Top

ಮಹಾಲಯ ಅಮವಾಸ್ಯೆ ದಿನ ಬಂತಾ ಡಿ.ಕೆ. ರವಿ ಆತ್ಮ?

ಮಹಾಲಯ ಅಮವಾಸ್ಯೆ ದಿನ ಬಂತಾ ಡಿ.ಕೆ. ರವಿ ಆತ್ಮ?
X

ನಿಗೂಢವಾಗಿ ಮೃತಪಟ್ಟ ಜಿಲ್ಲಾಧಿಕಾರಿ ಡಿ.ಕೆ. ರವಿ ಆತ್ಮ ತುಮಕೂರಿನ ಗ್ರಾಮದಲ್ಲಿ ಓಡಾಡುತ್ತಿದೆಯಾ ಎಂಬ ಅನುಮಾನ ಗ್ರಾಮಸ್ಥರಲ್ಲಿ ಕಾಡಿದೆ.

ಮಹಾಲಯ ಅಮವಾಸ್ಯೆ ದಿನವಾದ ಸೋಮವಾರ ಡಿ.ಕೆ. ರವಿ ಅವರ ತವರೂರಾದ ತುಮಕೂರಿನಲ್ಲಿ ಅವರ ತಾಯಿ ಹಾಗೂ ಗ್ರಾಮಸ್ಥರ ಕನಸಿನಲ್ಲಿ ಡಿ.ಕೆ. ರವಿ ಕಾಣಿಸಿಕೊಂಡಿದ್ದು. ಅವರ ಆತ್ಮ ಇನ್ನೂ ಗ್ರಾಮದಲ್ಲಿ ಓಡಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಕನಸಿನಲ್ಲಿ ಬರುವ ಡಿ.ಕೆ. ರವಿ ತನ್ನ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಕೇಳುತ್ತಿದೆ ಎಂದು ತಾಯಿ ಗೌರಮ್ಮ ಹಾಗೂ ಗ್ರಾಮಸ್ಥರು ಹೇಳಿದ್ದಾರೆ.

ಡಿ.ಕೆ. ನಿಗೂಢವಾಗಿ ಮೃತಪಟ್ಟು ಹಲವು ವರ್ಷಗಳೇ ಕಳೆದರೂ ಇನ್ನೂ ತನಿಖೆ ಅಂತಿಮಗೊಂಡಿಲ್ಲ. ಇದೀಗ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಿದ್ದಾರೆ. ಜಾರ್ಜ್ ಮತ್ತಿತರ ಸಚಿವರು ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಯಾರನ್ನು ಭೇಟಿ ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದು ತಾಯಿ ಗೌರವಮ್ಮ ಹೇಳಿದ್ದಾರೆ.

Next Story

RELATED STORIES