಕೈಕೊಂಡಿದ್ದಾರೆ ಅಂತಿವೆ ಮೂಲಗಳು.

ತಮ್ಮ ನೆಚ್ಚಿನ ನಟಿಯನ್ನ ಮತ್ತೆ ತೆರೆಮೇಲೆ ನೋಡೋಕೆ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ. ಈಗಾಗಲೇ ಗೌತಮ್ ಮೆನನ್ ನಿರ್ದೇಶನದ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸೋ ಸುದ್ದಿ ಕೇಳಿಬಂದಿದೆ.

ಶೀಘ್ರದಲ್ಲೇ ತೂಕ ಇಳಿಸಿಕೊಂಡು, ಮೊದಲಿನಂತೆ ತೆರೆಮೇಲೆ ಮೋಡಿ ಮಾಡೋಕೆ ಸ್ವೀಟಿ ತಯಾರಿ ನಡೆಸಿದ್ದಾರೆ. ಮತ್ತೆ ಸಾಲು ಸಾಲು ಸಿನಿಮಾಗಳಲ್ಲಿ ಕಮಾಲ್ ಮಾಡೋ ಪ್ರಯತ್ನದಲ್ಲಿದ್ದಾರೆ.

ನಾಣಿ..ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Next Story

RELATED STORIES