Top

ಪುಟ್ಟರಾಜು ಹೇಳಿಕೆಗೆ ಚಲುವರಾಯಸ್ವಾಮಿ ತಿರುಗೇಟು

ಪುಟ್ಟರಾಜು ಹೇಳಿಕೆಗೆ ಚಲುವರಾಯಸ್ವಾಮಿ ತಿರುಗೇಟು
X

ಬೆಂಗಳೂರು: ಡೆಡ್ ಹಾರ್ಸ್‌ಗಳು ಮಾತಾಡಿದ್ರೆ ಹಿಂಗೆ ಆಗೋದು ಎಂಬ ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆಗೆ ತಿರುಗೇಟು ನೀಡಿರುವ ಚಲುವರಾಯಸ್ವಾಮಿ, ಅವ್ರಿಗೆ ಕಾಮನ್ಸೆನ್ಸ್ ಇದ್ರೆ. ಮೆದುಳು ನೆಟ್ಟಗೆ ಕೆಲಸ ಮಾಡಿದ್ರೆ ಹೀಗೆ ಹೇಳ್ತಿರ್ಲಿಲ್ಲ. ಆತ ಸೋಲನ್ನೇ ಕಂಡಿಲ್ವೇನೋ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೇ ಅವರ ಸ್ಟೇಟ್ಮೆಂಟ್ ಎಷ್ಟು ಪ್ರತಿಕೂಲ ಆಗುತ್ತೆ ನೋಡ್ತೇನೆ. ದೇವೇಗೌಡರೇ ಹೇಳಿದ್ರು ನೀನೇನ್ ಸ್ವಂತ ಗೆದ್ದಿಲ್ಲ ಕಣ ಅಂತ. ಅವ್ರು ಬಿ ಫಾರ್ಮ್ ಹೇಗೆ ತೆಗೆದ್ಕೊಂಡ್ರು ಅನ್ನೋದು ಗೊತ್ತಿದೆ. ಅವನಷ್ಟು ಕೆಳಮಟ್ಟಕ್ಕೆ ಇಳಿದು ಮಾತಾಡೋಕೆ ನಂಗಿಷ್ಟವಿಲ್ಲವೆನ್ನುವ ಮೂಲಕ ಆಕ್ರೋಶಭರಿತ ಹೇಳಿಕೆ ನೀಡಿದ್ದಾರೆ.

ಮೈತ್ರಿ ಅನ್ನೋದು ಬರೀ ವಿಧಾನಸೌಧಕ್ಕೆ ಸೀಮಿತ ಅಂತ ದೇವೇಗೌಡರೇ ಹೇಳಿದ್ದಾರೆ. ಹಾಸನದಲ್ಲಿ ನಾವು ಅವರ ಮನೆಗೆ ಹೋಗಿ ಕೇಳಿಲ್ಲ ಅಂತ ಹೇಳಿದ್ದಾರೆ. ಸರ್ಕಾರದಲ್ಲಿ ಕಾಂಗ್ರೆಸ್ ನಾಯಕರ ಕೆಲಸಗಳು ನಡೆಯುತ್ತಿಲ್ಲ. ಆದ್ರೂ ವರಿಷ್ಠರ ನಿರ್ಧಾರದಂತೆ ಮೈತ್ರಿ ಸರ್ಕಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.

ಸಚಿವ ಪುಟ್ಟರಾಜು ವಿರುದ್ಧ ಏಕವಚನ ಪ್ರಯೋಗ ಮಾಡಿರುವ ಚಲುವನಾರಾಯಣಸ್ವಾಮಿ, ಅವನಿಗೆ ನಿಜವಾದ ರಾಜಕಾರಣ ಗೊತ್ತಿಲ್ಲ. ಚಿಕ್ಕಬಳ್ಳಾಪುರದಲ್ಲಿ ಸಿಎಂ ಎಷ್ಟು ಅಂತರದಲ್ಲಿ ಸೋತಿದ್ರು ಅನ್ನೋದು ಗೊತ್ತಿಲ್ಲ. ತಲೆಯಲ್ಲಿ ಮೆದುಳು ಇಟ್ಕೊಂಡು ಮಾತನಾಡಬೇಕಿತ್ತು. ಅವನು ಯಾವ ರೀತಿ ಸಂಸದನಾದ ಅನ್ನೋದು ಗೊತ್ತು ಎಂದು ಹೇಳಿದ್ದಾರೆ.

ದೇವೇಗೌಡರೇ ಪುಟ್ಟರಾಜುವನ್ನ ನೀನು ಹೇಗೆ ಗೆದ್ದು ಬಂದಿದ್ದೀಯಾ ಅಂತ ಕೇಳಿದ್ರು. ಅಲ್ಲದೇ ಕೃಷ್ಣ ಅವರ ಹೇಳಿಕೆ ನಿನ್ನ ಗೆಲುವಿಗೆ ಕಾರಣ ಅಂತನೂ ಹೇಳಿದ್ರು ಎಂದು ವಾಗ್ದಾಳಿ ನಡೆಸಿದ್ದಾರೆ.

Next Story

RELATED STORIES