Top

ಬಿಎಂಟಿಸಿ ಡ್ರೈವರ್ ಜ್ಯೋತಿಷ್ಯ ಕೇಳಿಕೊಂಡು ಏನು ಮಾಡಿದ್ದಾರೆ ಗೊತ್ತಾ..?

ಬಿಎಂಟಿಸಿ  ಡ್ರೈವರ್  ಜ್ಯೋತಿಷ್ಯ ಕೇಳಿಕೊಂಡು ಏನು ಮಾಡಿದ್ದಾರೆ ಗೊತ್ತಾ..?
X

ವೃತ್ತಿಯಲ್ಲಿ ಇತ ಡ್ರೈವರ್ ಆದ್ರೂ ಜ್ಯೋತಿಷ್ಯ ಅಂದ್ರೆ ಇವನಿಗೆ ಪಂಚ ಪ್ರಾಣ ಜ್ಯೋತಿಷ್ಯಾ ಕೇಳದೆ ಒಂದು ಹೆಜ್ಜೆನೂ ಮುಂದೆ ಹೋಗಲ್ವಂತೆ ಅಷ್ಟಕ್ಕೂ ಈ ಡ್ರೈವರ್ ಅಸಾಮಿ ಜ್ಯೋತಿಷ್ಯ ಕೇಳಿಕೊಂಡು ಏನು ಮಾಡಿದ್ದಾನೆ ಗೊತ್ತಾ..?

ಸಹಜವಾಗಿ ಬಿಎಂಟಿಸಿ ಡಿಪೋಗಳಿಂದ ಬಸ್ ಗಳು ಬೆಳಗ್ಗೆ 6.15 ಕ್ಕೆ ಹೊರಡಬೇಕಿತ್ತು. ಆದ್ರೆ, ಡ್ರೈವರ್ ಯೋಗಿಶ್ ಗೌಡ ಒಂದುವರೆ ಗಂಟೆ ತಡವಾಗಿ ಬಸ್ ಚಾಲನೆ ಮಾಡಿ ಪ್ರಯಾಣಿಕರಿಗೆ ಮತ್ತು ಸಂಸ್ಥೆಗೆ ಅರ್ಥಿಕ ನಷ್ಟ ಉಂಟು ಮಾಡಿರುತ್ತಾನೆ. ಇನ್ನು ಇದನ್ನ ಪ್ರಶ್ನಿಸಿದ ಮ್ಯಾನೇಜರ್ ಗೆ ಡ್ರೈವರ್ ಕೊಟ್ಟ ಉತ್ತರ ವಿಚಿತ್ರವಾಗಿತ್ತು. ಅದೇನಂದ್ರೆ, ಬೆಳಗ್ಗೆ 6 ಗಂಟೆಯಿಂದ 7.30 ವರೆಗೆ ರಾಹುಕಾಲ ಇದೆ. ನೀನು ಡ್ರೈವಿಂಗ್ ಮಾಡಿದ್ರೆ 15 ಜನ ಪ್ರಾಣ ಹೋಗುತ್ತೆ ಅನ್ನೋ ಭವಿಷ್ಯಾ ಹೇಳಿದ್ದಾನೆ ಇದಕ್ಕೆ ಹೇದರಿ ಬಸ್ ತಡವಾಗಿ ಚಲಾಯಸಿದ್ದೆನೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ. ಯಾಕದಂದ್ರೆ, ಬಿಎಂಟಿಸಿ ಅಧಿಕಾರಿಗಳೇ ಕನಕ ಜಯಂತಿ, ಬಸವ ಜಯಂತಿ, ಗಣೇಶ ಉತ್ಸವ ಸೇರಿದಂತೆ ಹೋಮ- ಹವನ ಮಾಡ್ತಾರೆ. ಅವರು ಜ್ಯೋತಿಷ್ಯ ನಂಬುವಂತೆ ನಾನು ಕೂಡ ಜ್ಯೋತಿಷ್ಯ ನಂಬಿದ್ದಾನೆ ಎನ್ನುತ್ತಾರೆ ಡ್ರೈವರ್ ಯೋಗೀಶ್ ಗೌಡ.

ಜೋತಿಷ್ಯ ಕೇಳಿಕೊಂಡು ಬಸ್ ತಡವಾಗಿ ಚಲಾಯಿಸಿದ್ದಕ್ಕೆ ಅಧಿಕಾರಿಗಳು ಚಾಲಕನಿಗೆ ನೋಟಿಸ್ ನೀಡಿದ್ದಾರೆ. ತಡವಾಗಿ ಬಂದಿದಕ್ಕೆ ಬೇಕಂತಲೆ ಉಡಾಫೆ ಉತ್ತರ ನೀಡಿದ್ದಾರಾ ಅಥವಾ ಭವಿಷ್ಯ ನಂಬಿ ಬಸ್ ಹೀಗೆ ಮಾಡಿರೋದ ಅಂತಾ ವಿಚಾರಣೆ ಬಳಿಕ ತಿಳದು ಬರಬೇಕಿದೆ.

Next Story

RELATED STORIES