Top

29 ಮಂದಿಗೆ ಜಿಕಾ ಸೋಂಕು: ವರದಿ ಕೇಳಿದ ಪ್ರಧಾನಿ ಕಚೇರಿ

29 ಮಂದಿಗೆ ಜಿಕಾ ಸೋಂಕು: ವರದಿ ಕೇಳಿದ ಪ್ರಧಾನಿ ಕಚೇರಿ
X

ರಾಜಸ್ಥಾನದ ಜೈಪುರದಲ್ಲಿ ಜೀಕಾ ಸೋಂಕು ಭೀತಿ ಹರಡಿದ್ದು, 29 ಮಂದಿಯಲ್ಲಿ ಈ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವರದಿ ಕೇಳಿದ್ದಾರೆ.

ಜೈಪುರದಲ್ಲಿ ಜೀಕಾ ಸೋಂಕು ಹರಡುತ್ತಿದ್ದಂತೆ ಬಿಹಾರದ ಎಲ್ಲಾ 38 ಜಿಲ್ಲೆಗಳಲ್ಲಿ ಕೂಡ ಮುನ್ನೆಚ್ಚರಿಕೆಗೆ ಸೂಚಿಸಲಾಗಿದೆ. ವಿದ್ಯಾರ್ಥಿಯೊಬ್ಬ ರಾಜಸ್ಥಾನದ ಜೈಪುರ ಹಾಗೂ ಬಿಹಾರ ಎರಡೂ ಕಡೆ ಭೇಟಿ ನೀಡಿದ್ದು, ಈತನಿಂದ ಈ ರೋಗ ಹರಡಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿದ್ದು, ಆತನ ಕುಟುಂಬದ ಸದಸ್ಯರ ಮೇಲೆ ನಿಗಾ ವಹಿಸಲಾಗಿದೆ.

ಜೈಪುರದಲ್ಲಿ ಕಾಣಿಸಿಕೊಂಡ ಜೀಕಾ ವೈರಸ್ ಬಗ್ಗೆ ಸಮಗ್ರ ವರದಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಕಚೇರಿ ಕೇಳಿದೆ ಎಂದು ರಾಜಸ್ಥಾನದ ಹಿರಿಯ ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

7 ಸದಸ್ಯರ ಹಿರಿಯ ವೈದ್ಯಾಧಿಕಾರಿಗಳ ತಂಡ ಜೈಪುರ ಶಾಸ್ತ್ರೀನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಈ ಬಡಾವಣೆಯಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದೆ. ರಾಷ್ಟ್ರೀಯ ವಿಪತ್ತು ನಿಯಂತ್ರಣ ಪಡೆಯ ಕಂಟ್ರೋಲ್ ರೂಮ್ ಮೂಲಕ ಪ್ರತಿ ಕ್ಷಣದ ಮಾಹಿತಿಯನ್ನು ಸಂಗ್ರಹಿಸುತ್ತಿದೆ.

Next Story

RELATED STORIES