Top

ಪಾನಿಪುರಿ ವ್ಯಾಪಾರಿಯ ಮಗನಿಗೆ ಏಷ್ಯಾಕಪ್‍ನಲ್ಲಿ ಮ್ಯಾನ್ ಆಫ್ ದಿ ಸೀರೀಸ್ ಗರಿ

ಪಾನಿಪುರಿ ವ್ಯಾಪಾರಿಯ ಮಗನಿಗೆ ಏಷ್ಯಾಕಪ್‍ನಲ್ಲಿ ಮ್ಯಾನ್ ಆಫ್ ದಿ ಸೀರೀಸ್ ಗರಿ
X

ನಿನ್ನೆಯಷ್ಟೇ ಮುಕ್ತಾಯವಾದ ಅಂಡರ್ 19 ಏಷ್ಯಾಕಪ್ ಟೂರ್ನಿಯಲ್ಲಿ ಮ್ಯಾನ್ ಆಫ್ ದಿ ಸಿರೀಸ್ ಗೆದ್ದ ಯಶಸ್ವಿ ಜೈಸ್ವಾಲ್ ಭಾರತ ಕ್ರಿಕೆಟ್ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾನೆ.

ಯಶಸ್ವಿ ಜೈಸ್‍ವಾಲ್ ಒಬ್ಬ ಸಾಧಾರಣ ಪಾನಿಪುರಿ ಮಾರುವ ವ್ಯಾಪರಿಯ ಮಗ. ಕಳೆದ ವರ್ಷ ನಡೆದ ಅಂಡರ್ 19 ವಿಶ್ವಕಪ್ ಗೆದ್ದು ಕೊಟ್ಟ ಪೃಥ್ವಿ ಶಾ ತಂಡದಲ್ಲಿ ಆಡಿದ್ದ ಆಟಗಾರ.

ಜೈಸ್‍ವಾಲ್ ತಂದೆ ಪಾನಿಪುರಿ ಮಾರಿ ಕಷ್ಟದ ಬದುಕು ನಡೆಸುತ್ತಿದ್ದಾರೆ. ಬಾಂಗ್ಲಾದಲ್ಲಿ ನಡೆದ ಈ ಬಾರಿ ಏಷ್ಯಾಕಪ್ ಗೆಲ್ಲುವಲ್ಲಿ ಯಶಸ್ವಿನಿ ಜೈಸ್‍ವಾಲ್ ನಿರ್ಣಾಯಕ ಪಾತ್ರವಹಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಶತಕ ಮತ್ತು ಫೈನಲ್ ಪಂದ್ಯದಲ್ಲಿ ಅರ್ಧ ಶತಕ ಗಳಿಸಿ ಗೆಲುವಿನ ರೂವಾರಿಯಾಗಿದ್ದಾರೆ.

ಆಡಿದ ನಾಲ್ಕು ಪಂದ್ಯಗಳಿಂದ ಜೈಸ್‍ವಾಲ್ ರನ್ ಮಳೆ ಸುರಿಸಿ ಒಂದು ಶತಕ, 2 ಅರ್ಧ ಶತಕ ಸೆರಿ ಬರೋಬ್ಬರಿ 318 ರನ್ ಗಳಿಸಿದ್ದಾರೆ.

ಜೈಸ್ವಾಲ್ ಕಳೆದ ಜೂನ್‍ನಲ್ಲಿ ಶ್ರೀಲಂಕಾ ಪ್ರವಾಸಕ್ಕೆ ತೆರೆಳುವ ಮುನ್ನ ಅರ್ಜುನ್ ತೆಂಡೂಲ್ಕರ್ ಸಹಾಯದಿಂದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನ ಭೇಟಿ ಮಾಡಿ ಬ್ಯಾಟ್‍ವೊಂದನ್ನ ಉಡುಗೊರೆಯಾಗಿ ಪಡೆದಿದ್ದರು.

Next Story

RELATED STORIES