50 ಲಕ್ಷ ರೂ. ಕಳೆದುಕೊಂಡ ಯುವಿ ತಾಯಿ

X
TV5 Kannada8 Oct 2018 7:43 AM GMT
ಟೀಂ ಇಂಡಿಯಾದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅವರ ತಾಯಿ ಶಬನಮ್ ಕೌರ್ ವಂಚನೆ ಮಾಡುವ ಸ್ಕೀಂವೊಂದಕ್ಕೆ ಹೂಡಿಕೆ ಮಾಡಿ, ಸುಮಾರು 50 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಜಾರಿ ನಿರ್ದೇಶನಾಲಯ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದೆ.
ಯುವರಾಜ್ ತಾಯಿ ಶಬನಮ್ ವಂಚನೆ ಮಾಡಿರುವ ಸಾಧನಾ ಎಂಟರ್ಪ್ರೈಸಸ್ಗೆ ಸುಮಾರು ಒಂದು ಕೋಟಿ ರೂಪಾಯಿ ಹಣ ಹೂಡಿಕೆ ಮಾಡಿದ್ದರು.
ಸಾಧನಾ ಎಂಟರ್ಪ್ರೈಸಸ್ ಶೇ.84 ರಷ್ಟು ವಾರ್ಷಿಕ ಹಣವನ್ನ ನೀಡುವುದಾಗಿ ಭರವಸೆ ನೀಡಿತ್ತು.ಅದ್ಹೇಗೋ ಶಬನಾಮ್ 50 ಲಕ್ಷರೂಪಾಯಿ ಹಣವನ್ನ ಪಡೆದಿದ್ದರು.
ಆದರೂ ನಂತರದ ದಿನಗಳಲ್ಲಿ ಶಬನಮ್ ಫಂಡ್ಗಳನ್ನ ನೀಡುತ್ತಾ ಬಂದಿದ್ದರು.ಇದೀಗ ಯುವರಾಜ್ ತಾಯಿ ತಮಗೆ ವಂಚನೆಯಾಗಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಿಸಿದ್ದಾರೆ.
Next Story