ಹಿರಿಯ ನಟಿ ಲೀಲಾವತಿ- ವಿನೋದ್ ಆಸ್ತಿ ಮಾರಾಟಕ್ಕೆ ಚಿಂತನೆ

X
TV5 Kannada9 Oct 2018 10:06 AM GMT
ನೆಲಮಂಗಲ: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಹಾಗೂ ಪತ್ರ ವಿನೋದ್ ರಾಜ್ ಜೀವನದಲ್ಲಿ ಕಷ್ಟ ಮೇಲೆ ಕಷ್ಟಗಳು ಬರುತ್ತಿದ್ದು, ಚೆನ್ನೈನಲ್ಲಿರುವ ಆಸ್ತಿ ಮಾರಾಟಕ್ಕೆ ಮುಂದಾಗಿದ್ದಾರೆ.
ಇತ್ತೀಚೆಗೆ ಕೂಲಿ ಆಳುಗಳಿಗೆ ಸಂಬಳ ನೀಡಲು ಕಾರಿನಲ್ಲಿ ಇಟ್ಟುಕೊಂಡಿದ್ದ ಒಂದು ಲಕ್ಷ ಹಣವನ್ನು ಕಳೆದುಕೊಂಡಿದ್ದರು. ಪೊಲೀಸರಿಗೆ ದೂರು ನೀಡಿದ್ದರೂ ಇದುವರೆಗೂ ಯಾವುದೇ ಪ್ರಯೋಜನ ಆಗಿಲ್ಲ.
ನೆಲಮಂಗಲದ ತಮ್ಮ ತೋಟದಲ್ಲಿ ಕೃಷಿ ಮಾಡಿಕೊಂಡು ಅಮ್ಮ- ಮಗ ಜೀವನ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಕೃಷಿಯಲ್ಲಿ ಕೂಡ ಕೈ ಸುಟ್ಟುಕೊಂಡಿದ್ದರಿಂದ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಣವನ್ನು ಹೊಂದಿಸಲು ಚೆನ್ನೈನಲ್ಲಿರುವ ಆಸ್ತಿ ಮಾರಲು ಮುಂದಾಗಿದ್ದಾರೆ.
ಅನಿವಾರ್ಯ ಕಾರಣದಿಂದ ತಾಯಿ ಮಾಡಿಟ್ಟ ತೋಟ ಮಾರಾಟ ಮಾಡುತ್ತೀದ್ದೆನೆ ಚೆನ್ನೈನಲ್ಲಿ ಇರುವ 5 ಎಕರೆ ತೋಟ ಮಾರಾಟ ಮಾಡಲು ಮುಂದಾಗಿದ್ದೇನೆ ಎಂದು ವಿನೋದ್ ರಾಜ್ ಅಸಹಾಯಕತೆ ಹೊರಹಾಕಿದ್ದಾರೆ.
Next Story