Top

ವಿದ್ಯಾರ್ಥಿಯ ತಲೆಹೊಡೆದ ಪ್ರಾಂಶುಪಾಲ

ವಿದ್ಯಾರ್ಥಿಯ ತಲೆಹೊಡೆದ ಪ್ರಾಂಶುಪಾಲ
X

ಕೊಪ್ಪಳ: ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಿದಾರಿಯಲ್ಲಿ ಮುನ್ನಡೆಸಬೇಕಾಗಿದ್ದ ಪ್ರಾಂಶುಪಾಲರೊಬ್ಬರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದೂ ಅಲ್ಲದೇ ಪ್ರಶ್ನಿಸಿದ ಮಾಧ್ಯಮಗಳ ವಿರುದ್ಧವೂ ಹರಿಹಾಯ್ದಿದ್ದಾರೆ.

ತನ್ನ ಜೊತೆ ಅಶ್ಲೀಲವಾಗಿ ಮಾತನಾಡಿದ ಎಂದು ಸಿಟ್ಟಿಗೆದ್ದ ಪ್ರಾಂಶುಪಾಲ ಬುದ್ದಿ ಹೇಳುವ ಬದಲು ಹಲ್ಲೆಗೆ ಮುಂದಾಗಿದ್ದಾರೆ. ಇದರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ವಿದ್ಯಾರ್ಥಿ ತಲೆ ಗೋಡೆಗೆ ಬಡಿದು ಗಾಯವಾದ ಘಟನೆ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.

ಜೋರಾಗಿ ಮಾತನಾಡುತ್ತಾ ನಡೆದುಕೊಂಡು ಬರುತ್ತಿದ್ದಾಗ ಪ್ರಾಂಶುಪಾಲರು ಜೋರಾಗಿ ಕರೆದರು. ನಾನು ಹೋಗಿ ವಿಚಾರಿಸಿದಾಗ ನನ್ನನ್ನು ಗೊಡೆಗೆ ತಳ್ಳಿದರು. ಆಗ ತಲೆಗೆ ಗಾಯವಾಯಿತು ಎಂದು ವಿದ್ಯಾರ್ಥಿ ಘಟನೆಯನ್ನು ವಿವರಿಸಿದ್ದಾನೆ.

ಸತ್ಯಾಸತ್ಯತೆ ವಿಚಾರಿಸಲು ಹೋದ ಮಾಧ್ಯಮದವರ ಜೊತೆ ಪ್ರಾಂಶುಪಾಲರು ಅಸಭ್ಯವಾಗಿ ವರ್ತಿಸಿದ್ದಾರೆ. ಪ್ರಾಂಶುಪಾಲರ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

Next Story

RELATED STORIES