ರಾಯಚೂರಿನಲ್ಲಿ 52 ರೈತರ ಕುಟುಂಬ ಬೀದಿಪಾಲು

X
TV5 Kannada9 Oct 2018 2:34 AM GMT
ರಾಯಚೂರು: ಖಾಸಗಿ ಸೋಲಾರ್ ಕಂಪನಿ ಮೋಸದಿಂದ 152 ಎಕರೆ ಭೂಮಿ ಅಕ್ರಮವಾಗಿ ಕಬಳಿಸಿದ್ದು, 52 ರೈತರ ಕುಟುಂಬ ಬೀದಿ ಪಾಲಾಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಅಮರಾವತಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೈದರಾಬಾದ್ ಮೂಲದ ಬಾಬಾದೇವ ಸೋಲಾರ್ ಕಂಪನಿ ರೈತರಿಗೆ ಸೇರಿದ 152 ಎಕರೆ ಭೂಮಿ ಅಕ್ರಮವಾಗಿ ಕಬಳಿಸಿದೆ.
ಪ್ರತಿ ಎಕರೆಗೆ 8.50 ಲಕ್ಷ ಕೊಡುವುದಾಗಿ ಹೇಳಿ, 4 ಲಕ್ಷ ಕೊಟ್ಟು ಋಣಮುಕ್ತ ಎನ್ನುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೋಲಾರ್ ಘಟಕ ಸ್ಥಾಪಿಸಿ 4 ವರ್ಷ ಕಳೆದರೂ ಗ್ರಾಂ.ಪನಿಂದ NOC ಪಡೆದಿಲ್ಲ. ಇನ್ನು ರೈತರ ಪರ ನಿಲ್ಲಬೇಕಾದ ಸರ್ಕಾರಿ ನೌಕರರು ಕಂಪನಿ ಪರ ನಿಂತಿದ್ದಾರೆ.
ನ್ಯಾಯ ಕೋಳಲು ಹೋದ ರೈತನನ್ನು ತಹಶೀಲ್ದಾರ್ ಜೈಲಿಗೆ ಕಳುಹಿಸಿದ್ದು, ಇದೀಗ ರೈತರಿಗೆ ಭೂಮಿಯೂ ಇಲ್ಲ, ಹಣವೂ ಇಲ್ಲದಂತಾಗಿದ್ದು, ಅತ್ತ ಕೆಲಸ ಕೊಡುವುದಾಗಿ ಹೇಳಿದ ಕಂಪನಿ ಕ್ಯಾರೆ ಎನ್ನುತ್ತಿಲ್ಲ.
Next Story