Top

ಕಿಡ್ನಾಪ್ ಮಾಡಿ ಮಗು ಕೊಂದವನ ಬಂಧನ

ಕಿಡ್ನಾಪ್ ಮಾಡಿ ಮಗು ಕೊಂದವನ ಬಂಧನ
X

ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ ನಂತರ ನೀರಿನ ಡ್ರಮ್​ನಲ್ಲಿ ಮಳುಗಿಸಿ ಕೊಂದಿದ್ದ ಆರೋಪಿಯನ್ನು ಬೆಂಗಳೂರಿನ ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

ಎರಡೂವರೆ ವರ್ಷದ ಶ್ಯಾಮವೇಲು ಎಂಬ ಬಾಲಕನನ್ನು ಕೊಂದು ಬೆಳ್ಳಂದೂರು ಕೆರೆಗೆ ಬಿಸಾಕಿದ್ದ ಭೀಮಣ್ಣ ಗಾರ್ಡನ್ ನಿವಾಸಿ ಆರ್ಮುಗಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪತ್ನಿ ಚೈತ್ರಾ ಹಾಗೂ ಮಗುವಿನ ಸೋದರ ಮಾವನ ನಡುವೆ ಅಕ್ರಮ ಸಂಬಂಧವಿತ್ತು. ಇದೇ ವಿಚಾರಕ್ಕೆ ಗಲಾಟೆಯಾಗುತ್ತಿದ್ದು, ಪತ್ನಿ ಚೈತ್ರಾ ಮಕ್ಕಳೊಂದಿಗೆ ತವರು ಮನೆ ಸೇರಿದ್ದಳು. ತನ್ನ ಸಂಸಾರ ಹಾಳಾಗಲು ಮಾವನೇ ಕಾರಣ ಎಂದು ದ್ವೇಷ ಸಾಧಿಸುತ್ತಿದ್ದ ಆರೋಪಿ,

ಮಗುವಿನ ಮಾವ ಮಣಿಪಾಲ್ ಗೆ ಬುದ್ದಿ ಕಲಿಸಲು ಮಗುವನ್ನು ಕಿಡ್ನಾಪ್ ಮಾಡಿ ಮನೆಯ ನೀರಿನ ಡ್ರಮ್ರ್ ನಲ್ಲಿ ಹಾಕಿ ಕೊಲೆ ಮಾಡಿದನ್ನು ಬಳಿಕ ಚೀಲವೊಂದರಲ್ಲಿಟ್ಟು ಮಗುವನ್ನ ಬೆಳ್ಳಂಡೂರು ಕೆರೆಗೆ ಹಾಕಿದ್ದ

ಮಗುವಿನ ತಾಯಿ ಅಭಿರಾಮಿ ಮಗು ಕಾಣೆಯಾಗಿರುವ ಆಗಿರುವ ಬಗ್ಗೆ ದೂರು ನೀಡಿದರು. ದೂರು ದಾಖಲಿಸಿಕೊಂಡ ಅಶೋಕನಗರ ಪೊಲೀಸರು, ಮಗುವಿನ ಮನೆ ಮತ್ತು ರಸ್ತೆಯ ಸಿಸಿಟಿವಿ ಪರಿಶೀಲನೆ ನಡೆಸಿದರು, ಈ ವೇಳೆ ವ್ಯಕ್ತಿಯೊರ್ವ ಬೈಕ್ ನಲ್ಲಿ ಚೀಲ ಕೊಂಡೊಯ್ಯುತ್ತಿರುವುದು ಬೆಳಕಿಗೆ ಬಂದಿತ್ತು. ನಂತರ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಆರ್ಮುಗಂ ಬಂಧನ ಮಾಡಲಾಯಿತು.

ಆರೋಪಿ ವಿಚಾರಣೆ ವೇಳೆ ಕಿಡ್ನಾಪ್ ಮಾಡಿ‌ ಕೊಲೆ ಮಾಡಿರುವುದನ್ನು ತಪ್ಪೊಪ್ಪಿಕೊಂಡಿದ್ದು ಸದ್ಯ ಮಗುವಿನ ಮೃತದೇಹಕ್ಕಾಗಿ ಕೆರೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

Next Story

RELATED STORIES