Top

ಕೆಜಿಎಫ್ ಪೋಸ್ಟ್​ಪೋನ್ ಬಗ್ಗೆ ಚಿತ್ರತಂಡ ಸುದ್ದಿಗೋಷ್ಠಿ..!

ಕೆಜಿಎಫ್ ಪೋಸ್ಟ್​ಪೋನ್ ಬಗ್ಗೆ ಚಿತ್ರತಂಡ ಸುದ್ದಿಗೋಷ್ಠಿ..!
X

ಮೋಸ್ಟ್ ಎಕ್ಸ್​ಪೆಕ್ಟೆಡ್ ಕೆಜಿಎಫ್ ಟ್ರೈಲರ್ ಲಾಂಚ್ ಹಾಗೂ ಮೂವಿ ರಿಲೀಸ್​ಗೆ ಕೌಂಟ್​ಡೌನ್ ಶುರುವಾಗಿತ್ತು. ದ ವೆಯ್ಟ್ ಈಸ್ ಓವರ್ ಗುರೂ ಅಂತ ರಾಕಿಂಗ್ ಫ್ಯಾನ್ಸ್ ಸಂಭ್ರಮಿಸುತ್ತಿದ್ದಂತೆ, ಕೆಜಿಎಫ್ ಚಿತ್ರತಂಡ ಬ್ರೇಕಿಂಗ್ ನ್ಯೂಸ್ ಮೂಲಕ ಶಾಕ್ ಕೊಟ್ಟಿದೆ.

ಸದ್ಯ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಯಶ್ ಕೆಜಿಎಫ್ ಸಿನಿಮಾದ ಪೋಸ್ಟ್​ಪೋನ್ ಸುದ್ದಿ ಜೋರಾಗಿ ಹರಿದಾಡ್ತಿದೆ.

ಈ ಹಿಂದೆಯೇ ಕೆಜಿಎಫ್ ಚಾಪ್ಟರ್-1 ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದ ಟೀಂ ಕೆಜಿಎಫ್, ಇದೀಗ ರಿಲೀಸ್ ಡೇಟ್ ಮತ್ತೊಂದು ತಿಂಗಳು ಪೋಸ್ಟ್​ಪೋನ್ ಮಾಡೋ ಮೂಲಕ ಸಿನಿಪ್ರಿಯರಿಗೆ ಶಾಕ್ ಕೊಟ್ಟಿದೆ.

ಎರಡು ವರ್ಷದಿಂದ ಮಾಡ್ತಿರೋ ಸ್ಯಾಂಡಲ್​ವುಡ್​ನ ಭಾರೀ ಬಜೆಟ್ ಸಿನಿಮಾ ಇದಾಗಿದ್ದು, ಪೀರಿಯಾಡಿಕ್ ಸಿನಿಮಾ ಅನ್ನೋ ಕಾರಣಕ್ಕೆ ಮೇಕಿಂಗ್​ನಿಂದಲೇ ಎಲ್ಲಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ ಕೆಜಿಎಫ್.

ಅದ್ರಲ್ಲೂ ಯಶ್ ಉದ್ದನೆಯ ಗಡ್ಡ ಹಾಗೂ ಲಾಂಗ್ ಹೇರ್ ಟ್ರೆಂಡ್ ಸೃಷ್ಟಿಸಿದ್ದಲ್ಲದೆ, ರಾಕಿಂಗ್ ಫ್ಯಾನ್ಸ್​ ಕುತೂಹಲ ಕೆರಳುವಂತೆ ಮಾಡಿತ್ತು. ಆದ್ರೀಗ ಯಶ್ ಆ ಗಡ್ಡ ಮತ್ತು ಆ ಉದ್ದನೆಯ ಕೂದಲನ್ನ ತೆಗೆದಾಗಿದೆ.

ಚಿತ್ರದ ಒಂದಷ್ಟು ದೃಶ್ಯಗಳನ್ನ ಈ ಶೂಟ್ ಮಾಡೋ ಸುದ್ದಿ ದಟ್ಟವಾಗಿ ಹರಿದಾಡ್ತಿದೆ. ಅದೇ ವಿಚಾರವಾಗಿ ಸಿನಿಮಾ ರಿಲೀಸ್ ಪೋಸ್ಟ್​ಪೋನ್ ಮಾಡಲಾಗ್ತಿದೆ ಎನ್ನಲಾಗ್ತಿದೆ.

ಆದ್ರೆ ಯಶ್ ಪಾತ್ರಕ್ಕೆ ಬೇಕಾದ ಲಾಂಗ್ ಹೇರ್ ಹಾಗೂ ಉದ್ದನೆಯ ಗಡ್ಡ ಈಗಿಲ್ಲ. ಅದನ್ನ ಮರುಸೃಷ್ಠಿಸೋದು ಕಷ್ಟಸಾಧ್ಯ. ಹಾಗಾಗಿ ಚಿತ್ರತಂಡಕ್ಕೆ ಅದು ತಲೆನೋವಾಗಿ ಪರಿಣಮಿಸಲಿದೆ ಎನ್ನಲಾಗ್ತಿದೆ.

ಅಂದಹಾಗೆ ಸಿನಿಮಾ ರಿಲೀಸ್ ಡೇಟ್ ನವೆಂಬರ್ 16ರಿಂದ ಡಿಸೆಂಬರ್​ಗೆ ಪೋಸ್ಟ್​ಪೋನ್ ಆಗಿದೆ ಅನ್ನೋ ಸುದ್ದಿ ಹರಿದಾಡ್ತಿದೆ.

ಇನ್ನು ಟ್ರೈಲರ್ ಕೂಡ ಇದೇ ಅಕ್ಟೋಬರ್ 14ಕ್ಕೆ ಲಾಂಚ್ ಆಗಬೇಕಿತ್ತು. ಯಾವಾಗ ಸಿನಿಮಾ ಪೋಸ್ಟ್​ಪೋನ್ ಆಗ್ತಿದೆಯೋ, ಟ್ರೈಲರ್ ರಿಲೀಸ್ ಕೂಡ ಮುಂದೂಡೋ ಸಾಧ್ಯತೆಯಿದೆ.

Mr & Mrs ರಾಮಾಚಾರಿ, ಕೆಜಿಎಫ್ ರೀತಿ ವೈಜಿಎಫ್ ಟೀಸರ್ ಬಿಟ್ಟು ಕುತೂಹಲ ಹೆಚ್ಚಿಸಿದ್ರು. ಅಂದ್ರೆ ಯಶ್ ಹಾಗೂ ರಾಧಿಕಾ ಪಂಡಿತ್ ತಂದೆ-ತಾಯಿ ಆಗ್ತಿರೋ ವಿಚಾರವನ್ನ ವೈಜಿಎಫ್ ಅನ್ನೋ ಸ್ಪೆಷಲ್ ಟೀಸರ್​ನಿಂದ ಸಾರಿ ಹೇಳಿದ್ದರು.

ಆದ್ರೀಗ ಕೆಜಿಎಫ್ ಸಿನಿಮಾ ಕೂಡ ಯಶ್ ಲಕ್ಕಿ ಮಂತ್ ಡಿಸೆಂಬರ್​ನಲ್ಲೇ ರಿಲೀಸ್ ಆಗೋ ಮೂಲಕ ಯಶ್ ಹಾಗೂ ಅವ್ರ ಫ್ಯಾನ್ಸ್​ಗೆ ಡಬಲ್ ಸಂಭ್ರಮ ಕೊಡುತ್ತಾ ಅನ್ನೋದು ಕಾದುನೋಡಬೇಕು.

ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ ಪೋಸ್ಟ್​ಪೋನ್ ವಿಚಾರದಿಂದ ರಾಕಿಂಗ್ ಸ್ಟಾರ್ ಫ್ಯಾನ್ಸ್ ಭ್ರಮನಿರಸರಾಗಿದ್ದಾರೆ.

ಅಷ್ಟೇ ಅಲ್ಲ, ಪೋಸ್ಟ್​ಪೋನ್ ಬೇಡ ನವೆಂಬರ್​ನಲ್ಲೇ ಘೋಷಿತ ದಿನಾಂಕದಂದು ಸಿನಿಮಾ ರಿಲೀಸ್ ಮಾಡಿ ಅಂತ ಬೇಡಿಕೆ ಇಡ್ತಿದ್ದಾರೆ.

ಇನ್ನು ಈ ಕುರಿತ ಅಂತೆ-ಕಂತೆಗಳಿಗೆ ಮಾಧ್ಯಮಗಳ ಮೂಲಕ ಸ್ಪಷ್ಟನೆ ಕೊಡೋಕೆ ಚಿತ್ರತಂಡ ಮುಂದಾಗಿದೆ.

ಅದರಂತೆ ಬುಧವಾರ ಸಂಜೆ 4:30ಕ್ಕೆ ನಗರದ ಖಾಸಗಿ ಹೋಟೆಲೊಂದರಲ್ಲಿ ಸುದ್ದಿಗೋಷ್ಠಿ ಮಾಡೋ ಮೂಲಕ, ಟೀಂ ಕೆಜಿಎಫ್ ಸಿನಿಮಾ ಪೋಸ್ಟ್​ಪೋನ್​ಗೆ ಅಂತ್ಯ ಹಾಡಲಿದೆ.

ಅದೇನೇ ಇರಲಿ, ಬಿಗ್ ಬಜೆಟ್ ಸಿನಿಮಾಗಳನ್ನ ಮಾಡುವಾಗ, ತಾಂತ್ರಿಕ ದೋಷದಿಂದ ಈ ರೀತಿಯ ಸಣ್ಣಪುಟ್ಟ ಸಮಸ್ಯೆಗಳಾಗೋದು ಸರ್ವೇ ಸಾಮಾನ್ಯ.

ಆದ್ರೆ ಅಭಿಮಾನಿಗಳು ಹಾಗೂ ಸಿನಿಪ್ರಿಯರು ಅದನ್ನ ತಾಳ್ಮೆಯಿಂದ ಪಾಸಿಟೀವ್ ಆಗಿ ಸ್ವೀಕರಿಸಿದ್ರೆ ಅದಕ್ಕಿಂತ ಉತ್ತಮ ಬೆಳವಣಿಗೆ ಮತ್ತೊಂದು ಇರಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5.

Next Story

RELATED STORIES