Top

ಸತ್ಯ ಯಾವತ್ತಿದ್ದರೂ ಒಂದೇ: ನಾನಾ ಪಾಟೇಕರ್​

ಸತ್ಯ ಯಾವತ್ತಿದ್ದರೂ ಒಂದೇ: ನಾನಾ ಪಾಟೇಕರ್​
X

ನವದೆಹಲಿ: ನಟಿ ತನುಶ್ರೀ ಮಾಡಿರುವ ಆರೋಪ 10 ವರ್ಷ ಹಳೆಯದು. ಸತ್ಯ ಅವತ್ತಿಗೂ ಒಂದೆ. ಇವತ್ತಿಗೂ ಒಂದೆ. ಬದಲಾಗಲ್ಲ. ವಕೀಲರು ಈ ಬಗ್ಗೆ ಮಾಧ್ಯಮಗಳ ಮುಂದೆ ಹೋಗಬೇಡಿ ಎಂದು ಸಲಹೆ ನೀಡಿದ್ದಾರೆ ಎಂದು ಬಹುಭಾಷಾ ನಟ ನಾನಾ ಪಾಟೇಕರ್ ಹೇಳಿದ್ದಾರೆ.

https://www.facebook.com/tv5kannadatv/videos/2249034778501679/

10 ವರ್ಷಗಳ ಹಿಂದೆ ನಾನಾ ಪಾಟೇಕರ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ನಟಿ ತನುಶ್ರೀ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ನಾನಾ ಪಾಟೇಕರ್ ಲೀಗಲ್ ನೋಟಿಸ್ ನೀಡಿದರೆ ಪ್ರತಿಯಾಗಿ ತನುಶ್ರೀ ಪೊಲೀಸರಿಗೆ ದೂರು ನೀಡಿದ್ದರು.

ಸೋಮವಾರ ಮಧ್ಯಮಗಳಿಗೆ ಘಟನೆ ಬಗ್ಗೆ ಸ್ಪಷ್ಟನೆ ನೀಡುವುದಾಗಿ ನಾನಾ ಪಟೇಕರ್ ಹೇಳಿದ್ದರು. ಆದರೆ ಮಧ್ಯಮ ಬಳಿ ಬರುತ್ತಿದ್ದಂತೆ ವಕೀಲರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಬೇಡಿ ಎಂದು ಸಲಹೆ ನೀಡಿದ್ದಾರೆ. ಹಾಗಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ತನುಶ್ರೀ ಮಾಡಿರುವ ಆರೋಪ ಸುಳ್ಳು. ನಾನು ಯಾವ ತಪ್ಪನ್ನು ಮಾಡಿಲ್ಲ. ಸತ್ಯ ಒಂದಲ್ಲ ಒಂದು ದಿನ ಗೊತ್ತಾಗುತ್ತಾದೆ. ಸತ್ಯ ಯಾವತ್ತೂ ಬದಲಾಗುವುದಿಲ್ಲ ಎಂದು ನಾನಾ ಹೇಳಿದರು.

ತನುಶ್ರೀ 2008ರಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರಾದರೂ ನಾನಾ ಪಾಟೇಕರ್ ಅವರ ಹೆಸರನ್ನು ಉಲ್ಲೇಖಿಸಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ತನುಶ್ರೀ, ನಾನು ಚಿತ್ರದಿಂದ ಹೊರಬಂದ 10 ವರ್ಷಗಳ ವರೆಗೆ ಈ ನೋವಿನಿಂದ ಹೊರಗೆ ಬಂದಿರಲಿಲ್ಲ. ಹಾಗಾಗಿ ನನಗೆ ಸಮಯ ಬೇಕಾಯಿತು ಎಂದಿದ್ದಾರೆ.

Next Story

RELATED STORIES