Top

ಮಾಜಿ ಸಚಿವರನ್ನ 'ಸತ್ತ ಕುದುರೆ' ಎಂದ ಸಚಿವ ಪುಟ್ಟರಾಜು

ಮಾಜಿ ಸಚಿವರನ್ನ ಸತ್ತ ಕುದುರೆ ಎಂದ ಸಚಿವ ಪುಟ್ಟರಾಜು
X

ಮಂಡ್ಯ: ಮಂಡ್ಯ ಲೋಕಸಭೆ ಚುನಾವಣೆ ಬಗ್ಗೆ ನಿನ್ನೆ ತಾನೇ ಮಾಜಿ ಸಚಿವ ಚೆಲುವ ನಾರಾಯಣಸ್ವಾಮಿ ಜೆಡಿಎಸ್‌ಗೆ ಮೈತ್ರಿ ಪಕ್ಷದೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ಅರಿವಿಲ್ಲ ಎಂದು, ಮೈತ್ರಿ ಪಕ್ಷದ ವಿರುದ್ಧ ಹರಿಹಾಯ್ದಿದ್ದರು.

ಇದಕ್ಕೆ ಇಂದು ತಿರುಗೇಟು ನೀಡಿರುವ ಸಚಿವ ಸಿ.ಎಸ್.ಪುಟ್ಟರಾಜು, ಡೆಡ್ ಹಾರ್ಸ್‌ಗಳೆಲ್ಲ ಮಾತನಾಡುವ ಹಾಗೆ ಆಗಿದೆ ಎಂದು ಚಲುವರಾಯಸ್ವಾಮಿಯನ್ನು ಸತ್ತ ಕುದುರೆಗೆ ಹೋಲಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಪುಟ್ಟರಾಜು ಮಂಡ್ಯದಲ್ಲಿ ಮೈತ್ರಿಯಾಗಿ ಎಂದು ನಾವು ಗೋಗರೆಯುತ್ತಿಲ್ಲ. ಜನ ಕೊಟ್ಟ ತೀರ್ಪಿನಿಂದ, ಅನಿವಾರ್ಯತೆ ಎದುರಾಗಿರೋದ್ರಿಂದ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ನಾಯಕರು ರಾಜ್ಯದಲ್ಲಿ ಮೈತ್ರಿಗೆ ಸಮ್ಮತಿಸಿದ್ರು. ಮಂಡ್ಯ ಜೆಡಿಎಸ್ ಭದ್ರಕೋಟೆ, ಹೀಗಾಗಿ ನಾವು ಮೈತ್ರಿ ಮಾಡಿಕೊಳ್ಳಿ‌ ಎಂದು ಗೋಗರೆಯುವುದಿಲ್ಲ. ನಾಗಮಂಗಲ ಇತಿಹಾಸದಲ್ಲಿ 52 ಸಾವಿರ ಲೀಡ್‌ನಲ್ಲಿ ಯಾರೂ ಸೋತಿಲ್ಲ ಎಂದಿದ್ದಾರೆ.

ಅಲ್ಲದೇ ಚಲುವರಾಯಸ್ವಾಮಿ ಅವ್ರನ್ನು ಜನರು ಸೋಲಿಸಿದ್ದು, ಅವರು ಬಾಯಿಮುಚ್ಚಿಕೊಂಡು ಇರಲಿ ಅಂತ. ಡೆಡ್ ಹಾರ್ಸ್‌ಗಳು ಮಾತನಾಡೇ ಹೀಗೇ ಆಗಿರೋದು. ಕಾಂಗ್ರೆಸ್ ಜೆಡಿಎಸ್ ನಾಯಕರುಗಳು ತೆಗೆದುಕೊಳ್ಳೋ ತೀರ್ಮಾನವೇ ಅಂತಿಮ. ಇದನ್ನು ಪ್ರಶ್ನಿಸೋ ಹಕ್ಕು ನನಗೂ ಇಲ್ಲ. ಚಲುವರಾಯಸ್ವಾಮಿಗೂ ಇಲ್ಲ ಎಂದಿದ್ದಾರೆ.

ನಮ್ಮ ಪಕ್ಷದ ವರಿಷ್ಠರು ಯಾರನ್ನ ಅಭ್ಯರ್ಥಿ ಮಾಡಿದ್ರು ಸ್ವಾಗತ ಮಾಡ್ತೀವಿ. ದೇವೇಗೌಡರ ಕುಟುಂಬದಿಂದ ಅಭ್ಯರ್ಥಿ ಹಾಕಿದ್ರು ಸ್ವಾಗತಿಸುತ್ತೇವೆ. ನಮ್ಮ ಪಕ್ಷದಲ್ಲಿ ಬಹಳ ಜನ ಸಮರ್ಥರಿದ್ದಾರೆ. ನಾನು ಯಾರನ್ನೂ ಸೂಚಿಸುವುದಿಲ್ಲ. ನಮ್ಮ ವರಿಷ್ಠರು ಯಾರನ್ನೇ ಆಯ್ಕೆ ಮಾಡಿದ್ರು ನಾವು ಅವ್ರನ್ನು ಗೆಲ್ಲಿಸಿಕೊಡ್ತೇವೆ ಎಂದಿದ್ದಾರೆ.

Next Story

RELATED STORIES