Top

ಮದಕರಿ ಚಿತ್ರದ ಸ್ಟಾರ್ ವಾರ್​ಗೆ ಜಾತಿ ಬಣ್ಣ: ಮುನಿರತ್ನ ಹೇಳಿದ್ದೇನು?

ಮದಕರಿ ಚಿತ್ರದ ಸ್ಟಾರ್ ವಾರ್​ಗೆ ಜಾತಿ ಬಣ್ಣ: ಮುನಿರತ್ನ ಹೇಳಿದ್ದೇನು?
X

ಸ್ಟಾರ್ ನಟರಾದ ಸುದೀಪ್ ಮತ್ತು ದರ್ಶನ್ ನಡುವೆ ಸ್ಟಾರ್ ವಾರ್​ಗೆ ಕಾರಣವಾಗಿರುವ ಐತಿಹಾಸಿಕ ಮದಕರಿ ನಾಯಕ ಚಿತ್ರಕ್ಕೆ ಜಾತಿಯ ಬಣ್ಣ ಪಡೆಯುತ್ತಿರುವುದಕ್ಕೆ ನಿರ್ಮಾಪಕ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಇಬ್ಬರು ನಟರು ಜಾತಿಯಿಂದ ಹೊರಬಂದಿದ್ದಾರೆ. ಕಲೆಗೆ ಜಾತಿ ಇಲ್ಲ. ಚಿತ್ರದ ವಿವಾದಕ್ಕೆ ಜಾತಿ ಸ್ಪರ್ಶ ನೀಡುವುದು ಸರಿಯಲ್ಲ ಎಂದರು.

ಮದಕರಿ ಜೀವನಚರಿತ್ರೆ ಆಧರಿಸಿದ ಚಿತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಇದೇ ವೇಳೆ ನಟ ಸುದೀಪ್ ಕೂಡ ತಾವು ಮದಕರಿ ಚಿತ್ರ ನಿರ್ಮಿಸುವ ಕನಸು ಹೊತ್ತಿದ್ದೇನೆ. ಅವರ ಪ್ರಯತ್ನಕ್ಕೆ ಶುಭ ಕೋರುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಇದರಿಂದ ಇಬ್ಬರೂ ನಾಯಕ ನಟರ ನಡುವಿನ ಮನಸ್ತಾಪ ಸ್ಟಾರ್ ವಾರ್​ಗೆ ತಿರುಗಿತು. ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ನಿಂದನೆಯಲ್ಲಿ ತೊಡಗಿದ್ದರು.

ಪ್ರಸನ್ನಾನಂದ ಸ್ವಾಮೀಜಿ ಸುದೀಪ್ ಮದಕರಿ ಜಾತಿಯವನಾಗಿದ್ದರಿಂದ ಅವರೇ ಈ ಚಿತ್ರದಲ್ಲಿ ನಟಿಸಲಿ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುನಿರತ್ನ ಸುದ್ದಿಗೋಷ್ಠಿ ನಡೆಸಿದರು.

ಕಲೆಗೆ ಜಾತಿ‌ ಇಲ್ಲ. ಜಾತಿಯನ್ನು ಬಿಂಬಿಸೋದು ತಪ್ಪು. ಸಿನಿಮಾದೊಳಗೆ ಜಾತಿಯನ್ನು ತರಬಾರದು. ಕಲೆಯನ್ನ ಕಲೆಯಾಗಿ ನೋಡಬೇಕು. ರಾಜಕೀಯದಲ್ಲಿ‌ ಜಾತಿ ಬಂದು‌ ಹಾಳಾಗಿದೆ. ಈಗ ಸಿನಿಮಾಕ್ಕೆ‌ ಜಾತಿ ಎಳೆದು ತರುವುದು ಬೇಡ ಎಂದು ಮುನಿರತ್ನ ಹೇಳಿದರು.

ರಾಜ್ ಕುಮಾರ್‌ ಕಾಲದಲ್ಲಿ ಅನೇಕ‌ ಸಿನಿಮಾಗಳು‌ ಬಂದವು. ಆಗ ಜಾತಿ ಇರಲಿಲ್ಲ. ಈಗ ಜಾತಿಯ ನಂಟನ್ನು ಸ್ವಾಮೀಜಿ ತರಬಾರದು. ಡಾ.ರಾಜ್​ಕುಮಾರ್​ಗೆ ಇಲ್ಲದ ಜಾತಿ ದರ್ಶನ್ ಅಥವಾ ಸುದೀಪ್​ಗೆ ಏಕೆ? ಚೆನ್ನಾಗಿ ಯಾರು ಚಿತ್ರ ಮಾಡುತ್ತಾರೋ ಅದನ್ನು ಜನ ಒಪ್ಪಿಕೊಳ್ಳುತ್ತಾರೆ ಎಂದು ಮುನಿರತ್ನ ಹೇಳಿದರು.

Next Story

RELATED STORIES