ತಮಿಳಿಗನಿಂದ ಕಿರುಕುಳ ಹಿನ್ನಲೆ, ಕನ್ನಡಿಗ ನೇಣಿಗೆ ಶರಣು

X
TV5 Kannada8 Oct 2018 1:47 AM GMT
ಹಾಸನ: ತಮಿಳಿಗನೊಬ್ಬ ನಮ್ಮ ನೆಲದಲ್ಲೇ ಇದ್ದುಕೊಂಡು, ಕನ್ನಡಿಗನಿಗೆ ತೊಂದರೆ ನೀಡಿದ್ದು, ಮನನೊಂದ ಕನ್ನಡಿಗ ನೇಣಿಗೆ ಶರಣಾದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ನಗರದ ಬಸೆಟ್ಟಿಕೊಪ್ಪಲಿನಲ್ಲಿ ಈ ದುರಂತ ಸಂಭವಿಸಿದ್ದು, ಹೊಳೆನರಸೀಪುರ ತಾಲೂಕು ಹಾಲಗೊಂಡನಹಳ್ಳಿಯ ಸೇವಾರ್ಥ್ ಎಂಬ ಯುವಕ ಮೃತ ದುರ್ದೈವಿಯಾಗಿದ್ದಾನೆ.
ಸೇವಾರ್ಥ್ ಪಿಎಸ್ಆರ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇದರ ವ್ಯವಸ್ಥಾಪಕನಾಗಿದ್ದ ತಮಿಳಿಗ ಸೀರೆ ವ್ಯಾಪಾರಿಯೊಬ್ಬ, ಸೇವಾರ್ಥ್ ಎರಡು ದಿನ ರಜೆ ತೆಗೆದುಕೊಂಡಿದ್ದ ಎಂಬ ಕಾರಣಕ್ಕೆ, ಕಂಪನಿಯಿಂದಲೇ ಹೊರಹಾಕಿದ್ದಾನೆ.
ಇದರಿಂದ ಮನನೊಂದ ಸೇವಾರ್ಥ್ ಹಾಸನ ನಗರದ ಬಸೆಟ್ಟಿಕೊಪ್ಪಲಿನ ತನ್ನ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾನೆ. ಅದಕ್ಕೂ ಮೊದಲು ಪಿಎಸ್ಆರ್ ಕಂಪನಿಯ ವಿರುದ್ಧ ವೀಡಿಯೋ ರೆಕಾರ್ಡ್ ಮಾಡಿ, ಗೆಳೆಯರಿಗೆ ಕಳುಹಿಸಿದ್ದಾನೆ.
Next Story