ಬಕೆಟ್ಗೆ ಬಿದ್ದು 1 ವರ್ಷದ ಮಗು ದುರ್ಮರಣ..!

X
TV5 Kannada9 Oct 2018 3:33 PM GMT
ಯಾದಗಿರಿ: ಆಟವಾಡಲು ಹೋಗಿದ್ದ 1 ವರ್ಷದ ಬಾಲಕಿಯೊಬ್ಬಳು ನೀರಿನ ಬಕೆಟ್ನಲ್ಲಿ ಮುಳುಗಿ ಸಾವನ್ನಪ್ಪಿರೋ ಹೃದಯ ವಿದ್ರಾವಕ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ನಡೆದಿದೆ.
1 ವರ್ಷ ವಯಸ್ಸಿನ ನಿಖಿತಾ ಸಂಜೆ ಆರು ಗಂಟೆ ಸಮಯದಲ್ಲಿ ಎಂದಿನಂತೆ ಆಟವಾಡುತ್ತಿದ್ದಳು. ಆದ್ರೆ ದುರಾದೃಷ್ಟವಶಾತ್, ನೀರಿನ ಬಕೆಟ್ಗೆ ಮುಗುಚಿಬಿದ್ದಿದ್ದು ಉಸಿರುಗಟ್ಟಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಳು. ಈ ವೇಳೆ ಸ್ಥಳೀಯರು ಗಮನಿಸಿ ಮಗುವನ್ನು ತಕ್ಷಣ ಶಹಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ರು. ಆದ್ರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ನಿಖಿತಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಮಗುವಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿರುವುದೇ ಸಾವಿಗೆ ಕಾರಣ ಎಂದು ಪೋಷಕರು, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಸಹಕಾರದೊಂದಿಗೆ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
Next Story